ಕೊಹ್ಲಿ ಯಾಕೆ ವಿಶ್ವಶ್ರೇಷ್ಠ ಬ್ಯಾಟ್ಸ್‌ಮನ್‌ ಎಂಬುದಕ್ಕೆ ಕಾರಣ ಹೇಳಿದ ಪೈನ್

Virat Kohli ಯಾಕೆ ಶ್ರೇಷ್ಠ ಅನ್ನೋದಕ್ಕೆ ಕಾರಣ ಕೊಟ್ಟ ಆಸಿಸ್ ನಾಯಕ ಪೈನ್ | Oneindia Kannada

ಮೆಲ್ಬರ್ನ್: ಪ್ರಸ್ತುತ ದಿನಗಳಲ್ಲಿ ವಿಶ್ವದಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್‌ ಯಾರೆಂದು ಚರ್ಚೆಯಾಗುತ್ತಲೇಯಿದೆ. ಹೆಚ್ಚಿನವರು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ವಿಶ್ವಶ್ರೇಷ್ಠ ಎಂದು ಕರೆಯುತ್ತಿದ್ದರೆ, ಇನ್ನು ಕೆಲವರು ಪಾಕಿಸ್ತಾನ ನಾಯಕ ಬಾಬರ್ ಅಝಾಮ್, ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಹೆಸರುಗಳನ್ನು ಹೇಳುತ್ತಿದ್ದಾರೆ.

ಭಾರತದ ಈ ಯುವ ಆಟಗಾರನನ್ನು ಜೂನಿಯರ್ ಪೊಲಾರ್ಡ್ ಎಂದ ವಿರೇಂದ್ರ ಸೆಹ್ವಾಗ್ಭಾರತದ ಈ ಯುವ ಆಟಗಾರನನ್ನು ಜೂನಿಯರ್ ಪೊಲಾರ್ಡ್ ಎಂದ ವಿರೇಂದ್ರ ಸೆಹ್ವಾಗ್

ಆಸ್ಟ್ರೇಲಿಯಾ ಟೆಸ್ಟ್‌ ತಂಡದ ನಾಯಕ ಟಿಮ್ ಪೈನ್ ಕೂಡ ವಿರಾಟ್ ಕೊಹ್ಲಿ ವಿಶ್ವಶ್ರೇಷ್ಠ ಬ್ಯಾಟ್ಸ್‌ಮನ್‌ ಎಂದಿದ್ದಾರೆ. ತನ್ನೆಲ್ಲಾ ಸ್ಪರ್ಧಾಭಾವದಿಂದ ಕೊಹ್ಲಿ ನಿಮ್ಮೆಲ್ಲರನ್ನೂ ಮೀರಿಸಬಲ್ಲರು ಎಂಬಂತೆ ಪೈನ್ ಹೇಳಿಕೆ ನೀಡಿದ್ದಾರೆ. 2018-19ರಲ್ಲಿ ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋಗಿದ್ದ ಭಾರತ ಅಲ್ಲಿ ಟೆಸ್ಟ್‌ ಸರಣಿ ಗೆದ್ದು ಇತಿಹಾಸ ನಿರ್ಮಿಸಿತ್ತು. ಆಗ ಆಸೀಸ್ ನಾಯಕತ್ವ ವಹಿಸಿಕೊಂಡಿದ್ದು ಇದೇ ಪೈನ್.

ಗಿಲ್ಲಿ ಆ್ಯಂಡ್ ಗೋಸ್ ಜೊತೆ ಮಾತನಾಡಿದ 36ರ ಹರೆಯದ ಪೈನ್, 'ಕೊಹ್ಲಿ ಬಗ್ಗೆ ನಾನು ಇದೇ ಮಾತನ್ನು ಸಾಕಷ್ಟು ಸಾರಿ ಹೇಳಿದ್ದೇನೆ. ಈಗಲೂ ಅದನ್ನೇ ಹೇಳುತ್ತಿದ್ದೇನೆ. ನಮ್ಮ ತಂಡದಲ್ಲಿ ಒಂದು ವಿಧದ ಆಟಗಾರ ಇರಬೇಕು ಅನ್ನಿಸಿದರೆ ಅದು ಕೊಹ್ಲಿಯಂಥವರು. ಆತ ಸ್ಪರ್ಧಾತ್ಮಕವಾಗಿರುತ್ತಾರೆ. ಆತ ವಿಶ್ವಶ್ರೇಷ್ಠ ಬ್ಯಾಟ್ಸ್‌ಮನ್‌,' ಎಂದಿದ್ದಾರೆ.

ಮ್ಯಾಚ್ ಫಿಕ್ಸಿಂಗ್ ವೇಳೆ ಈ ಬುದ್ಧಿ ಇರಬೇಕಿತ್ತು ; ಕೊಹ್ಲಿ ಪರ ಮಾತನಾಡಿದ್ದ ಆಟಗಾರನಿಗೆ ವಾನ್ ತರಾಟೆಮ್ಯಾಚ್ ಫಿಕ್ಸಿಂಗ್ ವೇಳೆ ಈ ಬುದ್ಧಿ ಇರಬೇಕಿತ್ತು ; ಕೊಹ್ಲಿ ಪರ ಮಾತನಾಡಿದ್ದ ಆಟಗಾರನಿಗೆ ವಾನ್ ತರಾಟೆ

'ಕೊಹ್ಲಿ ನಿಮ್ಮೆದುರು ಆಡಲು ಸವಾಲು ಹಾಕಬಲ್ಲ. ತನ್ನ ಒಳ್ಳೆಯತನ ಮತ್ತು ಸ್ಪರ್ಧಾತ್ಮಕ ಭಾವನೆಯಿಂದ ಆತ ನಿಮ್ಮೆಲ್ಲರನ್ನೂ ಮೀರಿಸಬಲ್ಲ,' ಎಂದು ಪೈನ್ ಅಭಿಪ್ರಾಯಿಸಿದ್ದಾರೆ. ಇತ್ತೀಚೆಗಷ್ಟೇ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್, ಕೊಹ್ಲಿಗಿಂತ ವಿಲಿಯಮ್ಸನ್ ಶ್ರೇಷ್ಠ ಎಂಬಂತೆ ಮಾತನಾಡಿದ್ದರು. ಇದಕ್ಕೆ ಇರುಗೇಟು ರೀತಿಯಲ್ಲಿ ಪೈನ್ ಹೇಳಿಕೆ ನೀಡಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Monday, May 17, 2021, 12:40 [IST]
Other articles published on May 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X