ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ ಅವರ ಟಾಪ್ 05 ಟೆಸ್ಟ್ ಶತಕಗಳು

Virat Kohli turns 30: Heres top 5 Test innings of King Kohli

ಬೆಂಗಳೂರು, ನವೆಂಬರ್ 05: ಭಾರತ ಕ್ರಿಕೆಟ್ ಕಂಡಿರುವ ಹೆಮ್ಮೆಯ ಪ್ರತಿಭೆ ವಿರಾಟ್ ಕೊಹ್ಲಿ ಅವರ 30ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ವೃತ್ತಿ ಬದುಕಿನ ಟಾಪ್ 05 ಟೆಸ್ಟ್ ಇನ್ನಿಂಗ್ಸ್ ಗಳತ್ತ ಒಂದು ನೋಟ ಇಲ್ಲಿದೆ...

ಕೊಹ್ಲಿಗೆ 30: 'ನಿನ್ನನ್ನು ಹುಟ್ಟಿಸಿದ ದೇವರಿಗೆ ಥ್ಯಾಂಕ್ಸ್‌' ಎಂದ ಅನುಷ್ಕಾ ಕೊಹ್ಲಿಗೆ 30: 'ನಿನ್ನನ್ನು ಹುಟ್ಟಿಸಿದ ದೇವರಿಗೆ ಥ್ಯಾಂಕ್ಸ್‌' ಎಂದ ಅನುಷ್ಕಾ

ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಅಲ್ಲದೆ, ಟೆಸ್ಟ್ ಕ್ರಿಕೆಟ್ ನಲ್ಲೂ ಅನೇಕ ದಾಖಲೆಗಳನ್ನು ಕೊಹ್ಲಿ ಮುರಿದಿದ್ದಾರೆ. ಕ್ರಿಕೆಟ್ ನ ಎಲ್ಲಾ ಮಾದರಿಗೂ ಸಲ್ಲಬಲ್ಲ ಆಟಗಾರನಾಗಿ ಕೊಹ್ಲಿ ಬೆಳೆದಿದ್ದಾರೆ.

ವಿರಾಟ್ ಕೊಹ್ಲಿ ಟಾಪ್ 5 ಏಕದಿನ ಕ್ರಿಕೆಟ್ ಇನ್ನಿಂಗ್ಸ್ವಿರಾಟ್ ಕೊಹ್ಲಿ ಟಾಪ್ 5 ಏಕದಿನ ಕ್ರಿಕೆಟ್ ಇನ್ನಿಂಗ್ಸ್

ಕೊಹ್ಲಿ ಹುಟ್ಟುಹಬ್ಬದ ಸಂತಸದಲ್ಲಿ ಮೈಖೇಲ್ ನಿಂದ ವಿಶೇಷ ಲೇಖನ ಇಲ್ಲಿದೆ.. ಟಾಪ್ 05 ಟೆಸ್ಟ್ ಇನ್ನಿಂಗ್ಸ್ ಗಳು ಇಲ್ಲಿವೆ...

#1, 103, ಟ್ರೆಂಟ್ ಬ್ರಿಜ್, 2018

#1, 103, ಟ್ರೆಂಟ್ ಬ್ರಿಜ್, 2018

ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಭಾರತ ಮೇಲುಗೈ ಸಾಧಿಸಬೇಕಾದರೆ ಉತ್ತಮ ಇನ್ನಿಂಗ್ಸ್ ಕಟ್ಟುವ ಕೆಲಸ ಆಗಬೇಕಿತ್ತು. ಇನ್ನಿಂಗ್ಸ್ ಮುನ್ನಡೆ ಪಡೆಯಬೇಕಿತ್ತು. ಈ ಟೆಸ್ಟ್ ನಲ್ಲಿ 103ರನ್ ಹಾಗೂ 97ರನ್ ಗಳಿಸಿ ತಮ್ಮ ಫಿಟ್ನೆಸ್ ಬಗ್ಗೆ ಇದ್ದ ಅನುಮಾನಕ್ಕೂ ಬ್ರೇಕ್ ಹಾಕಿದರು.

#2, 153, ಸೆಂಚೂರಿಯನ್, 2018

#2, 153, ಸೆಂಚೂರಿಯನ್, 2018

ದಕ್ಷಿಣ ಆಫ್ರಿಕಾದ ವಿರುದ್ಧ ಶತಕ ಬಾರಿಸಿದ್ದಲ್ಲದೆ ಏಕಾಂಗಿ ಹೋರಾಟ ನಡೆಸಿದರು. ಬೇರೆ ಯಾವ ಬ್ಯಾಟ್ಸ್ ಮನ್ ಕೂಡಾ 50ಪ್ಲಸ್ ರನ್ ಗಳಿಸಲು ಪರದಾಡಿದರು. ಮಾರ್ನೆ ಮಾರ್ಕೆಲ್, ವೆರ್ನಾನ್ ಫಿಲ್ಯಾಂಡರ್, ಕಾಗಿಸೋ ರಬಾಡಾ, ಲುಂಗಿ ನಿಗಡಿ ಬೌಲಿಂಗ್ ಎದುರಿಸಿ ನಿಂತು 153ರನ್ ಗಳಿಸಿದರು. ಇದು ಅವರು ವೈಯಕ್ತಿಕವಾಗಿ ಇಷ್ಟಪಟ್ಟ ಇನ್ನಿಂಗ್ಸ್ ಕೂಡಾ ಆಗಿದೆ.

#3, 115 & 141, ಅಡಿಲೇಡ್, 2014

#3, 115 & 141, ಅಡಿಲೇಡ್, 2014

ಆಸ್ಟ್ರೇಲಿಯಾ ವಿರುದ್ಧ ಸತತ ಶತಕ. ಮೊದಲ ಇನ್ನಿಂಗ್ಸ್ ನಲ್ಲಿ 115ರನ್ ಗಳಿಸಿ ಭಾರತದ ಮೊತ್ತ 444 ಸ್ಕೋರ್ ಆಗಲು ನೆರವಾದರು. ಆಸ್ಟ್ರೇಲಿಯಾ 517ರನ್ ಗಳಿಸಿತ್ತು. ವಾರ್ನರ್ ಕೂಡಾ ಸತತ ಶತಕ ಬಾರಿಸಿದ್ದರು.

ಆಸ್ಟ್ರೇಲಿಯಾ ನೀಡಿದ್ದ 364ರನ್ ಚೇಸ್ ಮಾಡಿದ ಭಾರತಕ್ಕೆ ಕೊಹ್ಲಿ ಆಸರೆಯಾಗಿ 141ರನ್ ಗಳಿಸಿದರೆ, ಮುರಳಿ ವಿಜಯ್ 99ರನ್ ಗಳಿಸಿದರು. ಗೆಲುವಿನ ಹೊಸ್ತಿಲಲ್ಲಿ ನಾಥನ್ ಲಿಯಾನ್ ಅಡ್ಡ ನಿಂತು 7 ವಿಕೆಟ್ ಉದುರಿಸಿದರು. ಆಸ್ಟ್ರೇಲಿಯಾಕ್ಕೆ 48ರನ್ ಗಳ ಜಯ ಸಿಕ್ಕಿತ್ತು.

#4, 204, ಹೈದರಾಬಾದ್, 2017

#4, 204, ಹೈದರಾಬಾದ್, 2017

ಭಾರತದಲ್ಲಿ ಮೊದಲ ಬಾರಿಗೆ ಟೆಸ್ಟ್ ಪಂದ್ಯವಾಡಿದ ಬಾಂಗ್ಲಾದೇಶ ವಿರುದ್ಧ ಕೊಹ್ಲಿ ಅವರು ಕೂಡಾ ಮೊದಲ ಬಾರಿಗೆ ದ್ವಿಶತಕ ಸಿಡಿಸಿದರು. 246 ಎಸೆತಗಳಲ್ಲಿ 204ರನ್ ಗಳಿಸಿದರು.

#5, 169, ಮೆಲ್ಬೋರ್ನ್ 2014

#5, 169, ಮೆಲ್ಬೋರ್ನ್ 2014

ಆಸ್ಟ್ರೇಲಿಯಾ ವಿರುದ್ಧ ಧೋನಿ ಅವರ ಕೊನೆ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ 169ರನ್ ಗಳಿಸಿದ್ದು ವಿಶೇಷ. ನಾಲ್ಕನೇ ವಿಕೆಟ್ ಗೆ ರಹಾನೆ(147) ಜತೆಗೂಡಿ 262ರನ್ ಗಳಿಸಿದ್ದು, ಪಂದ್ಯವನ್ನು ಉಳಿಸಿಕೊಳ್ಳಲು ನೆರವಾಯಿತು.

Story first published: Tuesday, November 6, 2018, 0:17 [IST]
Other articles published on Nov 6, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X