ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾಯಕ ಎಂಎಸ್ ಧೋನಿ ಹಿಂದಿಕ್ಕಿದ ವಿರಾಟ್ ಕೊಹ್ಲಿ

By Mahesh

ಬೆಂಗಳೂರು, ಅ.2: ಟೀಂ ಇಂಡಿಯಾದ ಪ್ರಮುಖ ಆಟಗಾರ ವಿರಾಟ್ ಕೊಹ್ಲಿ ಅವರು ನಾಯಕ ಎಂಎಸ್ ಧೋನಿ ಅವರನ್ನು ಹಿಂದಿಕ್ಕಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ಇಬ್ಬರು ಆಟಗಾರರು ಜನಪ್ರಿಯತೆ ಕಾಯ್ದುಕೊಂಡಿದ್ದರೂ ಕೊಹ್ಲಿ ಅವರು ಧೋನಿ ಅವರನ್ನು ಟ್ವಿಟ್ಟರ್ ನಲ್ಲಿ ಹಿಂದೆ ಹಾಕಿದ್ದಾರೆ.

ಇಂಗ್ಲೆಂಡ್ ಪ್ರವಾಸದಲ್ಲಿ ಕಳಪೆ ಪ್ರದರ್ಶನ ನೀಡಿದರೂ ವಿರಾಟ್ ಕೊಹ್ಲಿ ಅವರು ಟಿ20 ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ್ದು ಫಲನೀಡಿದೆ. ಚಾಂಪಿಯನ್ಸ್ ಲೀಗ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿರುವ ಧೋನಿ ಅವರು ಬಿಡುವಿಲ್ಲದ ಟೂರ್ನಿಗಳಿಂದ ಬಳಲಿದರೂ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ.

Virat Kohli

ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಕೊಹ್ಲಿ ಅವರು 4 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ ಧೋನಿ ಅವರು 3.09 ಮಿಲಿಯನ್ ಹಿಂಬಾಲಕರನ್ನು ಮಾತ್ರ ಹೊಂದಿದ್ದಾರೆ. ಇದರಿಂದ ಥ್ರಿಲ್ ಆದ ಕೊಹ್ಲಿ ಅವರು ನಿಮ್ಮ ಪ್ರೀತಿ ಅಭಿಮಾನಕ್ಕೆ ನಾನು ಚಿರಋಣಿ ಎಂದು ಟ್ವೀಟ್ ಮಾಡಿದ್ದಾರೆ.

ಈ ಸಮಯಕ್ಕೆ(ಅ.2, ಸಮಯ 7.00) ಕೊಹ್ಲಿ ಅವರು ಒಟ್ಟಾರೆ 4,013,828 ಹಿಂಬಾಲಕರಿದ್ದಾರೆ. ಧೋನಿ ಹಿಂಬಾಲಕರಿಗಿಂತ 9,25,647 ಹೆಚ್ಚು ಮಂದಿ ಹಿಂಬಾಲಕರಿದ್ದಾರೆ. ಧೋನಿ ಅವರು ಒಟ್ಟಾರೆ 3,088,181 ಫಾಲೋವರ್ಸ್ ಹೊಂದಿದ್ದಾರೆ. ಸಚಿನ್ ತೆಂಡೂಲ್ಕರ್ ಅವರು 4,592,280 ಹಿಂಬಾಲಕರನ್ನು ಹೊಂದಿದ್ದಾರೆ. ಟ್ವೀಟ್ ಮಾಡುವುದರ ಪೈಕಿ ಕೊಹ್ಲಿ 591 ಬಾರಿಯಾದರೆ ಧೋನಿ 353 ಟ್ವೀಟ್ ನೊಂದಿಗೆ ಹಿಂದೆ ಬಿದ್ದಿದ್ದಾರೆ.

ಧೋನಿ ಅವರು 2009ರ ನವೆಂಬರ್ ನಲ್ಲಿ ಟ್ವಿಟ್ಟರ್ ಸೇರಿದರೆ, ಕೊಹ್ಲಿ ಅದೇ ವರ್ಷ ಸೆಪ್ಟೆಂಬರ್ ನಲ್ಲಿ ಟ್ವಿಟ್ಟರ್ ಖಾತೆ ಆರಂಭಿಸಿದ್ದರು. ಸಚಿನ್ ಅವರು 2010ರ ಏಪ್ರಿಲ್ ನಲ್ಲಿ ಟ್ವೀಟ್ ಲೋಕಕ್ಕೆ ಎಂಟ್ರಿ ಕೊಟ್ಟರು. ಇದೇ ಲಯದಲ್ಲಿ ಮುಂದುವರೆದರೆ ಕೊಹ್ಲಿ ಅವರು ತೆಂಡೂಲ್ಕರ್ ಅವರ ಹಿಂಬಾಲಕರನ್ನು ಮುರಿಯಬಲ್ಲರು.

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X