ಜಾಂಟಿ ರೋಡ್ಸ್ ರೀತಿ ಮಿಂಚಿನ ಫೀಲ್ಡಿಂಗ್ ಮಾಡಿ ಬೆರಗುಗೊಳಿಸಿದ ಕೊಹ್ಲಿ! ವಿಡಿಯೋ

IND vs NZ 1st ODI : Virat Kohli does a Jonty | Virat Kohli | Jonty Rhodes

ಟೀಮ್ ಇಂಡಿಯಾ ನಾಯಕ ಅದ್ಭುತ ಬ್ಯಾಟಿಂಗ್ ಮೂಲಕ ವಿಶ್ವವನ್ನು ಬೆರಗುಗೊಳಿಸಿದ ಆಟಗಾರ. ಆದರೆ ಕೊಹ್ಲಿ ಅಷ್ಟೇ ಅದ್ಭುತವಾದ ಫೀಲ್ಡರ್ ಕೂಡ ಹೌದು. ಈ ಬಗ್ಗೆಯೂ ಕ್ರಿಕೆಟ್‌ ಲೋಕದಲ್ಲಿ ಯಾವುದೇ ಅನುಮಾನಗಳಿಲ್ಲ. ಹಾಗಿದ್ದರೂ ತಾನು ಎಂತಾ ಅದ್ಭುತ ಫೀಲ್ಡರ್ ಅನ್ನೋದನ್ನು ಕೊಹ್ಲಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ನ್ಯೂಜಿಲೆಂಡ್‌ನ ಬ್ಯಾಟ್ಸ್‌ಮನ್ ಹೆನ್ರಿ ನಿಕೋಲಸ್ ವಿರಾಟ್ ಕೊಹ್ಲಿ ಅದ್ಭುತ ರೀತಿಯಲ್ಲಿ ಔಟ್‌ ಮಾಡಿ ಚಕಿತಗೊಳಿಸಿದ್ದಾರೆ. ಜಸ್ಪ್ರಿತ್ ಬೂಮ್ರಾ ಎಸೆತವನ್ನು ತಳ್ಳಿ ಒಂಟಿ ರನ್ ಕದಿಯುವ ಪ್ರಯತ್ನವನ್ನು ಕೀವಿಸ್ ಬ್ಯಾಟ್ಸ್‌ಮನ್‌ ರಾಸ್‌ ಟೇಯ್ಲರ್ ಮಾಡಿದರು. ಆದರೆ ಅಲ್ಲೆ ಇದ್ದ ವಿರಾಟ್ ಕೊಹ್ಲಿ ಮಿಂಚಿನಂತೆ ಫೀಲ್ಡಿಂಗ್ ಮಾಡಿ ಊಹಿಸದ ರೀತಿಯಲ್ಲಿ ಔಟ್‌ ಮಾಡಿದರು.

ಭಾರತ vs ಕಿವೀಸ್: ಸೌರವ್ ಗಂಗೂಲಿ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿಭಾರತ vs ಕಿವೀಸ್: ಸೌರವ್ ಗಂಗೂಲಿ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ

ಸಿಲ್ಲಿ ಪಾಯಿಂಟ್‌ನಲ್ಲಿದ್ದ ವಿರಾಟ್ ಕೊಹ್ಲಿ ಕೀವಿಸ್ ಬ್ಯಾಟ್ಸ್‌ಮನ್‌ಗಳು ರನ್ ಓಡುತ್ತಿರುವುದನ್ನು ಗಮನಿಸಿದರು. ವೇಗವಾಗಿ ಓಡಿ ಬಂದು ಹಾರಿ ಬಾಲನ್ನು ವಿಕೆಟ್‌ನ ಮೇಲೆ ಬೀಳಿಸುವಲ್ಲಿ ಯಶಸ್ವಿಯಾದರು. ಬ್ಯಾಟ್ಸ್‌ಮನ್‌ ಕ್ರೀಸ್ ತಲುಪುವ ಮುನ್ನವೇ ವಿಕೆಟ್‌ಗೆ ಬಾಲ್ ಬಿದ್ದಾಗಿತ್ತು.

ವಿಕೆಟ್ ಉಳಿಸಿಕೊಳ್ಳಲು ಪ್ರಯತ್ನ

ವಿಕೆಟ್ ಉಳಿಸಿಕೊಳ್ಳಲು ಪ್ರಯತ್ನ

ನಾನ್‌ಸ್ಟ್ರೈಕ್‌ನಿಂದ ಓಡಿ ಬಂದು ಒಂಟಿ ರನ್ ಕದಿಯುವ ಪ್ರಯತ್ನದಲ್ಲಿದ್ದ ಹೆನ್ರಿ ನಿಕೋಲಸ್ ತನ್ನ ವಿಕೆಟನ್ನು ಉಳಿಸಿಕೊಳ್ಳಲು ಡೈವ್ ಮಾಡಿ ರನ್‌ಔಟ್‌ನಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರು. ಆದರೆ ಕೊಹ್ಲಿಯ ಮಿಂಚಿನಂತಾ ಚಲನೆಯ ಮುಂದೆ ನಿಕೋಲಸ್ ಪ್ರಯತ್ನ ವಿಫಲವಾಯಿತು.

ಮೂಕವಿಸ್ಮಿತರಾದ ಪ್ರೇಕ್ಷಕರು

ಮೂಕವಿಸ್ಮಿತರಾದ ಪ್ರೇಕ್ಷಕರು

ಕೆಲವೇ ಸೆಕೆಂಡ್‌ಗಳಲ್ಲಿ ನಡೆದ ಈ ಕ್ರಿಯೆ ಪ್ರತಿಕ್ರಿಯೆಗಳನ್ನು ಕ್ರಿಕೆಟ್‌ ಅಭಿಮಾನಿಗಳು ಮೂಕವಿಸ್ಮಿತರಾಗಿ ಕಣ್ತುಂಬಿಕೊಂಡರು. ಏನಾಯ್ತು ಅನ್ನೋದು ಅರಿವೆ ಬರುವ ಮುನ್ನವೇ ರನ್‌ ಆದ ಹೆನ್ರಿ ನಿಕೋಲಸ್ ಬೇರೆ ದಾರಿಯಿಲ್ಲದೆ ಫೆವಿಲಿಯನ್‌ನತ್ತ ಹೆಜ್ಜೆ ಹಾಕಿದರು.

ಜಾಂಟಿ ನೆನಪಿಸಿದ ಕೊಹ್ಲಿ

ಜಾಂಟಿ ನೆನಪಿಸಿದ ಕೊಹ್ಲಿ

1992ರ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾದ ಫೀಲ್ಡಿಂಗ್ ಲೆಜೆಂಡ್ ಜಾಂಟಿ ರೋಡ್ಸ್ ಅವರನ್ನು ಕೊಹ್ಲಿ ಈ ಪಂದ್ಯದ ಮೂಲಕ ನೆನಪಿಸಿದ್ದಾರೆ. ವಿಶ್ವ ಕ್ರಿಕೆಟ್‌ ಕಂಡ ಅದ್ಭುತ ಫೀಲ್ಡರ್‌ನ ಅದ್ಭುತ ಫೀಲ್ಡಿಂಗ್ ದೃಶ್ಯ ಕೊಹ್ಲಿ ರನ್‌ಔಟ್‌ ಸಮಯದಲ್ಲಿ ಎಲ್ಲರ ಕಣ್ಣಮುಂದೆ ಹಾದು ಹೋಗಿದ್ದಂತೂ ಸತ್ಯ.

ಟಿ20ಯಲ್ಲೂ ಸುದ್ದಿಮಾಡಿದ್ದ ಕೊಹ್ಲಿ ರನ್‌ಔಟ್‌

ಟಿ20ಯಲ್ಲೂ ಸುದ್ದಿಮಾಡಿದ್ದ ಕೊಹ್ಲಿ ರನ್‌ಔಟ್‌

ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲೂ ರನ್‌ಔಟ್‌ನಿಂದಲೇ ಕೊಹ್ಲಿ ಸುದ್ದಿಯಾಗಿದ್ದರು. ಅಂದು ಬೌಂಡರಿ ಲೈನ್‌ಕಡೆ ಹೋಗುತ್ತಿದ್ದ ಚೆಂಡನ್ನು ತಡೆದ ಶಾರ್ದೂಲ್ ಟಾಕೂರ್ ವಿಕೆಟ್ ಕೀಪರ್ ಕಡೆಗೆ ಚೆಂಡನ್ನು ಎಸೆದಿದ್ದರು. ಆದರೆ ಆಚೆಂಡನ್ನು ಮಧ್ಯದಲ್ಲೇ ತಡೆದು ನಾನ್ ಸ್ಟ್ರೈಕ್ ಕಡೆಗೆ ಗುರಿ ಮಾಡಿ ಬ್ಯಾಟ್ಸ್ಸಮನ್‌ಅನ್ನು ಔಟ್‌ ಮಾಡುವಲ್ಲಿ ಯಶಸ್ವಿಯಾಗಿದ್ದರು.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 15 - October 24 2021, 03:30 PM
ಶ್ರೀಲಂಕಾ
ಬಾಂಗ್ಲಾದೇಶ್
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, February 6, 2020, 10:52 [IST]
Other articles published on Feb 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X