BBL: ಮಂಕಡ್ ರನ್ ಔಟ್ ಮಾಡಲು ಯತ್ನಿಸಿದ ಆಡಮ್ ಝಂಪಾ: ವಿಡಿಯೋ ವೈರಲ್

ಕ್ರಿಕೆಟ್ ಜಗತ್ತಿನಲ್ಲಿ ಮತ್ತೆ ಮಂಕಡಿಂಗ್ ಅಥವಾ ಮಂಕಡ್ ರನ್ ಔಟ್ ವಿಚಾರ ಮುನ್ನಲೆಗೆ ಬಂದಿದೆ. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್‌ ಬ್ಯಾಷ್‌ ಲೀಗ್‌ನಲ್ಲಿ ಆಡಮ್ ಝಂಪಾ ಮಂಕಡ್ ರನೌಟ್ ಮಾಡಲು ಯತ್ನಿಸಿದ್ದು, ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ.

ಜನವರಿ 3 ರಂದು ಬುಧವಾರ ನಡೆಯುತ್ತಿರುವ ಮೆಲ್ಬೋರ್ನ್ ರೆನೆಗೇಡ್ಸ್ ವಿರುದ್ಧದ ಪಂದ್ಯದಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ನಾಯಕ ಆಡಮ್ ಝಂಪಾ ಅವರು 'ಮಂಕಡ್' ರನ್ ಔಟ್ ಮಾಡಲು ಯತ್ನಿಸಿದರು. 20ನೇ ಓವರ್ ನ 4ನೇ ಎಸೆತದಲ್ಲಿ ಟಾಮ್ ರೋಜರ್ಸ್ ವಿರುದ್ಧ ಆಡಮ್ ಝಂಪಾ ಈ ತಂತ್ರವನ್ನು ಬಳಸಿದರು. ಆಡಮ್ ಝಂಫಾ ಮಂಕಡ್ ರನೌಟ್ ಮಾಡುತ್ತಿದ್ದಂತೆ ಟಾಮ್ ರೋಜರ್ಸ್ ಸಹ ಬ್ಯಾಟರ್ ಆಘಾತದಿಂದ ತಲೆ ಅಲ್ಲಾಡಿಸಿದರು.

ಟಾಮ್ ರೋಜರ್ಸ್ ಔಟ್ ಆದನೆಂದು ತಿಳಿದು ಪೆವಿಲಿಯನ್ ಕಡೆ ಹೆಜ್ಜೆ ಹಾಕಲು ಮುಂದಾದರು. ಆದರೆ, ಅಂಪೈರ್ ಮೂರನೇ ಅಂಪೈರ್ ಗೆ ಪರಿಶೀಲನೆಗೆ ಮನವಿ ಮಾಡಿದರು. ಝಂಪಾ ತಮ್ಮ ಬೌಲಿಂಗ್ ಆಕ್ಷನ್ ಪೂರ್ಣಗೊಳಿಸಿದ ನಂತರ ಬೇಲ್ ಎಗರಿಸಿದ್ದರಿಂದ ಅದನ್ನು ಅಂಪೈರ್ ನಾಟ್ ಔಟ್ ಎಂದು ನಿರ್ಣಯಿಸಿದರು.

RCB Playing 11 : ಈ ಮೂವರು ಉತ್ತಮ ಆರ್‌ಸಿಬಿ ಆಟಗಾರರು 2023ರ ಐಪಿಎಲ್‌ನಲ್ಲಿ ಬೆಂಚ್‌ ಕಾಯುವ ಸಾಧ್ಯತೆRCB Playing 11 : ಈ ಮೂವರು ಉತ್ತಮ ಆರ್‌ಸಿಬಿ ಆಟಗಾರರು 2023ರ ಐಪಿಎಲ್‌ನಲ್ಲಿ ಬೆಂಚ್‌ ಕಾಯುವ ಸಾಧ್ಯತೆ

ಝಂಪಾ ಮಂಕಡ್ ರನ್ ಔಟ್ ಮಾಡುತ್ತಿದ್ದಂತೆ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ಜೋರಾಗಿ ಕೂಗಿದರು. ಹೆಚ್ಚಿನ ಅಭಿಮಾನಿಗಳು ಮೆಲ್ಬೋರ್ನ್ ಸ್ಟಾರ್ಸ್ ಪರವಾಗಿದ್ದರೂ, ಝಂಪಾ ಮಂಕಡಿಂಗ್ ಮಾಡುವ ಯತ್ನಕ್ಕೆ ವಿರೋಧ ವ್ಯಕ್ತಡಿಸಿದರು.

ಇನ್ನಿಂಗ್ಸ್ ವಿರಾಮದ ಸಮಯದಲ್ಲಿ ವಿವರಣೆ ನೀಡಿದ ಬ್ರೆಟ್ ಲೀ, ಈ ರೀತಿಯ ನಿಯಮ ನನಗೆ ಇಷ್ಟವಿಲ್ಲ, ಈ ರೀತಿಯ ಔಟ್ ಮಾಡಬಾರದು ಎಂದು ಭಾವಿಸುತ್ತೇನೆ ಎಂದರು. ನೀವು ಬ್ಯಾಟರ್ ಗೆ ಎಚ್ಚರಿಕೆ ನೀಡಿರಿ, ಕ್ರೀಸ್‌ನಿಂದ ಬ್ಯಾಟರ್ ಮುಂದೆ ಬಂದರೆ 5 ರನ್ ಪೆನಾಲ್ಟಿ ಹಾಕಲಿ, ಈ ರೀತಿ ಔಟ್ ಮಾಡುವುದು ಉತ್ತಮವಲ್ಲ, ಕ್ರಿಕೆಟ್‌ನಲ್ಲಿ ಈ ರೀತಿಯದನ್ನು ನೋಡಲು ನನಗೆ ಇಷ್ಟವಿಲ್ಲ ಎಂದರು.

ಮಂಕಡ್ ರನೌಟ್ ಕಾನೂನುಬದ್ಧ

1948ರಲ್ಲಿ ನಡೆದ ಸಿಡ್ನಿ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾದ ಬ್ಯಾಟರ್ ಬಿಲ್ ಬ್ರೌನ್‌ರನ್ನು ನಾನ್‌ ಸ್ಟ್ರೈಕರ್ ಎಂಡ್‌ನಲ್ಲಿ ರನೌಟ್ ಮಾಡಿದ ಭಾರತದ ಬೌಲರ್ ವಿನೋದ್ 'ಮಂಕಡ್' ಅವರ ಹೆಸರಿನಲ್ಲಿ ಈ ರೀತಿಯ ರನೌಟ್‌ ಅನ್ನು ಗುರುತಿಸಲಾಗುತ್ತಿದೆ. ಅಂದಿನಿಂದ ಈ ರೀತಿಯ ರನೌಟ್ ನಡೆದಾಗಲೆಲ್ಲ, ಚರ್ಚೆ ವಿವಾದ ನಡೆಯುತ್ತಲೇ ಇದೆ.

ಐಪಿಎಲ್‌ನಲ್ಲಿ ರವಿಚಂದ್ರನ್ ಅಶ್ವಿನ್ ಜೋಸ್‌ ಬಟ್ಲರ್ ರನ್ನು ಮಂಕಡ್ ರನ್ ಔಟ್ ಮಾಡಿದ ನಂತರ ಈ ಬಗ್ಗೆ ಹೆಚ್ಚಿನ ಚರ್ಚೆಯಾಯಿತು. ಅದಾದ ನಂತರ 2022ರಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯ ಪಂದ್ಯದಲ್ಲಿ ದೀಪ್ತಿ ಶರ್ಮಾ ಇಂಗ್ಲೆಂಡ್‌ನ ಚಾರ್ಲಿ ಡೀನ್‌ರನ್ನು ಮಂಕಡಿಂಗ್ ಮಾಡಿದ್ದು ಕೂಡ ವಿವಾದ ಹುಟ್ಟುಹಾಕಿತ್ತು. ನಂತರ ಐಸಿಸಿ ಮಂಕಡ್ ರನ್‌ ಔಟ್‌ ವಿಧಾನವನ್ನು ಕಾನೂನುಬದ್ದಗೊಳಿಸಿ ತೀರ್ಪು ನೀಡಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, January 3, 2023, 16:36 [IST]
Other articles published on Jan 3, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X