ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಣಜಿ: ಬೌಲರ್‌ಗಳ ಮೆರೆದಾಟ: ಬ್ಯಾಟ್ಸ್‌ಮನ್‌ಗಳ ಪರದಾಟ: ಸಂಕಷ್ಟದಲ್ಲಿ ಕರ್ನಾಟಕ

west bengal vs karnataka semifinal match day 3

ಕೊಲ್ಕತ್ತಾ: ರಣಜಿ ಟೂರ್ನಿಯ ಸೆಮಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಪ್ರದರ್ಶನವನ್ನು ನೀಡದೆ ಎದುರಾಳಿ ಪಶ್ಚಿಮ ಬಂಗಾಳ ತಂಡಕ್ಕೆ ಭಾರಿ ಮುನ್ನಡೆ ಪಡೆಯುವಂತೆ ಮಾಡಿದೆ. ಆದರೆ ಬಳಿಕ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗೆ ಇಳಿದಿರುವ ಪ.ಬಂಗಾಳ ತಂಡದ ನಾಲ್ಕು ವಿಕೆಟ್ ಪಡೆಯುವಲ್ಲಿ ಕರ್ನಾಟಕ ಯಶಸ್ವಿಯಾಗಿದೆ.

ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ದಾಳಿ ಅದ್ಭುತವಾಗಿತ್ತು. ಆದರೆ ಬಂಗಾಳದ ಆಟಗಾರ ಮುಜುಮ್ದಾರ್ ವಿಕೆಟ್ ಪಡೆಯಲು ವಿಫಲರಾದ ಕಾರಣ ಕರ್ನಾಟಕ ಬೌಲರ್‌ಗಳು ಪಶ್ಚಿಮ ಬಂಗಾಳ 300ರ ಗಡಿ ದಾಟಲು ಸಾಧ್ಯವಾಯಿತು.

ರಣಜಿ ಸೆ.ಫೈನಲ್: ಕರ್ನಾಟಕ ವಿರುದ್ಧ ಬೆಂಗಾಲ್‌ನ ಅನುಸ್ತೂಪ್ ಅಬ್ಬರದಾಟರಣಜಿ ಸೆ.ಫೈನಲ್: ಕರ್ನಾಟಕ ವಿರುದ್ಧ ಬೆಂಗಾಲ್‌ನ ಅನುಸ್ತೂಪ್ ಅಬ್ಬರದಾಟ

ಈ ಸವಾಲಿನ ಮೊತ್ತವನ್ನು ಸೇರಿಸಿದ ಬಳಿಕ ಪಶ್ಚಿಮ ಬಂಗಾಳ ತಂಡ ಕರ್ನಾಟಕ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡವನ್ನು ಹೇರಲು ಪ್ರಾರಂಭಿಸಿದರು. ಕೊಲ್ಕತ್ತಾದ ಈಡನ್ ಗಾರ್ಡನ್ ಪಿಚ್‌ನಲ್ಲಿ ಕರ್ನಾಟಕ ಬ್ಯಾಟ್ಸ್‌ಮನ್‌ಗಳು ಬ್ಯಾಟಿಂಗ್ ಮಾಡಲು ವಿಫಲರಾದರು.

ಕರ್ನಾಟಕ ಪರವಾಗಿ ಕೆ.ಎಲ್ ರಾಹುಲ್, ಮನೀಶ್ ಪಾಂಡೆಯಂತಾ ಆಟಗಾರರು ಇದ್ದರೂ ಕರ್ನಾಟಕ ತಂಡವನ್ನು ಕೇವಲ 122 ರನ್‌ಗೆ ಆಲೌಟ್ ಮಾಡುವಲ್ಲಿ ಪಶ್ಚಿಮ ಬಂಗಾಳ ಬೌಲರ್‌ಗಳು ಯಶಸ್ವಿಯಾಗಿದ್ದಾರೆ. ಐಸಿ ಪೋರೆಲ್ ಕರ್ನಾಟಕದ ಐದು ವಿಕೆಟ್ ಕಿತ್ತು ಕರ್ನಾಟಕದ ಪಾಲಿಗೆ ವಿಲನ್ ಆಗಿ ಪರಿಣಮಿಸಿದರು. ಈ ಮೂಲಕ ಕರ್ನಾಟಕ 190 ರನ್‌ಗಳ ಬೃಹತ್ ಹಿನ್ನೆಡೆಯನ್ನು ಅನುಭವಿಸುವಂತಾಯಿತು.

90 ರನ್‌ಗೆ 6 ವಿಕೆಟ್ ಕಳೆದುಕೊಂದು ಸಂಕಷ್ಟದಲ್ಲಿ ಭಾರತ90 ರನ್‌ಗೆ 6 ವಿಕೆಟ್ ಕಳೆದುಕೊಂದು ಸಂಕಷ್ಟದಲ್ಲಿ ಭಾರತ

ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿ ಕರ್ನಾಟಕ ಬೌಲರ್‌ಗಳು ಉತ್ತಮ ಆಟವನ್ನು ಪ್ರದರ್ಶಿಸಿದ್ದಾರೆ. ಪಶ್ಚಿಮ ಬಂಗಾಳ 74 ರನ್‌ಗೆ 4 ವಿಕೆಟ್ ಕಳೆದುಕೊಂಡಿದೆ. ಆದರೆ ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್ ಮುನ್ನಡೆಯನ್ನು ಪಡೆದುಕೊಂಡಕಾರಣ ಪಶ್ಚಿಮ ಬಂಗಾಳ ತಂಡ ಸದ್ಯ 262ರನ್‌ಗಳ ಮುನ್ನಡೆಯಲ್ಲಿದ್ದು ಉತ್ತಮ ಸ್ಥಿತಿಯಲ್ಲಿದೆ.

ಕರ್ನಾಟಕ ಫೈನಲ್‌ ತಲುಪಬೇಕಾದರೆ ಈ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಹೀಗಾಗಿ ಆದಷ್ಟು ಬೇಗ ಪಶ್ಚಿಮ ಬಂಗಾಳ ತಂಡವನ್ನು ಕಟ್ಟಿಹಾಕಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರಷ್ಟೇ ಕರ್ನಾಟಕ ತಂಡವನ್ನು ಈ ಬಾರಿಯ ರಣಜಿ ಫೈನಲ್‌ನಲ್ಲಿ ಕಾಣಬಹುದು.

Story first published: Sunday, March 1, 2020, 19:15 [IST]
Other articles published on Mar 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X