ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Women IPL : ಫ್ರಾಂಚೈಸಿಗಳಿಗೆ 400 ಕೋಟಿ ರುಪಾಯಿ ಮೂಲ ಬೆಲೆ ನಿಗದಿ, ಮೂಲಗಳ ವರದಿ

Women IPL : BCCI Set To Base Price For Franchise At Rs 400 Crore

ಮಹಿಳಾ ಐಪಿಎಲ್‌ನ ಮೊದಲ ಆವೃತ್ತಿ 2023ರ ಮಾರ್ಚ್‌ನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಮೊದಲ ಆವೃತ್ತಿಯನ್ನು ಯಶಸ್ಸು ಸಾಧಿಸಲು ಬಿಸಿಸಿಐ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದೆ.

ಬಿಸಿಸಿಐ ಈಗ ಐದು ತಂಡಗಳಿಗೆ ಟೆಂಡರ್ ಅನ್ನು ಕರೆಯಲು ಸಿದ್ಧವಾಗಿದೆ. ಪ್ರತಿ ಫ್ರಾಂಚೈಸಿಗೆ 400 ಕೋಟಿ ರುಪಾಯಿ ಮೂಲ ಬೆಲೆಯನ್ನು ನಿಗದಿಪಡಿಸಿದೆ ಎಂದು ಮೂಲಗಳು ತಿಳಿಸಿವೆ. ಶೀಘ್ರದಲ್ಲಿಯೇ ಇ-ಹರಾಜಿನ ಟೆಂಡರ್ ದಾಖಲೆಯನ್ನು ಬಿಸಿಸಿಐ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಅಸ್ತಿತ್ವದಲ್ಲಿರುವ ಎಲ್ಲಾ ಐಪಿಎಲ್ ಫ್ರಾಂಚೈಸಿಗಳು ಇ-ಹರಾಜಿನಲ್ಲಿ ಭಾಗವಹಿಸಬಹುದು.

ನ್ಯೂಜಿಲೆಂಡ್ ವಿರುದ್ಧ ಗೆಲುವು ಸಾಧಿಸಬೇಕಾದರೆ ಈ 4 ಆಟಗಾರರು ಮಿಂಚುವುದು ಅನಿವಾರ್ಯ!ನ್ಯೂಜಿಲೆಂಡ್ ವಿರುದ್ಧ ಗೆಲುವು ಸಾಧಿಸಬೇಕಾದರೆ ಈ 4 ಆಟಗಾರರು ಮಿಂಚುವುದು ಅನಿವಾರ್ಯ!

ಮುಂಬೈನಲ್ಲಿ ನಡೆದ 91 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಕ್ಟೋಬರ್ 18 ರಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯ ಜನರಲ್ ಬಾಡಿ ಅನುಮೋದನೆ ನೀಡಿದ ಬಳಿಕ, ಬಹು ನಿರೀಕ್ಷಿತ ಮಹಿಳಾ ಐಪಿಎಲ್ ಆರಂಭಕ್ಕೆ ವೇದಿಕೆ ಸಜ್ಜಾಗಿದೆ.

ಆದಲ ಆವೃತ್ತಿಯಲ್ಲಿ ಐದು ತಂಡಗಳು ಭಾಗವಹಿಸಲಿವೆ. ಟೂರ್ನಿಯಲ್ಲಿ ಒಟ್ಟು 20 ಲೀಗ್‌ ಪಂದ್ಯಗಳು ನಡೆಯಲಿವೆ. ಪ್ರತಿ ತಂಡ ಎದುರಾಳಿ ತಂಡದ ವಿರುದ್ಧ ತಲಾ ಎರಡು ಪಂದ್ಯಗಳನ್ನು ಆಡಲಿದೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ತಂಡ ಫೈನಲ್‌ಗೆ ನೇರವಾಗಿ ಪ್ರವೇಶ ಪಡೆಯಲಿದೆ.

Women IPL : BCCI Set To Base Price For Franchise At Rs 400 Crore

ಐದು ವಿದೇಶಿ ಆಟಗಾರರನ್ನು ಹೊಂದಲು ಅನುಮತಿ

ಎರಡು ಮತ್ತು ಮೂರನೇ ಸ್ಥಾನ ಪಡೆಯುವ ತಂಡಗಳು ಎಲಿಮೇಟರ್ ಪಂದ್ಯವನ್ನು ಆಡಲಿದ್ದು, ಅಲ್ಲಿ ಗೆಲ್ಲುವ ತಂಡ ಫೈನಲ್‌ಗೆ ಅರ್ಹತೆ ಪಡೆಯಲಿದೆ. ಪ್ರತಿ ತಂಡದಲ್ಲಿ ಆಡುವ 11ರ ಬಳಗದಲ್ಲಿ ಐದಕ್ಕಿಂತ ಹೆಚ್ಚಿನ ವಿದೇಶಿ ಆಟಗಾರರನ್ನು ಹೊಂದಬಾರದು ಎನ್ನುವ ನಿಯಮ ರೂಪಿಸಲಾಗಿದೆ.

"ದೇಶೀಯ ಮತ್ತು ಅಂತರಾಷ್ಟ್ರೀಯ ಆಟಗಾರರ ಸಮತೋಲನವನ್ನು ಹೊಂದಲು ಮತ್ತು ಸ್ಪರ್ಧಾತ್ಮಕ ತಂಡಗಳನ್ನು ಹೊಂದಲು, ಮಹಿಳಾ ಐಪಿಎಲ್‌ಗಾಗಿ ಐದು ತಂಡಗಳನ್ನು ಹೊಂದಲು ತಾತ್ಕಾಲಿಕವಾಗಿ ನಿರ್ಧರಿಸಲಾಗಿದೆ. ಪ್ರತಿ ತಂಡವು ಗರಿಷ್ಠ ಹದಿನೆಂಟು ಆಟಗಾರರನ್ನು ಒಳಗೊಂಡಿರುತ್ತದೆ, ಅಲ್ಲಿ ಯಾವುದೇ ತಂಡವು ಆರಕ್ಕಿಂತ ಹೆಚ್ಚು ವಿದೇಶಿ ಆಟಗಾರರನ್ನು ಹೊಂದಿರಬಾರದು," ಬಿಸಿಸಿಐ ರಾಜ್ಯಗಳಿಗೆ ಕಳುಹಿಸಿರುವ ಸೂಚನೆಯಲ್ಲಿ ತಿಳಿಸಲಾಗಿದೆ.

2020ರ ಟಿ20 ವಿಶ್ವಕಪ್‌ನಲ್ಲಿ ಮಹಿಳಾ ತಂಡ ರನ್ನರ್-ಅಪ್ ಆಗಿತ್ತು. ಭಾರತದಲ್ಲಿ ಮಹಿಳಾ ಕ್ರಿಕೆಟ್‌ಗೆ ಪ್ರೋತ್ಸಾಹ ನೀಡಬೇಕು ಎನ್ನುವ ಅಭಿಪ್ರಾಯಗಳು ಹೆಚ್ಚಾದಾವು. ಆಸ್ಟ್ರೇಲಿಯಾದಲ್ಲಿ ಬಿಗ್ ಬ್ಯಾಷ್ ಲೀಗ್ 2016ರಿಂದ ಯಶಸ್ವಿಯಾಗಿ ನಡೆಯುತ್ತಿದೆ. ಇಂಗ್ಲೆಂಡ್‌ನಲ್ಲಿ ಮಹಿಳಿಯರಿಗೆ ಹಂಡ್ರೆಡ್ ಎನ್ನುವ ಟೂರ್ನಿ ನಡೆಯುತ್ತಿದೆ. ಪಾಕಿಸ್ತಾನ ಕೂಡ ಮುಂದಿನ ವರ್ಷ ಮಹಿಳೆಯರಿಗಾಗಿ ಕ್ರಿಕೆಟ್ ಲೀಗ್ ನಡೆಸಲು ಸಿದ್ಧತೆ ನಡೆಸಿದೆ.

Story first published: Tuesday, November 29, 2022, 19:43 [IST]
Other articles published on Nov 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X