ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಭಾರತ ಯಾಕೆ ನಂ.1 ಎಂದು ವಿರಾಟ್ ಕೊಹ್ಲಿ ವಿಶ್ವಕ್ಕೆ ತೋರಿಸಲಿದ್ದಾರೆ'

Virat Kohli wants to show the world why Team India is No. 1: Reetinder Singh Sodhi

ನವದೆಹಲಿ: ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯಕ್ಕಾಗಿ ಇಂಗ್ಲೆಂಡ್‌ಗೆ ಹೊರಡುವ ಮುನ್ನ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕಿರುವ ಗೆಲ್ಲುವ ಸಾಧ್ಯತೆಗಳ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಎಲ್ಲಿಯವರೆಗೆ ತಂಡದ ಪ್ರದರ್ಶನ ಒಳ್ಳೆಯದಿರುತ್ತೋ ಅದು ತಂಡವನ್ನು ಪ್ರಶಸ್ತಿ ಗೆಲುವಿನತ್ತ ಕೊಂಡೊಯ್ಯುತ್ತದೆ ಎಂದು ಕೊಹ್ಲಿ ಹೇಳಿದ್ದಾರೆ.

ಐಪಿಎಲ್, ಸಿಪಿಎಲ್ ಆಡಿದ್ದೇನೆ; ಪಾಕಿಸ್ತಾನ್ ಸೂಪರ್ ಲೀಗ್ ಟಾಪ್ ಎಂದ ಆ್ಯಂಡ್ರೆ ರಸೆಲ್!ಐಪಿಎಲ್, ಸಿಪಿಎಲ್ ಆಡಿದ್ದೇನೆ; ಪಾಕಿಸ್ತಾನ್ ಸೂಪರ್ ಲೀಗ್ ಟಾಪ್ ಎಂದ ಆ್ಯಂಡ್ರೆ ರಸೆಲ್!

ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ಗೆಲ್ಲುವ ಸಾಧ್ಯತೆ ಹೆಚ್ಚು. ಯಾಕೆಂದರೆ ಇಂಗ್ಲೆಂಡ್ ಪರಿಸ್ಥಿತಿಗಳು ನ್ಯೂಜಿಲೆಂಡ್‌ಗೆ ಹೆಚ್ಚು ಅನುಕೂಲ ಮಾಡುತ್ತವೆ ಎಂದು ಹೆಚ್ಚಿನ ಕ್ರಿಕೆಟ್ ಪರಿಣಿತರು ಹೇಳಿದ್ದರು. ಆದರೆ ಕೊಹ್ಲಿ, ಪರಿಸ್ಥಿತಿಗಳ ಬಗ್ಗೆ ನಮಗೆ ಏನೂ ಚಿಂತೆಯಿಲ್ಲ. ಬಲಿಷ್ಠ ನ್ಯೂಜಿಲೆಂಡ್ ವಿರುದ್ಧ ಗೆಲ್ಲಲು ನಾವು ಶ್ರಮಿಸಲಿದ್ದೇವೆ ಎಂದಿದ್ದಾರೆ.

ಕೊಹ್ಲಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಭಾರತ ಮಾಜಿ ಆಟಗಾರ ರಿತೀಂದರ್ ಸಿಂಗ್ ಸೋಧಿ, 'ಕೊಹ್ಲಿ ಭಾರತ ಯಾಕೆ ನಂ.1 ತಂಡ ಅನ್ನೋದನ್ನು ವಿಶ್ವಕ್ಕೆ ತೋರಿಸಿಕೊಡಲಿದ್ದಾರೆ. ಭಾರತ ತಂಡ ನಾಯಕ ಮತ್ತು ಕೋಚ್ ತಂಡದ ಆಟಗಾರರಲ್ಲಿ ಹೋರಾಟದ ಮನೋಭಾವವನ್ನು ಹುಟ್ಟುಹಾಕುತ್ತಲೇ ಇರುತ್ತಾರೆ,' ಎಂದಿದ್ದಾರೆ.

ಐಪಿಎಲ್‌ನಲ್ಲಿ ವಿದೇಶಿ ಆಟಗಾರರು ಆಡುವ ಬಗ್ಗೆ ಫ್ರಾಂಚೈಸಿಗಳಲ್ಲಿ ವಿಶ್ವಾಸಐಪಿಎಲ್‌ನಲ್ಲಿ ವಿದೇಶಿ ಆಟಗಾರರು ಆಡುವ ಬಗ್ಗೆ ಫ್ರಾಂಚೈಸಿಗಳಲ್ಲಿ ವಿಶ್ವಾಸ

ಜೂನ್ 18-22ರ ವರೆಗೆ ಭಾರತ-ನ್ಯೂಜಿಲೆಂಡ್ ಮಧ್ಯೆ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯ ನಡೆಯಲಿದೆ. ಅದಾಗಿ ಭಾರತ-ಇಂಗ್ಲೆಂಡ್ ಮಧ್ಯೆ ಐದು ಪಂದ್ಯಗಳ ಟೆಸ್ಟ್‌ ಸರಣಿ ನಡೆಯಲಿದೆ. ಭಾರತ-ಇಂಗ್ಲೆಂಡ್ ಟೆಸ್ಟ್‌ ಆಗಸ್ಟ್ 4ರಿಂದ ಆರಂಭಗೊಳ್ಳಲಿದೆ. ಸದ್ಯ ನ್ಯೂಜಿಲೆಂಡ್-ಇಂಗ್ಲೆಂಡ್ ಮಧ್ಯೆ ಎರಡು ಪಂದ್ಯಗಳ ಟೆಸ್ಟ್‌ ಸರಣಿ ನಡೆಯುತ್ತಿದೆ.

Story first published: Friday, June 4, 2021, 8:40 [IST]
Other articles published on Jun 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X