ಜೂಲನ್ ಗೋಸ್ವಾಮಿಗಾಗಿ ಲಾರ್ಡ್ಸ್ ಅಂಗಳದಲ್ಲಿ ಗೆಲವು ಸಾಧಿಸಬೇಕು : ಹರ್ಮನ್‌ಪ್ರೀತ್ ಕೌರ್

ಭಾರತ-ಇಂಗ್ಲೆಂಡ್ ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆಯ ಏಕದಿನ ಪಂದ್ಯ ಸೆಪ್ಟೆಂಬರ್ 24 ರಂದು (ಶನಿವಾರ) ಲಾರ್ಡ್ಸ್‌ನಲ್ಲಿ ನಡೆಯಲಿದ್ದು, ಕೊನೆಯ ಪಂದ್ಯದಲ್ಲಿ ಗೆಲ್ಲುವ ಮೂಲಕ ಲೆಜಂಡರಿ ಮಹಿಳಾ ಕ್ರಿಕೆಟರ್ ವೇಗಿ ಜೂಲನ್ ಗೋಸ್ವಾಮಿಗೆ ಗೆಲುವಿನ ವಿದಾಯ ನೀಡಲಿದ್ದೇವೆ ಎಂದು ನಾಯಕಿ ಹರ್ಮನ್‌ಪ್ರೀತ್ ಕೌರ್ ಹೇಳಿದ್ದಾರೆ.

ಕ್ಯಾಂಟರ್ಬರಿಯಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಐತಿಹಾಸಿಕ ವಿಜಯದ ನಂತರ ಮಾತನಾಡಿದ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್, "ಲಾರ್ಡ್ಸ್‌ನಲ್ಲಿ ನಡೆಯುವ ಪಂದ್ಯವು ನಮಗೆ ತುಂಬಾ ವಿಶೇಷವಾಗಿದೆ ಏಕೆಂದರೆ ಇದು ಜೂಲನ್ ಗೋಸ್ವಾಮಿ ಅವರ ಕೊನೆಯ ಪಂದ್ಯ ಮತ್ತು ನಾವು ಆ ಆಟವನ್ನು ಯಾವುದೇ ಒತ್ತಡವಿಲ್ಲದೆ ಆನಂದಿಸಲು ಬಯಸಿದ್ದೇವೆ. ಒತ್ತಡವಿಲ್ಲದೇ ಆಡಿದ್ದೇ ಎರಡನೇ ಪಂದ್ಯವನ್ನು ಗೆಲ್ಲಲು ಸಾಧ್ಯವಾಯಿತು ಮತ್ತು ಈಗ ನಾವು ಆ ಆಟದಲ್ಲಿ ಆನಂದಿಸಬಹುದು ಎಂದು ನನಗೆ ಸಂತೋಷವಾಗಿದೆ" ಎಂದು ಹೇಳಿದರು.

IPL 2023: ಹಳೆ ಮಾದರಿಯಲ್ಲಿ ಐಪಿಎಲ್ ಆಯೋಜನೆ, ಮೂರು ವರ್ಷಗಳ ನಂತರ ತವರಿನಲ್ಲಿ ಆಡಲಿದೆ ಆರ್‌ಸಿಬಿIPL 2023: ಹಳೆ ಮಾದರಿಯಲ್ಲಿ ಐಪಿಎಲ್ ಆಯೋಜನೆ, ಮೂರು ವರ್ಷಗಳ ನಂತರ ತವರಿನಲ್ಲಿ ಆಡಲಿದೆ ಆರ್‌ಸಿಬಿ

ಮೂರು ಪಂದ್ಯಗಳ ಸರಣಿಯಲ್ಲಿ ಭಾರತದ ವನಿತೆಯರು ಮೊದಲ ಎರಡು ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಸೆಪ್ಟೆಂಬರ್ 24 ರಂದು ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುವ ಸರಣಿಯ ಕೊನೆಯ ಪಂದ್ಯವನ್ನು ಗೆಲ್ಲುವ ಮೂಲಕ ಜೂಲನ್ ಗೋಸ್ವಾಮಿಗೆ ಗೆಲುವಿನೊಂದಿಗೆ ವಿದಾಯ ಹೇಳಲು ಭಾರತದ ವನಿತೆಯರು ಯೋಜಿಸಿದ್ದಾರೆ.

2017ರ ನಂತರ ಲಾರ್ಡ್ಸ್‌ ಅಂಗಳದಲ್ಲಿ ಭಾರತದ ವನಿತೆಯರು

2017ರ ನಂತರ ಲಾರ್ಡ್ಸ್‌ ಅಂಗಳದಲ್ಲಿ ಭಾರತದ ವನಿತೆಯರು

2017 ರ ಮಹಿಳಾ ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ಲಾರ್ಡ್ಸ್‌ ಮೈದಾನದಲ್ಲಿ ಇಂಗ್ಲೆಂಡ್ ಮತ್ತು ಭಾರತ ಮುಖಾಮುಖಿಯಾಗಿದ್ದವು. ಪಂದ್ಯದ ಬಹುಪಾಲು ಆಟದಲ್ಲಿ ಪ್ರಾಬಲ್ಯ ಸಾಧಿಸಿದ ನಂತರ ಭಾರತ ಸೋಲನುಭವಿಸಿತು. ಅದಾದ ನಂತರ ಇದೇ ಮೊದಲ ಬಾರಿಗೆ ಐತಿಹಾಸಿಕ ಲಾರ್ಡ್ಸ್‌ ಅಂಗಳದಲ್ಲಿ ಎರಡೂ ತಂಡಗಳು ಮುಖಾಮುಖಿಯಾಗುತ್ತಿವೆ.

ಲಾರ್ಡ್ಸ್‌ನಲ್ಲಿ ನಡೆಯುವ ಸರಣಿಯ ಏಕದಿನ ಪಂದ್ಯದಲ್ಲಿ ಶತಾಯ ಗತಾಯ ಗೆಲ್ಲಲೇಬೇಕು ಎಂದು ಬಯಕೆ ವ್ಯಕ್ತಪಡಿಸಿರುವ ನಾಯಕಿ ಹರ್ಮನ್‌ಪ್ರೀತ್ ಕೌರ್, ಜೂಲನ್ ಗೋಸ್ವಾಮಿಗೆ ಗೆಲುವಿನೊಂದಿಗೆ ವಿದಾಯ ಹೇಳಲು ಆಶಿಸಿದ್ದಾರೆ.

India squad for Women's Asia Cup 2022 : ಹರ್ಮನ್‌ಪ್ರೀತ್ ನಾಯಕತ್ವದ ಬಲಿಷ್ಠ ಭಾರತ ತಂಡ ಪ್ರಕಟಿಸಿದ ಬಿಸಿಸಿಐ

ಸರಣಿ ಗೆದ್ದು ಇತಿಹಾಸ ನಿರ್ಮಿಸಿದ ಭಾರತ

ಸರಣಿ ಗೆದ್ದು ಇತಿಹಾಸ ನಿರ್ಮಿಸಿದ ಭಾರತ

ಬುಧವಾರ ನಡೆದ ಎರಡನೇ ಪಂದ್ಯದಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಭರ್ಜರಿ ಶತಕ (111 ಎಸೆತಗಳಲ್ಲಿ 143 ರನ್)ದ ನೆರವಿನಿಂದ ಭರ್ಜರಿ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಮಹಿಳಾ ತಂಡ, 50 ಓವರ್ ಗಳಲ್ಲಿ 333 ರನ್ ಗಳಿಸಿದರು.

ಬೃಹತ್ ಮೊತ್ತವನ್ನು ಬೆನ್ನತ್ತಿದ ಇಂಗ್ಲೆಂಡ್ ಮಹಿಳೆಯರನ್ನು 44.2 ಓವರ್ ಗಳಲ್ಲಿ 245 ರನ್‌ಗಳಿ ಆಲೌಟ್ ಮಾಡುವ ಮೂಲಕ ಭಾರತದ ಮಹಿಳಾ ತಂಡ 88 ರನ್‌ಗಳ ಭರ್ಜರಿ ಸಾಧಿಸುವ ಮೂಲಕ 2-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡರು. 1999ರ ನಂತರ ಇದೇ ಮೊದಲ ಬಾರಿಗೆ ಭಾರತದ ಮಹಿಳೆಯರು ಇಂಗ್ಲೆಂಡ್ ನೆಲದಲ್ಲಿ ಸರಣಿಯನ್ನು ಗೆದ್ದ ಸಾಧನೆ ಮಾಡಿದರು.

ಸರಣಿ ಗೆದ್ದ ಬಗ್ಗೆ ಹರ್ಮನ್‌ಪ್ರೀತ್ ಕೌರ್ ಸಂತಸ

ಸರಣಿ ಗೆದ್ದ ಬಗ್ಗೆ ಹರ್ಮನ್‌ಪ್ರೀತ್ ಕೌರ್ ಸಂತಸ

ಎರಡನೇ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ ಮಾತನಾಡಿದ ಹರ್ಮನ್‌ಪ್ರೀತ್ ಕೌರ್, "ನೀವು ಮೊದಲ ಪಂದ್ಯವನ್ನು ಗೆದ್ದಾಗ, ಎರಡನೇ ಪಂದ್ಯವು ಯಾವಾಗಲೂ ಮುಖ್ಯವಾಗಿದೆ. ನಾವು ಯಾವಾಗಲೂ ಆ ಆಟವನ್ನು ಗೆಲ್ಲುವ ತಂಡವಾಗಿ ಮುಗಿಸಲು ಪ್ರಯತ್ನಿಸುತ್ತೇವೆ. ಇಂದು ನಾವು ಅದನ್ನು ಮಾಡಿದ್ದೇವೆ, ಲಾರ್ಡ್ಸ್ ಮೈದಾನದಲ್ಲಿ ನಡೆಯುವ ಪಂದ್ಯದಲ್ಲಿ ನಮ್ಮ ಮೇಲೆ ಯಾವುದೇ ಹೆಚ್ಚುವರಿ ಒತ್ತಡವನ್ನು ಹೊಂದಲು ಬಯಸುವುದಿಲ್ಲ" ಎಂದು ಹೇಳಿದರು.

ಗೆಲುವು ಸಾಧಿಸುವುದು ಬಹಳ ಮುಖ್ಯ, ಏಕೆಂದರೆ ಅದು ಜೂಲನ್ ಗೋಸ್ವಾಮಿಯ ಕೊನೆಯ ಪಂದ್ಯವಾಗಿದೆ. ಜೂಲನ್ ಗೋಸ್ವಾಮಿ, ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ ಅಚ್ಚಳಿಯದ ಹೆಸರು. ಇದು ನಮಗೆಲ್ಲರಿಗೂ ಬಹಳ ಭಾವನಾತ್ಮಕ ಕ್ಷಣವಾಗಿದೆ ಮತ್ತು ನಾವು ಖಂಡಿತವಾಗಿಯೂ ಆ ಪಂದ್ಯವನ್ನು ಗೆಲ್ಲಲು ಬಯಸುತ್ತೇವೆ. ಸರಣಿ ಗೆದ್ದ ನಂತರ ನಾವು ಮೋಜು ಮಾಡಲು ಬಯಸುತ್ತೇವೆ ಏಕೆಂದರೆ ಇದು ಅವಳಿಗೆ ಕೊನೆಯ ಪಂದ್ಯ ಎಂದು ನನಗೆ ತಿಳಿದಿದೆ, ಎಂದು ಹೇಳಿದರು.

20 ವರ್ಷಗಳ ಕ್ರಿಕೆಟ್ ಬದುಕಿಗೆ ವಿದಾಯ

20 ವರ್ಷಗಳ ಕ್ರಿಕೆಟ್ ಬದುಕಿಗೆ ವಿದಾಯ

2002 ರಲ್ಲಿ ತನ್ನ ಅಂತರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದ ಜೂಲನ್ ಫೆಬ್ರವರಿ 2018 ರಲ್ಲಿ, ಗೋಸ್ವಾಮಿ ಮಹಿಳಾ ಕ್ರಿಕೆಟ್‌ನಲ್ಲಿ 200 ODI ವಿಕೆಟ್‌ಗಳನ್ನು ಪಡೆದ ಮೊದಲ ಬೌಲರ್ ಎನಿಸಿಕೊಂಡರು. 2018 ರಲ್ಲಿ ಟಿ20 ಮಾದರಿ ಕ್ರಿಕೆಟ್‌ನಿಂದ ನಿವೃತ್ತರಾದರು. ಅಕ್ಟೋಬರ್ 2021 ರಲ್ಲಿ ತನ್ನ ಕೊನೆಯ ಟೆಸ್ಟ್ ಅನ್ನು ಆಡಿದರು. ಈಗ ಏಕದಿನ ಮಾದರಿ ಕ್ರಿಕೆಟ್‌ಗೂ ವಿದಾಯ ಹೇಳಲಿದ್ದು, ಲಾರ್ಡ್ಸ್‌ನಲ್ಲಿ ನಡೆಯುವುದು ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಲಿದೆ.

ಈ ವರ್ಷದ ಮಾರ್ಚ್‌ನಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಭಾರತಕ್ಕಾಗಿ ಕೊನೆಯ ಬಾರಿಗೆ ಆಡಿದ್ದರು. ಒಟ್ಟಾರೆಯಾಗಿ, ಅವರು ಆರು ವಿಶ್ವಕಪ್ ಪಂದ್ಯಗಳು ಸೇರಿದಂತೆ 12 ಟೆಸ್ಟ್, 68 ಟಿ20 ಮತ್ತು 201 ಏಕದಿನ ಪಂದ್ಯಗಳನ್ನು ಆಡಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, September 22, 2022, 17:11 [IST]
Other articles published on Sep 22, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X