ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ಏಕದಿನ ನಾಯಕತ್ವ ಬದಲಾವಣೆ ಹಿಂದಿನ ಕಾರಣ ಬಹಿರಂಗ: ಡಿಸೆಂಬರ್ 9ರ ಕ್ರಿಕೆಟ್‌ ರೌಂಡ್ಅಪ್

What happened in the cricket world on December 9

ಡಿಸೆಂಬರ್ 9ರ ಗುರುವಾರದಂದು ಕ್ರಿಕೆಟ್ ಜಗತ್ತಿನಲ್ಲಿ ಹಲವು ಪ್ರಮುಖ ವಿದ್ಯಮಾನಗಳು ಜರುಗಿದ್ದು, ಒಂದೆಡೆ ಬಿಸಿಸಿಐ ಭಾರತ ಏಕದಿನ ತಂಡಕ್ಕೆ ವಿರಾಟ್ ಕೊಹ್ಲಿ ಬದಲು ರೋಹಿತ್ ಶರ್ಮಾರನ್ನು ನಾಯಕನಾಗಿ ನೇಮಿಸಿರುವುದರ ಕುರಿತು ಸಾಕಷ್ಟು ಚರ್ಚೆಗಳು ಮತ್ತು ಟೀಕೆಗಳು ನಡೆದಿದ್ದರೆ, ಮತ್ತೊಂದೆಡೆ ಆ್ಯಶಸ್ ಟೆಸ್ಟ್ ಸರಣಿಯ ಮೊದಲನೇ ಪಂದ್ಯದ ಎರಡನೇ ದಿನದಾಟದಂದು ಆಸ್ಟ್ರೇಲಿಯಾ ಮೇಲುಗೈ ಸಾಧಿಸಿದೆ. ಹೀಗೆ ಡಿಸೆಂಬರ್ 9ರ ಕ್ರಿಕೆಟ್ ಸುದ್ದಿಗಳ ರೌಂಡ್ ಅಪ್ ಈ ಕೆಳಕಂಡಂತಿದೆ..

* ಭಾರತ ಟಿ ಟ್ವೆಂಟಿ ತಂಡದ ನಾಯಕ ಸ್ಥಾನದಿಂದ ಕೆಳಗಿಳಿಯಬೇಡಿ ಎಂದು ಬಿಸಿಸಿಐ ಮನವಿ ಮಾಡಿದರೂ ಅದಕ್ಕೆ ವಿರಾಟ್ ಕೊಹ್ಲಿ ಒಪ್ಪಲಿಲ್ಲ. ಆದರೆ ಆಯ್ಕೆಗಾರರು ವೈಟ್ ಬಾಲ್ ಕ್ರಿಕೆಟ್‌ ಮಾದರಿಗಳಾದ ಟಿ ಟ್ವೆಂಟಿ ಮತ್ತು ಏಕದಿನ ಎರಡಕ್ಕೂ ಪ್ರತ್ಯೇಕ ನಾಯಕರು ಇರುವುದನ್ನು ಒಪ್ಪಲಿಲ್ಲ ಹಾಗೂ ಎರಡಕ್ಕೂ ಒಬ್ಬನೇ ನಾಯಕ ಇರಬೇಕು ಎಂಬ ಉದ್ದೇಶದಿಂದ ರೋಹಿತ್ ಶರ್ಮಾ ಅವರನ್ನು ಭಾರತ ಏಕದಿನ ತಂಡಕ್ಕೂ ನಾಯಕನಾಗಿ ಆಯ್ಕೆ ಮಾಡಿದರು ಎಂದು ಗಂಗೂಲಿ ಹೇಳಿಕೆ ನೀಡಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಮೊದಲಿಗೆ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ತ್ಯಜಿಸಿದ್ದೇ ಈಗ ಭಾರತ ಏಕದಿನ ನಾಯಕತ್ವವನ್ನೂ ಕಳೆದುಕೊಳ್ಳುವುದಕ್ಕೆ ಕಾರಣವಾಯಿತು ಎಂದು ಗಂಗೂಲಿ ತಿಳಿಸಿದ್ದಾರೆ.

* ಒಡಿಐ ನಾಯಕನಾಗಿ ವಿರಾಟ್ ಕೊಹ್ಲಿ ಅವರ ದಾಖಲೆ ಅದ್ಭುತವಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾದಂತಹ ಬಲಿಷ್ಠ ರಾಷ್ಟ್ರಗಳ ಎದುರು ಸರಣಿ ಗೆಲುವು ತಂದುಕೊಟ್ಟಿದ್ದಾರೆ. ವಿರಾಟ್ ನಾಯಕತ್ವದಲ್ಲಿ ಟೀಂ ಇಂಡಿಯಾ 19 ಏಕದಿನ ದ್ವಿಪಕ್ಷೀಯ ಸರಣಿಗಳಲ್ಲಿ 15 ಪಂದ್ಯಗಳನ್ನು ಗೆದ್ದಿದೆ. ತವರು ನೆಲದಲ್ಲಿ, ಅವರು 9 ದ್ವಿಪಕ್ಷೀಯ ಸರಣಿಗಳಲ್ಲಿ 8 ಅನ್ನು ಗೆದ್ದರು ಆದರೆ ವಿರಾಟ್ ICC ಟ್ರೋಫಿ ಗೆಲ್ಲಲು ವಿಫಲರಾದರು. ಈ ಕಾರಣಕ್ಕೆ ಕೊಹ್ಲಿಯನ್ನ ಏಕದಿನ ನಾಯಕತ್ವದ ಸ್ಥಾನದಿಂದ ಕೊಹ್ಲಿಯನ್ನು ವಜಾ ಮಾಡಲಾಗಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಸಾಬಾ ಕರೀಂ ಅಭಿಪ್ರಾಯಪಟ್ಟಿದ್ದಾರೆ.

* ವಿಜಯ್ ಹಜಾರೆ ಟೂರ್ನಿಯ ಎರಡನೇ ಪಂದ್ಯದಲ್ಲಿ ಕರ್ನಾಟಕ ತಮಿಳುನಾಡು ತಂಡದ ವಿರುದ್ಧ ಸೋಲು ಅನುಭವಿಸಿದೆ. ತಮಿಳುನಾಡು ತಂಡದ ವಿರುದ್ಧ ಉತ್ತಮ ಪ್ರದರ್ಶನ ನೀಡಲು ವಿಫಲವಾದ ಕರ್ನಾಟಕ ತಂಡದ ಆಟಗಾರರು ಭಾರೀ ನಿರಾಸೆ ಅನುಭವಿಸಿದರು. ಈ ಮೂಲಕ 8 ವಿಕೆಟ್‌ಗಳ ಅಂತರದ ಭಾರೀ ಸೋಲು ಅನುಭವಿಸಿದೆ ಮನೀಶ್ ಪಾಂಡೆ ಬಳಗ.

* "ವಿರಾಟ್ ಕೊಹ್ಲಿಯ ಆ ಉತ್ಕೃಷ್ಟ ಗುಣಮಟ್ಟದ ಆಟ ತಂಡಕ್ಕೆ ಯಾವಾಗಲೂ ಅಗತ್ಯವಾಗಿದೆ. ಇನ್ನು ಟಿ20 ಮಾದರಿಯಲ್ಲಿ 50ಕ್ಕಿಂತ ಅಧಿಕ ಸರಾಸರಿಯನ್ನು ಹೊಂದುವುದು ಅಸಾಮಾನ್ಯ ಸಂಗತಿ ಮತ್ತು ಅದನ್ನು ನಂಬುವುದು ಕಷ್ಟ. ಖಂಡಿಯವಾಗಿಯೂ ತನ್ನ ಅನುಭವದಿಂದ ವಿರಾಟ್ ಕೊಹ್ಲಿ ಸಾಕಷ್ಟು ಪಂದ್ಯಗಳಲ್ಲಿ ಕಠಿಣ ಪರಿಸ್ಥಿತಿಯಿಂದ ತಂಡವನ್ನು ಪಾರು ಮಾಡಿದ್ದಾರೆ. ಆ ಗುಣಮಟ್ಟ ಹಾಗೂ ಅಂತಾ ಉತ್ತಮವಾದ ಬ್ಯಾಟಿಂಗ್ ಬಹಳ ಅಗತ್ಯವಾಗಿದೆ. ಆತ ಇನ್ನು ಕೂಡ ತಂಡದ ನಾಯಕನಾಗಿದ್ದಾರೆ" ಎಂದು ನಾಯಕನಾದ ಬೆನ್ನಲ್ಲೇ ರೋಹಿತ್ ಶರ್ಮಾ ವಿರಾಟ್ ಕೊಹ್ಲಿ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ.

ವಿರಾಟ್ ಕೊಹ್ಲಿಯಂತಹ ಆಟಗಾರ ತಂಡದಲ್ಲಿ ಇರಲೇಬೇಕು | Oneindia Kannada

* ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಪ್ರತಿಷ್ಠಿತ ಆಶಸ್ ಟೆಸ್ಟ್ ಸರಣಿಯ ಮೊದಲ ಪಂದ್ಯದ ಎರಡನೇ ದಿನದಾಟ ಅಂತ್ಯವಾಗಿದೆ. ಎರಡನೇ ದಿನವೂ ಪಂದ್ಯದಲ್ಲಿ ಆಸ್ಟ್ರೇಲಿಯಾ ಉತ್ತಮ ಪ್ರದರ್ಶನ ನೀಡುವ ಮೂಲಕ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಆಸ್ಟ್ರೇಲಿಯಾ ಪರವಾಗಿ ಡೇವಿಡ್ ವಾರ್ನರ್ 94 ರನ್‌ಗಳಿಸಿ ಶತಕದಂಚಿನಲ್ಲಿ ಎಡವಿದರೆ ಟ್ರೇವಿಸ್ ಹೆಡ್ ಭರ್ಜರಿ ಶತಕ ಸಿಡಿಸಿ ಅಜೇಯವಾಗುಳಿದಿದ್ದಾರೆ. 196 ರನ್‌ಗಳ ಮುನ್ನಡೆಯೊಂದಿಗೆ ಆಸ್ಟ್ರೇಲಿಯಾ ಮೂರನೇ ದಿನಕ್ಕೆ ಆಟವನ್ನು ಕಾಯ್ದಿರಿಸಿದೆ.

Story first published: Thursday, December 9, 2021, 23:27 [IST]
Other articles published on Dec 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X