ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಡೋ-ಪಾಕಿಸ್ತಾನ ಕ್ರಿಕೆಟ್ ಕದನ ಮಳೆಯಿಂದ ರದ್ದಾದರೆ, ಎಷ್ಟು ನಷ್ಟ?

ICC World Cup 2019 : ಭಾರತ ಪಾಕ್ ಪಂದ್ಯ ರದ್ದಾದರೆ ಆಗಲಿದೆ ಭಾರೀ ನಷ್ಟ..? | Oneindia Kannada
What is the Cost of India-Pakistan Match Cancellation Rain Deals

ಲಂಡನ್, ಜೂನ್ 16: ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿಂದು ಮಳೆ ಭೀತಿ ನಡುವೆ ಭಾರತ ಹಾಗೂ ಪಾಕಿಸ್ತಾನ ನಡುವೆ ವಿಶ್ವಕಪ್ ಸಮರಕ್ಕೆ ವೇದಿಕೆ ಸಜ್ಜಾಗಿದೆ. ಅಭಿಮಾನಿಗಳ ಉತ್ಸಾಹಕ್ಕೆ ತಣ್ಣೀರೆರಚಲು ಮಳೆರಾಯ ಮುಂದಾಗುವನೇ? ಕಾದು ನೋಡಬೇಕಿದೆ. ಈ ನಡುವೆ ಒಂದು ವೇಳೆ ಪಂದ್ಯ ರದ್ದಾದರೆ ಎಷ್ಟು ಪ್ರಮಾಣದಲ್ಲಿ ನಷ್ಟವಾಗಲಿದೆ ಎಂಬ ಮಾಹಿತಿ ಹೊರ ಬಂದಿದೆ.

ಸ್ಟಾರ್ ಸ್ಪೋರ್ಟ್ಸ್ ವರದಿ ಪ್ರಕಾರ, ಈ ಪಂದ್ಯದಿಂದ ಸುಮಾರು 137.5 ಕೋಟಿ ರು ನಿರೀಕ್ಷಿಸಲಾಗಿದೆ. ಪಂದ್ಯಕ್ಕೆ ವಿಮೆ ಮಾಡಿಸಿದ್ದರೂ ಪ್ರೀಮಿಯಂ ಮೊತ್ತ 300% ರಷ್ಟು ಏರಿಕೆಯಾಗಲಿದೆ. ನೇರ ಪ್ರಸಾರದ ಹಕ್ಕು ಪಡೆದ ಸಂಸ್ಥೆಗೆ ಭಾರಿ ನಷ್ಟವಾಗಲಿದೆ.

ಕೆಣಕಿದ್ದು ಪಾಕ್‌, ಗೆದ್ದು ಬೀಗಿದ್ದು ಭಾರತ: ವಿಶ್ವಕಪ್ ಅವಿಸ್ಮರಣೀಯ ಕ್ಷಣಗಳು ಕೆಣಕಿದ್ದು ಪಾಕ್‌, ಗೆದ್ದು ಬೀಗಿದ್ದು ಭಾರತ: ವಿಶ್ವಕಪ್ ಅವಿಸ್ಮರಣೀಯ ಕ್ಷಣಗಳು

ಹವಾಮಾನ ಇಲಾಖೆ ವರದಿ, ಮುನ್ಸೂಚನೆಯನ್ನು ವಿಮೆ ಕಂಪನಿಗಳು ಗಮನಿಸಲಿದ್ದು, ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ರದ್ದಾದರೆ ಸ್ಟಾರ್ ಸ್ಪೋರ್ಟ್ಸ್, ಜಾಹೀರಾತು ನೀಡಿರುವ ಕಂಪನಿಗಳಾದ ಕೋಕಾ ಕೋಲಾ, ಉಬರ್, ಒನ್ ಪ್ಲಸ್, ಎಂಆರ್ ಎಫ್ ಟೈಯರ್ಸ್ ಗೆ ಭಾರಿ ನಷ್ಟವಾಗಲಿದೆ.

ಈ ಪಂದ್ಯದ ಟಿಕೆಟ್ ಗಳು 60,000 ರನಂತೆ ಕಾಳಸಂತೆಯಲ್ಲಿ ಮಾರಾಟವಾಗಿವೆ.ಇತರೆ ಪಂದ್ಯಗಳ ಸೆಕೆಂಡಿಗೆ 1.6 ಹಾಗೂ 1.8 ಲಕ್ಷ ರು ಜಾಹೀರಾತು ದರವಿದ್ದರೆ, ಭಾರತ ಹಾಗೂ ಪಾಕಿಸ್ತಾನ ಪಂದ್ಯಕ್ಕೆ ಪ್ರತಿ ಸೆಕೆಂಡಿಗೆ 2.5 ಲಕ್ಷ ರು ಗೆ ಏರಿಕೆಯಾಗಿದೆ.

ಭಾರತ vs ಪಾಕ್ ವಿಶ್ವಕಪ್ ಪಂದ್ಯ: ಸೋತರೂ ಗೆದ್ದರೂ ಇತಿಹಾಸ! ಭಾರತ vs ಪಾಕ್ ವಿಶ್ವಕಪ್ ಪಂದ್ಯ: ಸೋತರೂ ಗೆದ್ದರೂ ಇತಿಹಾಸ!

ಈಗಾಗಲೇ ನಾಲ್ಕು ಪಂದ್ಯಗಳು ರದ್ದಾಗಿದ್ದು, ಸ್ಟಾರ್ ಸ್ಪೋರ್ಟ್ ಗೆ 200 ಕೋಟಿ ರು ಗೂ ಅಧಿಕ ನಷ್ಟವಾಗಿದೆ. 1992 ಹಾಗೂ 2003ರ ವಿಶ್ವಕಪ್ ನಲ್ಲಿ ತಲಾ 2 ಪಂದ್ಯಗಳು ಮಾತ್ರ ರದ್ದಾಗಿದ್ದವು, ಆದರೆ, ಈ ಬಾರಿ ಹೆಚ್ಚು ಪಂದ್ಯಗಳು ರದ್ದಾಗಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

Story first published: Sunday, June 16, 2019, 10:16 [IST]
Other articles published on Jun 16, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X