29 ಕ್ಕೆ ಕಾಲಿಟ್ಟ ಟೀಂ ಇಂಡಿಯಾ ನಾಯಕ ಕೊಹ್ಲಿ

Posted By: Manjunatha

ನವದೆಹಲಿ. ನವೆಂಬರ್ 05 : ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಗೆ ಇಂದು ಜನ್ಮ ದಿನ, ದೆಹಲಿಯ ಕ್ರಿಕೆಟಿಗ ನವೆಂಬರ್ 5 ರ ಭಾನುವಾರದಂದು 29 ವರ್ಷಕ್ಕೆ ಕಾಲಿಟ್ಟಿದ್ದಾರೆ.

ಪಂದ್ಯದ ವೇಳೆ ವಾಕಿ-ಟಾಕಿ ಬಳಕೆ, ವಿರಾಟ್ ಕೊಹ್ಲಿಗೆ ಕ್ಲೀನ್ ಚಿಟ್

ತಮ್ಮ ಮೆಚ್ಚಿನ ಕ್ರಿಕೆಟಿಗನ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಶುಭಹಾರೈಕೆಯ ಮಳೆಯನ್ನೇ ಸಾಮಾಜಿಕ ಜಾಲತಾಣಗಳಲ್ಲಿ ಸುರಿಸಿದ್ದಾರೆ. ಇದರ ಜೊತೆಗೆ ವಿರಾಟ್ ಕೊಹ್ಲಿಗೆ ಸಹ ಆಟಗಾರರು, ಮಾಜಿ ಕ್ರಿಕೆಟ್ ಆಟಗಾರರು, ಬಾಲಿವುಡ್ ಸೆಲೆಬ್ರಿಟಿಗಳು ವಿಶ್ ಮಾಡಿದ್ದು, ಕೊಹ್ಲಿ ಅವರ ಹುಟ್ಟುಹಬ್ಬಕ್ಕೆ ಮೆರುಗು ನೀಡಿದ್ದಾರೆ. ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ ಎಲ್ಲರಿಗೂ ಕೊಹ್ಲಿ ಧನ್ಯವಾದ ತಿಳಿಸಿದ್ದಾರೆ.

ಪ್ರಸ್ತುತ ನ್ಯೂಜಿಲೆಂಡ್ ವಿರುದ್ಧ ಕ್ರಿಕೆಟ್ ಸರಣಿಯಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಕೊಹ್ಲಿ ರಾಜ್ ಕೋಟ್ ನ ಐಟಿಸಿ ಫಾರ್ಚ್ಯೂನ್ ಹೊಟೇಲ್ ನಲ್ಲಿ ತಂಡದ ಜೊತೆಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದು. ಕ್ರಿಕೆಟ್ ಪಿಚ್ ಹೋಲುವಂತ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಕೊಹ್ಲಿ ಅವರು ತಂಡದ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಚಿತ್ರಗಳು ಮತ್ತು ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ತ್ವರಿತಗತಿಯಲ್ಲಿ 9 ಸಾವಿರ ರನ್ : ಟಾಪ್ 5 ಆಟಗಾರರಲ್ಲಿ ಕೊಹ್ಲಿ ನಂ.1

ತಮ್ಮ ನೆಚ್ಚಿನ ನಾಯಕ ಕೋಹ್ಲಿಯ ಮುಖಕ್ಕೆಲ್ಲಾ ಕೇಕ್ ಬಳಿದಿರುವ ತಂಡದ ಆಟಗಾರರು ಕೊಹ್ಲಿ ತಲೆಯ ಮೇಲೊಂದು ಗೊಂಬೆಯನ್ನು ಇಟ್ಟು ಸಂಭ್ರಮಿಸಿದ್ದಾರೆ.

ಅನುಷ್ಕಾ ಶರ್ಮಾ
ಕೋಹ್ಲಿಯ ಪ್ರೇಯಸಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿ ಶುಭಾಷಯ ಹೇಳದಿರುವುದು ಟ್ವಿಟ್ಟಿಗರಲ್ಲಿ ಆಶ್ಚರ್ಯ ಹುಟ್ಟಿಸಿದೆ. ಅನುಷ್ಕಾ ಶರ್ಮಾ ನವೆಂಬರ್ 1 ರಿಂದ ಯಾವುದೇ ಟ್ವೀಟ್ ಮಾಡಿಲ್ಲ.

Story first published: Sunday, November 5, 2017, 11:36 [IST]
Other articles published on Nov 5, 2017
Please Wait while comments are loading...