ದ್ರಾವಿಡ್ ಪೂರ್ಣಕಾಲಿಕ ಕೋಚ್ ಆಗುವುದು ಬೇಡ ಎಂದ ವಾಸಿಂ ಜಾಫರ್: ಕಾರಣ ಇಲ್ಲಿದೆ

ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಕೋಚ್ ಆಗುವುದು ಬೇಡ ಎಂದ ವಾಸಿಂ ಜಾಫರ್ | Oneindia Kannada

ಶ್ರೀಲಂಕಾ ವಿರುದ್ಧದ ಸೀಮಿತ ಓವರ್‌ಗಳ ಸರಣಿಗೆ ತೆರಳಿರುವ ಭಾರತೀಯ ತಂಡಕ್ಕೆ ರಾಹುಲ್ ದ್ರಾವಿಡ್ ಕೋಚ್ ಆಗಿದ್ದಾರೆ. ಸದ್ಯ ಶ್ರೀಲಂಕಾ ವಿರುದ್ಧದ ಸರಣಿಗೆ ಆಟಗಾರರನ್ನು ಸಜ್ಜುಗೊಳಿಸುತ್ತಿದ್ದಾರೆ ದ್ರಾವಿಡ್. ಈ ಸಂದರ್ಭದಲ್ಲಿ ರಾಹುಲ್ ದ್ರಾವಿಡ್ ಭಾರತ ಕ್ರಿಕೆಟ್ ತಂಡಕ್ಕೆ ಪೂರ್ಣಕಾಲಿಕ ಕೋಚ್ ಆಗಬೇಕು ಎಂಬ ಅಭಿಪ್ರಾಯಗಳು ಹೆಚ್ಚಾಗುತ್ತಿದೆ.

ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಟೆಸ್ಟ್ ತಂಡದ ಜೊತೆಗೆ ಮುಖ್ಯ ಕೋಚ್ ರವಿ ಶಾಸ್ತ್ರಿ ತೆರಳಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀಲಂಕಾ ಪ್ರವಾಸಕ್ಕೆ ತಾತ್ಕಾಲಿಕವಾಗಿ ದ್ರಾವಿಡ್ ಕೋಚ್ ಆಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಆದರೆ ಮುಂದಿನ ಟಿ20 ವಿಶ್ವಕಪ್‌ನ ಅಂತ್ಯವಾಗುತ್ತಿದ್ದಂತೆಯೇ ರವಿ ಶಾಸ್ತ್ರಿ ಅವರ ಕೋಚ್ ಅವಧಿ ಅಂತ್ಯವಾಗುತ್ತದೆ. ಹೀಗಾಗಿ ಮುಂದಿನ ಕೋಚ್ ಆಗಿ ರಾಹುಲ್ ದ್ರಾವಿಡ್ ಮುಂದುವರಿಯಲಿ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

ಶ್ರೀಲಂಕಾ ವಿರುದ್ಧದ ಸರಣಿ ಭಾರತದ ಪಾಲಿಗೆ ಹೆಚ್ಚು ಮಹತ್ವ ಯಾಕೆ ಗೊತ್ತಾ!ಶ್ರೀಲಂಕಾ ವಿರುದ್ಧದ ಸರಣಿ ಭಾರತದ ಪಾಲಿಗೆ ಹೆಚ್ಚು ಮಹತ್ವ ಯಾಕೆ ಗೊತ್ತಾ!

ಆದರೆ ಈ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅದಕ್ಕೆ ಕುತೂಹಲಕಾರಿ ಕಾರಣವೂ ಇದೆ. ಮುಂದೆ ಓದಿ..

ದ್ರಾವಿಡ್ ರಾಷ್ಟ್ರೀಯ ತಂಡದ ಕೋಚ್ ಆಗುವುದನ್ನು ಬಯಸಲ್ಲ

ದ್ರಾವಿಡ್ ರಾಷ್ಟ್ರೀಯ ತಂಡದ ಕೋಚ್ ಆಗುವುದನ್ನು ಬಯಸಲ್ಲ

"ದ್ರಾವಿಡ್ ಭಾರತ ತಂಡದ ಕೋಚ್ ಆಗಿ ಶ್ರೀಲಂಕಾಗೆ ತೆರಳಿದ್ದಾರೆ. ಖಂಡಿತಾ ಇದರಿಂದಾಗಿ ಭಾರತೀಯ ಕ್ರಿಕೆಟ್ ತಂಡದ ಯುವ ಆಟಗಾರರು ಸಾಕಷ್ಟು ಅನುಕೂಲಗಳನ್ನು ಪಡೆದುಕೊಳ್ಳಲಿದ್ದಾರೆ. ಆದರೆ ವೈಯಕ್ತಿಕವಾಗಿ ನನಗೆ ರಾಹುಲ್ ದ್ರಾವಿಡ್ ರಾಷ್ಟ್ರೀಯ ತಂಡದ ಕೋಚ್ ಆಗುವುದನ್ನು ಬಯಸುವುದಿಲ್ಲ" ಎಂದು ವಾಸಿಂ ಜಾಫರ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಅವರ ಅಗತ್ಯ ಯುವ ಆಟಗಾರರಿಗೆ ಹೆಚ್ಚಿದೆ

ಅವರ ಅಗತ್ಯ ಯುವ ಆಟಗಾರರಿಗೆ ಹೆಚ್ಚಿದೆ

"ನನ್ನ ಪ್ರಕಾರ ಅವರು ಭಾರತ ಅಂಡರ್ 19 ತಂಡ ಹಾಗೂ ಭಾರತ ಎ ತಂಡಕ್ಕೆ ಎನ್‌ಸಿಎಯ ಮುಖ್ಯಸ್ಥರಾಗಿದ್ದು ಕರ್ತವ್ಯ ನಿರ್ವಹಿಸುವ ಅಗತ್ಯ ಹೆಚ್ಚಿದೆ ಎಂದು ನಾನು ಭಾವಿಸುತ್ತೇನೆ. ನನ್ನ ಪ್ರಕಾರ ಭಾರತೀಯ ರಾಷ್ಟ್ರೀಯ ತಂಡದಲ್ಲಿರುವ ಆಟಗಾರರು ಸಿದ್ಧವಾಗಿರುವ ಉತ್ಪನ್ನಗಳು" ಎಂದು ವಾಸಿಂ ಜಾಫರ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಎನ್‌ಸಿಎನಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಲಿ

ಎನ್‌ಸಿಎನಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಲಿ

"ಆದರೆ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನ ಹಾಗೂ ಸಲಹೆಗಳು ಅಂಡರ್ 19 ಹಾಗೂ ಭಾರತ ಎ ಮಟ್ಟದಲ್ಲಿ ಹೆಚ್ಚಿನ ಅಗತ್ಯವಿದೆ. ತಮ್ಮ ಆಟದಲ್ಲಿ ಹೆಚ್ಚಿನ ಸಾಧನೆಯನ್ನು ಮಾಡಲು ಹಾಗೂ ಮುಂದಿನ ಹಂತಕ್ಕೇರಲು ಈ ಯುವ ಆಟಗಾರರಿಗೆ ದ್ರಾವಿಡ್ ಮಾರ್ಗದರ್ಶನ ತುಂಬಾ ಅಗತ್ಯವಿದೆ. ಹೀಗಾಗಿ ಎನ್‌ಸಿಎನಲ್ಲಿ ದ್ರಾವಿಡ್ ಸುದೀರ್ಘ ಕಾಲ ಇದ್ದು ನಮ್ಮ ಬೆಂಚ್ ಸಾಮರ್ಥ್ಯವನ್ನು ಬೆಳೆಸುವ ಅವಶ್ಯಕತೆಯಿದೆ" ಎಂದು ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಹೇಳಿದ್ದಾರೆ.

ದ್ರಾವಿಡ್‌ಗಿಂತ ಉತ್ತಮ ಆದರ್ಶ ವ್ಯಕ್ತಿಯಿಲ್ಲ

ದ್ರಾವಿಡ್‌ಗಿಂತ ಉತ್ತಮ ಆದರ್ಶ ವ್ಯಕ್ತಿಯಿಲ್ಲ

"ಇನ್ನು ಭಾರತದಲ್ಲಿ ಉತ್ತಮ ಆಟಗಾರರ ಸಂಕ್ಯೆ ಹೆಚ್ಚಿನ ಪ್ರಮಾಣದಲ್ಲಿ ಇರುವುದಕ್ಕೆ ಖಂಡಿತವಾಗಿಯೂ ಬಿಸಿಸಿಐಗೆ ಅದರ ಶ್ರೇಯಸ್ಸನ್ನು ನೀಡಬೇಕು. ಕ್ರಿಕೆಟ್ ಆಟಗಾರರ ಬೆಳವಣಿಗೆಗೆ ಹಾಗೂ ಅದಕ್ಕೆ ಪೂರಕವಾದ ವೇದಿಕೆಯನ್ನು ರೂಪಿಸುತ್ತಿದೆ. ಹೀಗಾಗಿ ಭಾರತ ಹೆಚ್ಚಿನ ಬೆಂಚ್ ಸಾಮರ್ಥ್ಯವನ್ನು ಹೊಂದಿದೆ. ಇನ್ನೂ ಹೆಚ್ಚಿನ ಶ್ರೇಯಸ್ಸು ರಾಹುಲ್ ದ್ರಾವಿಡ್‌ಗೆ ಸಲ್ಲಬೇಕು. ಅವರು ಎನ್‌ಸಿಎನಲ್ಲಿ ಮುಖ್ಯ ತರಬೇತುದಾರನಾಗಿ ಕಾರ್ಯನಿರ್ವಹಿಸುತ್ತಿರುವ ರೀತಿ ಹಾಗೂ ಅಂಡರ್ 19 ಹಾಗೂ ಇಂಡಿಯಾ ಎ ಆಟಗಾರರಿಗೆ ಮಾರ್ಗದರ್ಶನ ನೀಡಿದ ರೀತಿ ಮಹತ್ವದ್ದಾಗಿದೆ. ರಾಹುಲ್ ದ್ರಾವಿಡ್‌ಗಿಂತ ಉತ್ತಮ ಆದರ್ಶ ವ್ಯಕ್ತಿ ಹಾಘೂ ಮಾರ್ಗದರ್ಶಕ ಇರಲು ಸಾಧ್ಯವಿಲ್ಲ" ಎಂದು ದ್ರಾವಿಡ್ ಕರ್ತವ್ಯದ ಬಗ್ಗೆ ವಾಸಿಂ ಜಾಫರ್ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Friday, July 9, 2021, 15:48 [IST]
Other articles published on Jul 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X