ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಆಸ್ಟ್ರೇಲಿಯಾ ಆಟಗಾರರೊಂದಿಗೆ ಲಿಫ್ಟ್‌ಗೆ ಹತ್ತೋಕೂ ಅವಕಾಶ ಇರಲ್ಲಿಲ್ಲ'

Werent allowed to enter lift with Australian players as part of Covid restrictions: R Ashwin

ನವದೆಹಲಿ: ಇತ್ತೀಚೆಗೆ ಮುಕ್ತಾಯಗೊಂಡ ಭಾರತ vs ಆಸ್ಟ್ರೇಲಿಯಾ ಸರಣಿಯ ವೇಳೆ ಭಾರತೀಯ ಆಟಗಾರರು ಅನುಭವಿಸಿದ ಸವಾಲಿನ ಸಂಗತಿಗಳ ಬಗ್ಗೆ ಭಾರತದ ಅನುಭವಿ ಸ್ಪಿನ್ನರ್ ಆರ್‌ ಅಶ್ವಿನ್ ಮಾತನಾಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ಆಸೀಸ್ ಆಟಗಾರರ ಜೊತೆ ಭಾರತೀಯ ಆಟಗಾರರು ಲಿಫ್ಟ್‌ಗೆ ಹತ್ತುವಂತೆಯೂ ಇರಲಿಲ್ಲ ಎಂದು ಅಶ್ವಿನ್ ಹೇಳಿದ್ದಾರೆ.

ಭಾರತದ ಪರ ಟೆಸ್ಟ್‌ನಲ್ಲಿ ಆರಂಭಿಕನಾಗಿ ಕಣಕ್ಕಿಳಿಯುವ ಕನಸು ವ್ಯಕ್ತಪಡಿಸಿದ ವಾಶಿಂಗ್ಟನ್ ಸುಂದರ್ಭಾರತದ ಪರ ಟೆಸ್ಟ್‌ನಲ್ಲಿ ಆರಂಭಿಕನಾಗಿ ಕಣಕ್ಕಿಳಿಯುವ ಕನಸು ವ್ಯಕ್ತಪಡಿಸಿದ ವಾಶಿಂಗ್ಟನ್ ಸುಂದರ್

'ನಾವು ಸಿಡ್ನಿ ತಲುಪಿದೆವು. ಕೂಡಲೇ ನಮ್ಮನ್ನು ಬಹಳಷ್ಟು ನಿರ್ಬಂಧಗಳೊಂದಿಗೆ ಒಂದು ರೂಮಿನಲ್ಲಿ ಕೂಡಿಹಾಕಲಾಯ್ತು. ಸಿಡ್ನಿಯಲ್ಲಿದ್ದಾಗ ವಿಚಿತ್ರ ಅನುಭವಗಳು ಭಾರತೀಯರಿಗಾದವು. ಪ್ರಮಾಣಿಕವಾಗಿ ಹೇಳೋದಾದ್ರೆ ಅವು ತುಂಬಾ ವಿಭಿನ್ನ ಅನ್ನಿಸಿದವು,' ಎಂದು ಅಶ್ವಿನ್ ಆಸ್ಟ್ರೇಲಿಯಾ ಪ್ರವಾಸದ ವೇಳೆಯ ಅನುಭವ ಹಂಚಿಕೊಂಡಿದ್ದಾರೆ.

'ಭಾರತೀಯ ಮತ್ತು ಆಸ್ಟ್ರೇಲಿಯನ್ ಆಟಗಾರರು ಒಂದೇ ಬಯೋ ಬಬಲ್‌ನಲ್ಲಿದ್ದೆವು. ಆದರೆ ಆಸ್ಟ್ರೇಲಿಯನ್ ಆಟಗಾರರು ಲಿಫ್ಟ್‌ನಲ್ಲಿದ್ದಾಗ ಒಳಗೆ ಜಾಗ ಇದ್ದರೂ ಭಾರತೀಯ ಆಟಗಾರರಿಗೆ ಲಿಫ್ಟ್‌ ಹತ್ತೋಕೆ ಅವಕಾಶ ನೀಡುತ್ತಿರಲಿಲ್ಲ. ಆ ಸಮಯ ನಮಗೆ ತುಂಬಾ ಬೇಜಾರಾಗಿತ್ತು. ನಾವು ಒಂದೇ ಬಬಲ್‌ನಲ್ಲಿದ್ದರೂ ಆಸ್ಟ್ರೇಲಿಯಾ ಆಟಗಾರರಿದ್ದ ಲಿಫ್ಟ್‌ ಹತ್ತೋಕೆ ಅವಕಾಶ ಇರಲಿಲ್ಲ. ಅದನ್ನು ನಮ್ಮಿಂದ ಅರಗಿಸಿಕೊಳ್ಳಲಾಗುತ್ತಿರಲ್ಲ,' ಎಂದು ಅಶ್ವಿನ್ ವಿವರಿಸಿದ್ದಾರೆ.

ಚೇತೇಶ್ವರ ಪೂಜಾರ ಟೆಸ್ಟ್ ದಾಖಲೆಗಳು, ಅಚ್ಚರಿಯ ಅಂಕಿ-ಅಂಶಗಳು!ಚೇತೇಶ್ವರ ಪೂಜಾರ ಟೆಸ್ಟ್ ದಾಖಲೆಗಳು, ಅಚ್ಚರಿಯ ಅಂಕಿ-ಅಂಶಗಳು!

ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋಗಿದ್ದ ಭಾರತ ಕೊರೊನಾ ವೈರಸ್ ಕಾರಣದಿಂದಾಗಿ ಕೊಂಚ ಪರದಾಡುವಂತೆಯಾಗಿತ್ತು. ಭಾರತೀಯ ಆಟಗಾರರಿಗೆ ಕಠಿಣ ನಿರ್ಬಂಧಗಳನ್ನು ಹೇರಿದ್ದ ಆಸ್ಟ್ರೇಲಿಯಾ ಇದಕ್ಕೆಲ್ಲ ಕೊರೊನಾ ಮುನ್ನೆಚ್ಚರಿಕೆ ಎಂಬ ಸಬೂಬು ನೀಡಿತ್ತು. ಅಂದ್ಹಾಗೆ ಪ್ರವಾಸ ಸರಣಿಯಲ್ಲಿ ಏಕದಿನ ಸರಣಿ ಆಸ್ಟ್ರೇಲಿಯಾ ಗೆದ್ದಿದ್ದರೆ, ಟಿ20ಐ ಮತ್ತು ಟೆಸ್ಟ್ ಸರಣಿಯಲ್ಲಿ ಭಾರತ ಗೆದ್ದಿತ್ತು.

Story first published: Monday, January 25, 2021, 17:38 [IST]
Other articles published on Jan 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X