ದೆಹಲಿ ಪೊಲೀಸರ ಶ್ಲಾಘಿಸಿದ ವಿರಾಟ್ ಕೊಹ್ಲಿ, ಇಶಾಂತ್ ಶರ್ಮಾ: ವೀಡಿಯೋ

ನವದೆಹಲಿ, ಏಪ್ರಿಲ್ 11: ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ವೇಗಿ ಇಶಾಂತ್ ಶರ್ಮಾ ಲಾಕ್‌ ಡೌನ್‌ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಜನರಿಗೆ ನೆರವಿನ ಹಸ್ತ ಚಾಚುತ್ತಿರುವ ದೆಹಲಿ ಪೊಲೀಸರನ್ನು ಶ್ಲಾಘಿಸಿದ್ದಾರೆ. ಪೊಲೀಸರ ಕರ್ತವ್ಯ ಮೆಚ್ಚಿ ಕೊಹ್ಲಿ ಹಂಚಿಕೊಂಡಿದ್ದ ವಿಡಿಯೋವನ್ನು ದೆಹಲಿ ಪೊಲೀಸ್ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಾಕಿಕೊಳ್ಳಲಾಗಿದೆ.

ತಾನು ಎದುರಿಸಿದ ಅತೀ ಕಷ್ಟಕರ ಓವರ್‌ ಸ್ಮರಿಸಿದ ರಿಕಿ ಪಾಂಟಿಂಗ್: ವೀಡಿಯೋತಾನು ಎದುರಿಸಿದ ಅತೀ ಕಷ್ಟಕರ ಓವರ್‌ ಸ್ಮರಿಸಿದ ರಿಕಿ ಪಾಂಟಿಂಗ್: ವೀಡಿಯೋ

ವಿರಾಟ್ ಕೊಹ್ಲಿ ಮತ್ತು ಇಶಾಂತ್ ಶರ್ಮಾ ಇಬ್ಬರೂ ಕೊರೊನಾವೈರಸ್‌ ಲಾಕ್‌ಡೌನ್‌ ವೇಳೆ ಕರ್ತವ್ಯಕ್ಕೆ ಮೀರಿ ಮಾನವೀಯ ನಡೆ ತೋರಿಕೊಂಡಿದ್ದಕ್ಕಾಗಿ ಪೊಲೀಸರಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಲಾಕ್‌ಡೌನ್ ವೇಳೆ ಕಷ್ಟ ಅನುಭವಿಸುತ್ತಿದ್ದ ಜನರಿಗೆ ಪೊಲೀಸರು ಸಹಾಯ ನೀಡಿದ್ದರು, ಆಹಾರ ಪೊಟ್ಟಣಗಳನ್ನು ಹಂಚಿದ್ದರು. ಪೊಲೀಸರ ಉತ್ತಮ ಕಾರ್ಯದ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.

ನಾನು ಕಂಡ ಅತ್ಯಂತ ಕಠಿಣ ಬ್ಯಾಟ್ಸ್‌ಮನ್: ಭಾರತೀಯ ದಿಗ್ಗಜನ ಬಗ್ಗೆ ಕ್ಲಾರ್ಕ್ ಮಾತುನಾನು ಕಂಡ ಅತ್ಯಂತ ಕಠಿಣ ಬ್ಯಾಟ್ಸ್‌ಮನ್: ಭಾರತೀಯ ದಿಗ್ಗಜನ ಬಗ್ಗೆ ಕ್ಲಾರ್ಕ್ ಮಾತು

'ಇಂಥ ಕಷ್ಟಕರ ಸಂದರ್ಭದಲ್ಲಿ ರಾಷ್ಟ್ರದಾದ್ಯಂತ ಸೇವೆ ಸಲ್ಲಿಸುತ್ತಿರುವ ಪೊಲೀಸರ ಕಾರ್ಯ ಹೃದಯ ತಾಗುವಂತದ್ದು. ಅಗತ್ಯವಿದ್ದವರಿಗೆ ತಮ್ಮ ಕರ್ತವ್ಯಕ್ಕೂ ಮೀರಿ ಸೇವೆ ನೀಡುತ್ತಿರುವ ಪೊಲೀಸರಿಗೆ ನಮ್ಮ ಅಭಿನಂದನೆಗಳು. ಇದೇ ಪ್ರಯತ್ನ ಮುಂದುವರೆಸಿ,' ಎ೦ದು ಕೊಹ್ಲಿ ವೀಡಿಯೋದಲ್ಲಿ ಹೇಳಿದ್ದಾರೆ.

'ಮನೆಯವರೊಂದಿಗೆ ಇರಲು, ನಮ್ಮ ಪ್ರೀತಿ ಪಾತ್ರರೊಂದಿಗೆ ಕಳೆಯಲು ಇದು ಸರಿಯಾದ ಸಮಯ. ನಿಮ್ಮ ಕುಟುಂಬದ ಬಗ್ಗೆ ಜಾಗೃತೆ ವಹಿಸಿ. ದೆಹಲಿ ಪೊಲೀಸರು ಹಗಲಿರುಳು ದುಡಿಯುತ್ತಿದ್ದಾರೆ. ಮನೆಯಲ್ಲೇ ಇರುವ ಮೂಲಕ ಅವರಿಗೆ ನೆರವಾಗೋಣ. ಜೈ ಹಿಂದ್,' ಎಂದು ಶರ್ಮಾ ಟ್ವೀಟ್‌ನಲ್ಲಿ ಹೇಳಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Saturday, April 11, 2020, 9:47 [IST]
Other articles published on Apr 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X