ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಬಿಸಿಸಿಐನಿಂದ 'ಆಶಯ ಪತ್ರ' ಸ್ವೀಕರಿಸಿದ ಯುಎಇ

UAE confirms receiving BCCI Letter of Intent to host IPL 2020

ಮುಂಬೈ, ಜುಲೈ 28: ಇಂಡಿಯನ್ ಪ್ರೀಮಿಯರ್ ಲೀಗ್ 2020ನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಸುವ ಸಲುವಾಗಿ ಬಿಸಿಸಿಐ ತನ್ನ ಔಪಚಾರಿಕ ಕಾರ್ಯಗಳನ್ನು ಪೂರ್ಣಗೊಳಿಸಿದೆ. ಐಪಿಎಲ್ ಅನ್ನು ಯುಎಇಯಲ್ಲಿ ನಡೆಸುವಂತೆ ಬಿಸಿಸಿಐನಿಂದ ಬಂದಿರುವ ಅಧಿಕೃತ ಪತ್ರವನ್ನು ಸ್ವೀಕರಿಸಿರುವುದಾಗಿ ಯುಎಇ ಸೋಮವಾರ ಖಾತರಿಪಡಿಸಿದೆ.

2019ರ ವಿಶ್ವಕಪ್‌ನಲ್ಲಿ ಭಾರತದ ಸೋಲಿಗೆ ಸ್ವಾರಸ್ಯಕರ ಕಾರಣ ಹೇಳಿದ ಚೋಪ್ರಾ2019ರ ವಿಶ್ವಕಪ್‌ನಲ್ಲಿ ಭಾರತದ ಸೋಲಿಗೆ ಸ್ವಾರಸ್ಯಕರ ಕಾರಣ ಹೇಳಿದ ಚೋಪ್ರಾ

'ನಾವು ಬಿಸಿಸಿಐನಿಂದ ಅಧಿಕೃತ ಆಶಯ ಪತ್ರ ಸ್ವೀಕರಿಸಿದ್ದೇವೆ. ಇನ್ನು ನಾವು ಭಾರತೀಯ ಸರ್ಕಾರದಿಂದ ಅನುಮತಿಗಾಗಿ ಕಾಯುತ್ತಿದ್ದೇವೆ. ಅನುಮತಿ ದೊರೆಯುತ್ತಲೇ ಐಪಿಎಲ್ ಬಗೆಗಿನ ಅಂತಿಮ ಒಪ್ಪಂದ ಮುಗಿಸಲಿದ್ದೇವೆ,' ಎಂದು ಎಮಿರೇಟ್ಸ್ ಕ್ರಿಕೆಟ್ ಬೋರ್ಡ್‌ನ ಮುಖ್ಯ ಕಾರ್ಯದರ್ಶಿ ಮುಬಾಶ್ಶೀರ್ ಉಸ್ಮಾನಿ ಹೇಳಿದ್ದಾರೆ.

ಐಸಿಸಿ ಟೆಸ್ಟ್ ಚಾಂಪಿಯನ್‌ಷಿಪ್‌: ಭಾರತ ನಂ.1 ತಂಡ, ಬ್ರಾಡ್ ನಂ.1 ಬೌಲರ್!ಐಸಿಸಿ ಟೆಸ್ಟ್ ಚಾಂಪಿಯನ್‌ಷಿಪ್‌: ಭಾರತ ನಂ.1 ತಂಡ, ಬ್ರಾಡ್ ನಂ.1 ಬೌಲರ್!

ನಗದು ಶ್ರೀಮಂತ ಟೂರ್ನಿ ಐಪಿಎಲ್ ಅನ್ನು ಭಾರತದಿಂದ ಯುಎಇಗೆ ಸ್ಥಳಾಂತರಿಸಿರುವುದಕ್ಕೆ ಭಾರತ ಸರ್ಕಾರದ ಅನುಮತಿ ದೊರೆತಿರುವುದಾಗಿ ಬಿಸಿಸಿಐನಿಂದ ಖಾತರಿಪತ್ರ ಬರುವುದನ್ನು ಯುಎಇ ಎದುರು ನೋಡುತ್ತಿದೆ. ಎರಡೂ ಬೋರ್ಡ್‌ಗಳು ಈ ಬಗ್ಗೆ ಕಾರ್ಯ ನಿರ್ವಹಿಸುತ್ತಿವೆ.

ಬಿಸಿಸಿಐ ವಿರುದ್ಧ ಅಸಮಾಧಾನ ಹೊರಹಾಕಿದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ಬಿಸಿಸಿಐ ವಿರುದ್ಧ ಅಸಮಾಧಾನ ಹೊರಹಾಕಿದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್

13ನೇ ಆವೃತ್ತಿಯ ಐಪಿಎಲ್ ಯುಎಇಯಲ್ಲಿ ಸೆಪ್ಟೆಂಬರ್ 19ರಿಂದ ನವೆಂಬರ್ 8ರ ವರೆಗೆ ನಡೆಯಲಿರುವುದಾಗಿ ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಆದರೆ ಬಿಸಿಸಿಐ ಇನ್ನೂ ಅಧಿಕೃತವಾಗಿ ಐಪಿಎಲ್ ವೇಳಾಪಟ್ಟಿ ಬಿಡುಗಡೆಗೊಳಿಸಿಲ್ಲ. ಈ ವಾರದಲ್ಲಿ ಐಪಿಎಲ್ ಅಧಿಕೃತ ವೇಳಾಪಟ್ಟಿ ಪ್ರಕಟವಾಗುವ ಸಾಧ್ಯತೆಯಿದೆ.

Story first published: Tuesday, July 28, 2020, 10:29 [IST]
Other articles published on Jul 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X