ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020 ಕಪ್ ಗೆಲ್ಲುವ ನೆಚ್ಚಿನ ತಂಡ RCB ಎಂದ ಬ್ಯಾಟಿಂಗ್ ದಿಗ್ಗಜ

Dilip Vengsarkar

ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಆರಂಭವಾದಗಿನಿಂದಲೂ ಈ ಸಲ ಕಪ್ ನಮ್ದೇ ಎನ್ನುತ್ತಾ ಬಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡದ ಮೇಲೆ ಯಾರೊಬ್ಬರೂ ಬಾಜಿ ಕಟ್ಟಲು ಸಿದ್ಧರಲ್ಲ, ಇಂಥ ಸಂದರ್ಭದಲ್ಲಿ ಕೊಹ್ಲಿ ನೇತೃತ್ವದ ಬೆಂಗಳೂರು ತಂಡ ಈ ಬಾರಿ ಕಪ್ ಗೆಲ್ಲಬಲ್ಲ ನೆಚ್ಚಿನ ತಂಡ ಎಂದು ಬ್ಯಾಟಿಂಗ್ ದಿಗ್ಗಜ ದಿಲೀಪ್ ವೆಂಗ್ ಸರ್ಕಾರ್ ಅಭಿಪ್ರಾಯಪಟ್ಟಿದ್ದಾರೆ.

ಕಳೆದ 12 ಬಾರಿಯಲ್ಲಿ ಮುರ್ನಾಲ್ಕು ಸಲ ಕಪ್ ಗೆಲ್ಲುವ ಸನಿಹಕ್ಕೆ ಬಂದು ಮುಗ್ಗರಿಸಿದ ತಂಡ ಈ ಬಾರಿ ಎಲ್ಲಾ ಅಪ ನಂಬಿಕೆಗಳನ್ನು ಹುಸಿಗೊಳಿಸಿ ಕಪ್ ಎತ್ತುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದರು. 2009, 2011ಹಾಗೂ 2016ರಲ್ಲಿ ಅಂತಿಮ ಹಣಾಹಣಿ ತನಕ ತಲುಪಿದ್ದ ಆರ್ ಸಿಬಿ ಕಪ್ ಎತ್ತಲು ಸಾಧ್ಯವಾಗಿರಲಿಲ್ಲ.

ಈ ಸಲ ಕಪ್ ಈ ತಂಡಕ್ಕೆ-ಕ್ರಿಕೆಟ್ ಬುಕ್ಕಿಗಳ ಭವಿಷ್ಯ ಬಹಿರಂಗಈ ಸಲ ಕಪ್ ಈ ತಂಡಕ್ಕೆ-ಕ್ರಿಕೆಟ್ ಬುಕ್ಕಿಗಳ ಭವಿಷ್ಯ ಬಹಿರಂಗ

"ಇದು ಟಿ20 ಮಾದರಿಯಾಗಿದ್ದು, ಇಲ್ಲಿ ಯಾರು ಗೆಲ್ಲುತ್ತಾರೆ, ಸೋಲುತ್ತಾರೆ ಎಂಬುದು ತಕ್ಷಣಕ್ಕೆ ಹೇಳಲು ಸಾಧ್ಯವಿಲ್ಲ, ಆದರೆ ಬೆಂಗಳೂರು ತಂಡದಲ್ಲಿ ಕೊಹ್ಲಿ, ಎಬಿ ಡಿ ವಿಲಿಯರ್ಸ್ ಹಾಗೂ ಯಜುವೇಂದ್ರ ಚಾಹಲ್ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲಿದ್ದಾರೆ ಎಂದು 64 ವರ್ಷ ವಯಸ್ಸಿನ ಮಾಜಿ ನಾಯಕ ದಿಲೀಪ್ ಹೇಳಿದರು.

Dilip Vengsarkar

ಆರ್ ಸಿಬಿ ನನ್ನ ನೆಚ್ಚಿನ ತಂಡಗಳಲ್ಲಿ ಒಂದು ಅಷ್ಟೇ , ಇದೇ ತಂಡ ಗೆಲ್ಲಬಲ್ಲುದು ಎಂದು ನಾನು ಹೇಳಲಾರೆ, 2016ರ ನಂತರ ಅತ್ಯಂತ ಸಮತೋಲನ ತಂಡವನ್ನು ಈಗ ಕಾಣಬಹುದಾಗಿದೆ. ಬೌಲಿಂಗ್ ವಿಭಾಗವು ಸಮರ್ಥವಾಗಿದೆ ಎಂದು ಹೇಳಿದರು.

IPL 2020: ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಪೂರ್ಣ ವೇಳಾಪಟ್ಟಿIPL 2020: ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಪೂರ್ಣ ವೇಳಾಪಟ್ಟಿ

ಪಂದ್ಯಗಳು ಹೆಚ್ಚಾಗುತ್ತಿದ್ದಂತೆ ಮುಂದಿನ ಹಂತದಲ್ಲಿ ಸ್ಪಿನ್ನರ್ ಗಳ ಪಾತ್ರ ಮುಖ್ಯವಾಗಲಿದೆ. ಯುಎಇಯಲ್ಲಿ ಹವಾಮಾನಕ್ಕೆ ತಕ್ಕಂತೆ ತಂಡದ ಆಯ್ಕೆ ಹಾಗೂ ನಿರ್ವಹಣೆ ಮುಖ್ಯ, ಈ ನಿಟ್ಟಿನಲ್ಲಿ ಕೊಹ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಬಲ್ಲರು, ಶಾರ್ಜಾದಲ್ಲಿ ಆಡುವುದು ಸುಲಭ, ಮಿಕ್ಕರೆಡು ಮೈದಾನಕ್ಕೆ ತಕ್ಕಂತೆ ಹೊಂದಿಕೊಳ್ಳಬೇಕು ಎಂದರು.

RCB ಡಗೌಟ್ ವಿಶೇಷ: ಅರೆ! ಯಾರಿವಳು ಯಾರಿವಳು ಚಂಗನೆದ್ದು ಕುಣಿವವಳುRCB ಡಗೌಟ್ ವಿಶೇಷ: ಅರೆ! ಯಾರಿವಳು ಯಾರಿವಳು ಚಂಗನೆದ್ದು ಕುಣಿವವಳು

ತೇವಾಂಶ ಮಹತ್ವದ ಪಾತ್ರವಹಿಸಲಿದ್ದು ಹಲವು ನಾಯಕರು ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡುತ್ತಿದ್ದಾರೆ. ಆದರೆ, ಎಲ್ಲಾ ಕಾಲಕ್ಕೂ ತೇವಾಂಶ ಇರುತ್ತದೆ ಎಂದು ಹೇಳಲಾಗದು, ಕೊವಿಡ್ 19 ನಿಂದಾಗಿ ಆಟಗಾರರ ಮಾನಸಿಕ ಸಾಮರ್ಥ್ಯವನ್ನು ಈ ಐಪಿಎಲ್ ಅಳೆಯಲಿದೆ. ಬಯೋ ಬಬ್ಬಲ್ ಮುಂತಾದ ವ್ಯವಸ್ಥೆ ಸೂಕ್ತವಾಗಿದೆ. ಪ್ರೇಕ್ಷಕರಿಲ್ಲದೆ ಆಡುವುದು ಊಹಿಸಲು ಸಾಧ್ಯವಿರಲಿಲ್ಲ. ಆದರೆ, ಆಟಗಾರರು ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ ಎಂದು ಹೇಳಿದರು.

Story first published: Tuesday, October 6, 2020, 14:30 [IST]
Other articles published on Oct 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X