ಕೊಹ್ಲಿ-ರೋಹಿತ್ ಭರ್ಜರಿ ಆಟ, ಇಂಗ್ಲೆಂಡ್ ವಿರುದ್ಧ ಭಾರತ ಜಯಭೇರಿ

ಅಹ್ಮದಾಬಾದ್: ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶನಿವಾರ (ಮಾರ್ಚ್ 20) ನಡೆದ ಭಾರತ-ಇಂಗ್ಲೆಂಡ್ ಐದನೇ ಮತ್ತು ಕೊನೇಯ ಟಿ20ಐ ಪಂದ್ಯದಲ್ಲಿ ಟೀಮ್ ಇಂಡಿಯಾ 36 ರನ್ ಅಧಿಕಾರಯುತ ಜಯ ಗಳಿಸಿದೆ. ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ಅರ್ಧಶತಕದ ಕೊಡುಗೆ ಮತ್ತು ಶಾರ್ದೂಲ್ ಠಾಕೂರ್ ಬೌಲಿಂಗ್ ಬಲದೊಂದಿಗೆ ಭಾರತ ಟಿ20ಐ ಸರಣಿಯಲ್ಲಿ 3-2ರ ಜಯ ದಾಖಲಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತದಿಂದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಿಂದ ಉತ್ತಮ ಬ್ಯಾಟಿಂಗ್ ಲಭಿಸಿತು. ರೋಹಿತ್ 64 (34), ವಿರಾಟ್ ಕೊಹ್ಲಿ 80 (52), ಸೂರ್ಯಕುಮಾರ್ ಯಾದವ್ 32 (17), ಹಾರ್ದಿಕ್ ಪಾಂಡ್ಯ ಅಜೇಯ 39 (17) ರನ್ ನೊಂದಿಗೆ 20 ಓವರ್‌ಗಳಲ್ಲಿ ಭಾರತ 2 ವಿಕೆಟ್ ಕಳೆದು 224 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಇಂಗ್ಲೆಂಡ್, ಜೋಸ್ ಬಟ್ಲರ್ 52 (34), ಡೇವಿಡ್ ಮಲಾನ್ 68 (46), ಬೆನ್ ಸ್ಟೋಕ್ಸ್ 14, ಕ್ರಿಸ್ ಜೋರ್ಡನ್ 11, ಸ್ಯಾಮ್ ಕರನ್ ಅಜೇಯ 14 ರನ್ ಕೊಡುಗೆಯೊಂದಿಗೆ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದು 188 ರನ್ ಗಳಿಸಿ ಶರಣಾಯ್ತು.
ಭಾರತದ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ 1, ಆದಿಲ್ ರಶೀದ್ 1 ವಿಕೆಟ್ ಪಡೆದರೆ, ಇಂಗ್ಲೆಂಡ್ ಇನ್ನಿಂಗ್ಸ್‌ನಲ್ಲಿ ಭಾರತದ ಶಾರ್ದೂಲ್ ಠಾಕೂರ್ 3, ಭುವನೇಶ್ವರ್ ಕುಮಾರ್ 2, ಹಾರ್ದಿಕ್ ಪಾಂಡ್ಯ 1, ಟಿ ನಟರಾಜನ್ 1 ವಿಕೆಟ್ ಉರುಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications