ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ ಮತ್ತು ರವಿ ಶಾಸ್ತ್ರಿ ಮಾಡಿದ್ದು ಮಹಾ ಪ್ರಮಾದ: ಮಣಿಂದರ್ ಸಿಂಗ್

Virat Kohli and Ravi Shastri make such a huge blunder: Maninder Singh criticises

ಲೀಡ್ಸ್, ಆಗಸ್ಟ್ 26: ಐದು ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಹೀನಾಯ ಪ್ರದರ್ಶನ ನೀಡಿದೆ. ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 78 ರನ್‌ಗಳಿಗೆ ಆಲೌಟ್ ಆಗುವ ಮೂಲಕ ತಂಡ ಹೀನಾಯ ಸ್ಥಿತಿಯಲ್ಲಿದೆ. ಟೀಮ್ ಇಂಡಿಯಾ ನೀಡಿದ ಈ ಪ್ರದರ್ಶನಕ್ಕೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದೆ. ಈ ಸಂದರ್ಭದಲ್ಲಿ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ಹಾಗೂ ರವಿ ಶಾಸ್ತ್ರಿ ತೆಗೆದುಕೊಂಡ ಒಂದು ನಿರ್ಧಾರಕ್ಕೆ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಮಣಿಂದರ್ ಸಿಂಗ್ ಟೀಕಿಸಿದ್ದಾರೆ.

ಮಣಿಂದರ್ ಹೀಗೆ ತಂಡದ ನಾಯಕ ಹಾಗೂ ಕೋಚ್ ಬಗ್ಗೆ ಪ್ರತಿಕ್ರಿಯಿಸಲು ಕಾರಣ ಟಾಸ್ ಗೆದ್ದ ಭಾರತ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಿರ್ಧಾರದ ವಿಚಾರವಾಗಿ. ತಂಡದ ನಾಯಕ ಹಾಗೂ ಕೋಚ್ ತೆಗೆದುಕೊಂಡ ಈ ನಿರ್ಧಾರ ಅತಿ ದೊಡ್ಡ ಪ್ರಮಾದ ಎಂದಿದ್ದಾರೆ ಮಣಿಂದರ್ ಸಿಂಗ್‌. ನಾಯಕ ಹಾಗೂ ಕೋಚ್‌ಗೆ ಅಲ್ಲಿನ ಕಂಡೀಶನ್ ಬಗ್ಗೆ ಹಾಗೂ ತಂಡದ ಬ್ಯಾಟಿಂಗ್ ಫಾರ್ಮ್ ಬಗ್ಗೆ ಅರಿವಿದ್ದೂ ಈ ನಿರ್ಧಾರವನ್ನು ಅದು ಹೇಗೆ ತೆಗೆದುಕೊಂಡರು ಎಂದಿದ್ದಾರೆ ಮಣಿಂದರ್ ಸಿಂಗ್.

ಈ ಬಗ್ಗೆ ಕ್ರಿಕ್‌ಇನ್ಫೋ ಜೊತೆಗೆ ಮಾತನಾಡಿದ ಮಣಿಂದರ್ ಸಿಂಗ್ "ಸ್ಟುವರ್ಟ್ ಬ್ರಾಡ್ ಕೂಡ ಮೊದಲ ನಾಲ್ಕು ಗಂಟೆಗಳ ಕಾಲ ಮಾತ್ರ ಚೆಂಡು ಅದ್ಭುತವಾಗಿ ವರ್ತಿಸಲಿದೆ. ಈ ಅವಧಿಯಲ್ಲಿ ಬೌಲಿಂಗ್ ಮಾಡಲು ಪ್ರಶಸ್ತವಾದ ಸಮಯ. ನಾನು ಕೂಡ ಟಾಸ್ ಗೆದ್ದ ನಂತರ ಬ್ಯಾಟಿಂಗ್ ಆಯ್ಕೆ ಂಆಡಿಕೊಳ್ಳುವುದು ಸೂಕ್ತ ಎಂದು ಭಾವಿದಿದ್ದೆ. ಆದರೆ ನೀವು ಕಂಡೀಶನ್ ಬಗ್ಗೆಯೂ ಗಮನಹರಿಸಬೇಕಾಗುತ್ತದೆ. ಮೋಡ ಮುಸುಕಿದ ವಾತಾವರಣವಿದ್ದ ಸಂದರ್ಭದಲ್ಲಿ ಹಿಂದಿನ ರಾತ್ರಿ ತೆಗೆದುಕೊಂಡಿದ್ದ ನಿರ್ಧಾರಗಳನ್ನು ಬದಲಾವಣೆ ಮಾಡಿಕೊಳ್ಳಲೇಬೇಕಾಗುತ್ತದೆ" ಎಂದಿದ್ದಾರೆ ಮಣಿಂದರ್ ಸಿಂಗ್.

ಭಾರತ vs ಇಂಗ್ಲೆಂಡ್ ತೃತೀಯ ಟೆಸ್ಟ್: ತಾನು ಮಾಡಿದ ತಪ್ಪಿನ ಕುರಿತು ಮಾತನಾಡಿದ ರಿಷಭ್ ಪಂತ್ಭಾರತ vs ಇಂಗ್ಲೆಂಡ್ ತೃತೀಯ ಟೆಸ್ಟ್: ತಾನು ಮಾಡಿದ ತಪ್ಪಿನ ಕುರಿತು ಮಾತನಾಡಿದ ರಿಷಭ್ ಪಂತ್

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ನೆಲದಲ್ಲಿ ನಾಯಕನಾಗಿ ಮೊದಲ ಬಾರಿಗೆ ಈ ಪಂದ್ಯದಲ್ಲಿ ಟಾಸ್ ಗೆದ್ದಿದ್ದಾರೆ. ಆದರೆ ಬ್ಯಾಟಿಂಗ್ ಆಯ್ಕೆ ಮಾಡಿದ ನಂತರ ತಂಡ ನೀಡಿದ ಪ್ರದರ್ಶನ ಆಘಾತಕಾರಿಯಾಗಿತ್ತು. ನಾಯಕ ಕೊಹ್ಲಿ 7 ರನ್‌ಗಳಿಗೆ ಔಟ್ ಆಗಿದ್ದರು. ಇಡೀ ತಂಡ 78 ರನ್‌ಗಳಿಗೆ ಆಲೌಟ್ ಆಗಿದೆ. ಹೆಡಿಂಗ್ಲೆ ಪಿಚ್‌ನ ಲಾಭವನ್ನು ಇಂಗ್ಲೆಂಡ್ ವೇಗಿಗಳು ಸಮರ್ಥವಾಗಿ ಬಳಸಿಕೊಂಡರು. ಪಿಚ್‌ನ ತಾಜಾತನವನ್ನು ಉಪಯೋಗಿಸಿ ಟೀಮ್ ಇಂಡಿಯಾ ಆಟಗಾರರು ತಪ್ಪುಗಳನ್ನು ಎಸಗುವಂತೆ ಮಾಡಿ ಯಶಸ್ಸನ್ನು ಸಾಧಿಸಿದ್ದಾರೆ ಇಂಗ್ಲೆಂಡ್ ವೇಗಿಗಳು. ಈ ಮೂಲಕ ಆತಿಥೇಯ ತಂಡ ಹೆಡಿಂಗ್ಲೆ ಟೆಸ್ಟ್‌ನಲ್ಲಿ ಹಿಡಿತ ಸಾಧಿಸಿದೆ.

ಕಠಿಣ ಟಾಸ್ಕ್ ಮಾಸ್ಟರ್ ರವಿ ಶಾಸ್ತ್ರಿ: "ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಹಿನ್ನಡೆಯನ್ನು ಕಂಡ ನಂತರ ಮೊದಲ ದಿನದಾಟದ ಬಳಿಕ ತಂಡದ ದೊಡ್ಡ ಮೀಟಿಂಗ್‌ಅನ್ನು ಕೋಚ್ ಕರೆಯುತ್ತಾರೆ. ಕಠಿಣ ಟಾಸ್ಕ್ ಮಾಸ್ಟರ್ ಆಗಿರುವ ಶಾಸ್ತ್ರಿ ಈ ಸಂದರ್ಭದಲ್ಲಿ ತಂಡದ ಎಲ್ಲಾ ಆಟಗಾರರಿಗೆ ಸ್ಪೂರ್ತಿಯನ್ನು ತುಂಬಲಿದ್ದಾರೆ. ಈ ಮೂಲಕ ಆಂಗಿಕ ಭಾಷೆಯಲ್ಲಿ ಸಕಾರಾತ್ಮಕ ಬದಲಾವಣೆಯೊಂದಿಗೆ ಗುರುವಾರ ಕಣಕ್ಕಿಳಿಯಲಿದ್ದಾರೆ. ಎರಡನೇ ದಿನ ಟೀ ವಿರಾಮಕ್ಕೂ ಮುನ್ನ ಇಂಗ್ಲೆಂಡ್ ತಂಡವನ್ನು ಆಲೌಟ್ ಮಾಡುವ ಮೂಲಕ ಮ್ಯಾಚ್ ವಿನ್ನಿಂಗ್ ಮುನ್ನಡೆಯನ್ನು ಸಾಧಿಸಲು ಅವಕಾಶ ಮಾಡಿಕೊಡದಿದ್ದರೆ ಭಾರತ ತಂಡಕ್ಕೆ ಉತ್ತಮ ಅವಕಾಶಗಳು ಇದೆ" ಎಂದು ಮಣಿಂದರ್ ಸಿಂಗ್ ಹೇಳಿದ್ದಾರೆ.

ಸಿರಾಜ್ ಹಾಗು ಕೊಹ್ಲಿ ಸೇರಿ ಪಂತ್ ಮಾತಿಗೆ ವಿರುದ್ಧವಾಗಿ ನಡೆದಾಗ | Oneindia Kannada

ಕಮ್‌ಬ್ಯಾಕ್ ಮಾಡಲು ತಂಡಕ್ಕೆ ಇನ್ನೂ ಇದೆ ಅವಕಾಶ: ಇನ್ನು ಇದೇ ಸಂದರ್ಭದಲ್ಲಿ ಮಣಿಂದರ್ ಸಿಂಗ್ ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡಲು ಇನ್ನೂ ಉತ್ತಮ ಅವಕಾಶವಿದೆ ಎಂದಿದ್ದಾರೆ. "ನನ್ನ ಪ್ರಕಾರ ಟೆಸ್ಟ್ ಪಂದ್ಯ ಮುಕ್ತಾಯವಾಗುವವರೆಗೂ ಎರಡೂ ತಂಡಗಳಿಗೂ ಅವಕಾಶಗಳು ಇದ್ದೇ ಇದೆ. ಟೀಮ್ ಇಂಡಿಯಾ ಪರಿಸ್ಥಿತಿ ತನ್ನ ವಿರುದ್ಧವಾಗಿದ್ದಾಗ ಪ್ರತಿಬಾರಿಯೂ ತಿರುಗಿ ಬಿದ್ದಿದ್ದಾರೆ. ಅದನ್ನು ಇಲ್ಲಿಯೂ ಅವರು ಮಾಡುತ್ತಾರೆ ಎಂಬ ವಿಶ್ವಾಸವಿದೆ" ಎಂದಿದ್ದಾರೆ ಮಣಿಂದರ್ ಸಿಂಗ್.

Story first published: Friday, August 27, 2021, 12:49 [IST]
Other articles published on Aug 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X