ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಿಷಪ್ ಆಯ್ಕೆಯ ಸಾರ್ವಕಾಲಿಕ XIನಲ್ಲಿ ನಾಲ್ವರು ಭಾರತೀಯರು

West Indies legend Ian Bishop has named his star-studded Greatest ODI XI

ಲಂಡನ್, ಜೂನ್ 11: ವೆಸ್ಟ್ ಇಂಡೀಸ್ ನ ಕ್ರಿಕೆಟ್ ದಿಗ್ಗಜ ಇಯಾನ್ ಬಿಷಪ್ ಅವರು ತಮ್ಮ ಸಾರ್ವಕಾಲಿಕ ಶ್ರೇಷ್ಠ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಇಂದು ಪ್ರಕಟಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಆಯೋಜನೆಯ ಪ್ರಮುಖ ಟೂರ್ನಮೆಂಟ್ ಸಂದರ್ಭಗಳಲ್ಲಿ ಐಸಿಸಿ ಅಧಿಕೃತ ಟ್ವಿಟ್ಟರ್ ಮೂಲಕ ಕ್ರಿಕೆಟ್ ದಿಗ್ಗಜರು ತಮ್ಮ ಅಯ್ಕೆಯ ಹನ್ನೊಂದರ ಬಳಗವನ್ನು ಹೆಸರಿಸುತ್ತಾರೆ.

ಅದರಂತೆ, ಸ್ಟಾರ್ ಆಟಗಾರರೇ ತುಂಬಿಸುರುವ ತಮ್ಮ ಹನ್ನೊಂದು ಮಂದಿ ಆಟಗಾರರನ್ನು ಇಯಾನ್ ಬಿಷಪ್ ವಿಡಿಯೋ ಮೂಲಕ ತಿಳಿಸಿದ್ದಾರೆ. ಬಿಷಪ್ ತಂಡದಲ್ಲಿ ನಾಲ್ವರು ಭಾರತೀಯ ಆಟಗಾರರಿರುವುದು ವಿಶೇಷ. ಇಬ್ಬರು ವೆಸ್ಟ್ ಇಂಡೀಸ್ ಹಾಗೂ ಏಕೈಕ ಆಸ್ಟ್ರೇಲಿಯನ್ ಆಟಗಾರ ಇರುವುದು ಗಮನಾರ್ಹ. ಮಿಕ್ಕಂತೆ ದಕ್ಷಿಣ ಆಫ್ರಿಕಾ ಹಾಗೂ ಪಾಕಿಸ್ತಾನದ ತಲಾ ಇಬ್ಬರು ಆಟಗಾರರಿದ್ದಾರೆ.

ವಿಶ್ವಕಪ್: ವಿಕೆಟ್ ಸಿಕ್ಕಾಗ ಸೆಲ್ಯೂಟ್ ಹೊಡೆಯೋದರ ಗುಟ್ಟು ಬಿಚ್ಚಿಟ್ಟ ಕಾಟ್ರೆಲ್ವಿಶ್ವಕಪ್: ವಿಕೆಟ್ ಸಿಕ್ಕಾಗ ಸೆಲ್ಯೂಟ್ ಹೊಡೆಯೋದರ ಗುಟ್ಟು ಬಿಚ್ಚಿಟ್ಟ ಕಾಟ್ರೆಲ್

ಐಸಿಸಿ ಕ್ರಿಕೆಟ್ ವಿಶ್ವಕಪ್ 2019 ಸಂದರ್ಭದಲ್ಲಿ ಅಧಿಕೃತ ಕಾಮೆಂಟೆಟರ್ ಆಗಿರುವ ಬಿಷಪ್ ಅವರು ಆಯ್ಕೆ ಮಾಡಿರುವ ತಂಡದಲ್ಲಿ ನ್ಯೂಜಿಲೆಂಡ್, ಇಂಗ್ಲೆಂಡ್ ಹಾಗೂ ಶ್ರೀಲಂಕಾ ತಂಡದ ಒಬ್ಬ ಆಟಗಾರ ಕೂಡಾ ಇಲ್ಲದಿರುವುದು ಅಚ್ಚರಿ ಮೂಡಿಸುತ್ತದೆ.

ಬಿಷಪ್ ಆಯ್ಕೆಯ ತಂಡದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಉಪ ನಾಯಕ ರೋಹಿತ್ ಶರ್ಮ, ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಎಂಎಸ್ ಧೋನಿ ಇದ್ದು, ಹಾಲಿ ಸಕ್ರಿಯರಾಗಿರುವ ಆಟಗಾರರೆನಿಸಿದ್ದಾರೆ. ಉಳಿದಂತೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಸ್ಥಾನ ಪಡೆದುಕೊಂಡಿದ್ದಾರೆ.

2007ರಲ್ಲಿ ನಿವೃತ್ತಿ ಹೊಂದಬೇಕಿದ್ದ ಸಚಿನ್‌ ಅವರನ್ನು ತಡೆದದ್ದು ಯಾರು ಗೊತ್ತಾ? 2007ರಲ್ಲಿ ನಿವೃತ್ತಿ ಹೊಂದಬೇಕಿದ್ದ ಸಚಿನ್‌ ಅವರನ್ನು ತಡೆದದ್ದು ಯಾರು ಗೊತ್ತಾ?

ಇಯಾನ್ ಬಿಷಪ್ ಆಯ್ಕೆಯ ಸಾರ್ವಕಾಲಿಕ ಶ್ರೇಷ್ಠ XI:
1. ಸಚಿನ್ ತೆಂಡೂಲ್ಕರ್
2. ರೋಹಿತ್ ಶರ್ಮ
3. ಸರ್ ವಿವಿಯನ್ ರಿಚರ್ಡ್ಸ್
4. ವಿರಾಟ್ ಕೊಹ್ಲಿ
5. ಎಬಿ ಡಿ ವಿಲಿಯರ್ಸ್
6. ಲ್ಯಾನ್ಸ್ ಕ್ಲುಸೆನರ್
7. ಎಂಎಸ್ ಧೋನಿ
8. ವಾಸೀಂ ಅಕ್ರಮ್
9. ಸಕ್ಲೇನ್ ಮುಷ್ತಾಕ್
10. ಜೋಯಲ್ ಗಾರ್ನರ್
11. ಗ್ಲೆನ್ ಮೆಗ್ರಾ.

Story first published: Tuesday, June 11, 2019, 22:44 [IST]
Other articles published on Jun 11, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X