ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Women's T20 World Cup 2023: ಮಹಿಳಾ ಟಿ20 ವಿಶ್ವಕಪ್‌ಗೆ 15 ಸದಸ್ಯರ ತಂಡ ಪ್ರಕಟಿಸಿದ ಶ್ರೀಲಂಕಾ

Womens T20 World Cup 2023: Sri Lanka Announces 15-members Squad For Womens T20 World Cup

ಫೆಬ್ರವರಿ 10ರಿಂದ 26ರವರೆಗೆ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ 2023ರ ಮಹಿಳಾ ಟಿ20 ವಿಶ್ವಕಪ್‌ ಪಂದ್ಯಾವಳಿಗೆ ಶ್ರೀಲಂಕಾ 15 ಸದಸ್ಯರ ಬಲಿಷ್ಠ ತಂಡವನ್ನು ಬುಧವಾರ, ಫೆಬ್ರವರಿ 1ರಂದು ಪ್ರಕಟಿಸಿದೆ.

ಅನುಭವಿ ಆಲ್‌ರೌಂಡರ್ ಚಾಮರಿ ಅಥಾಪತ್ತು ಅವರನ್ನು ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಗೆ ಶ್ರೀಲಂಕಾ ಮಹಿಳಾ ತಂಡದ ನಾಯಕಿಯನ್ನಾಗಿ ನೇಮಿಸಲಾಗಿದೆ.

IND vs AUS: ಭಾರತಕ್ಕೆ ಹಿನ್ನಡೆ; ಬಾರ್ಡರ್-ಗವಾಸ್ಕರ್ ಟ್ರೋಫಿ ಮೊದಲ ಟೆಸ್ಟ್‌ನಿಂದ ಸ್ಟಾರ್ ಬ್ಯಾಟರ್ ಔಟ್!IND vs AUS: ಭಾರತಕ್ಕೆ ಹಿನ್ನಡೆ; ಬಾರ್ಡರ್-ಗವಾಸ್ಕರ್ ಟ್ರೋಫಿ ಮೊದಲ ಟೆಸ್ಟ್‌ನಿಂದ ಸ್ಟಾರ್ ಬ್ಯಾಟರ್ ಔಟ್!

106 ಟಿ20 ಪಂದ್ಯಗಳಿಂದ ಒಂದು ಶತಕ ಮತ್ತು ಐದು ಅರ್ಧ ಶತಕಗಳೊಂದಿಗೆ 2181 ರನ್ ಗಳಿಸಿರುವ ಚಾಮರಿ ಅಥಾಪತ್ತು, ಶ್ರೀಲಂಕಾ ತಂಡದ ಪರ ಟಿ20 ಪಂದ್ಯಗಳಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ ಅಥಾಪತ್ತು ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ 59 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

17 ವರ್ಷದ ವಿಶ್ಮಿ ಗುಣರತ್ನೆ ಕೂಡ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾದಲ್ಲಿ ನಡೆದ ಅಂಡರ್-19 ವಿಶ್ವಕಪ್‌ನಲ್ಲಿ ವಿಶ್ಮಿ ಗುಣರತ್ನೆ ಶ್ರೀಲಂಕಾ ತಂಡದ ನಾಯಕತ್ವ ವಹಿಸಿದ್ದರು. 44.66 ಸರಾಸರಿಯಲ್ಲಿ 92.41 ಸ್ಟ್ರೈಕ್‌ರೇಟ್‌ನೊಂದಿಗೆ 134 ರನ್‌ ಬಾರಿಸಿ ತಂಡದ ಪರ ಅತಿ ಹೆಚ್ಚಿನ ಗಳಿಸಿದ ಆಟಗಾರ್ತಿಯರಾದರು.

Womens T20 World Cup 2023: Sri Lanka Announces 15-members Squad For Womens T20 World Cup

ಯುವ ಆಟಗಾರ್ತಿ ವಿಶ್ಮಿ ಗುಣರತ್ನೆ ಈಗಾಗಲೇ 9 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 75.91 ಸ್ಟ್ರೈಕ್ ರೇಟ್‌ನೊಂದಿಗೆ 13ರ ಸರಾಸರಿಯಲ್ಲಿ 104 ರನ್ ಗಳಿಸಿದ್ದಾರೆ.

ಅಭ್ಯಾಸದ ವೇಳೆ ಬೆರಳಿನ ಗಾಯದಿಂದಾಗಿ ಹಾಸಿನಿ ಪೆರೆರಾ ಮಹಿಳಾ ವಿಶ್ವಕಪ್‌ ಟೂರ್ನಿಯಲ್ಲಿ ಶ್ರೀಲಂಕಾ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಅವರ ಸ್ಥಾನಕ್ಕೆ ಸತ್ಯ ಸಂದೀಪನಿ ಅವರನ್ನು ಆಯ್ಕೆ ಮಾಡಲಾಗಿದೆ.

ಬೌಲಿಂಗ್ ವಿಭಾಗದಲ್ಲಿ ತಾರಿಕಾ ಸೆವ್ವಂಡಿ, ಅಮಾ ಕಾಂಚನಾ ಮತ್ತು ಅಚಿನಿ ಕುಲಸೂರ್ಯ ಅವರ ಜೊತೆ ಸತ್ಯ ಸಂದೀಪನಿ ಜೊತೆಗೂಡಲಿದ್ದಾರೆ. ದ್ವೀಪ ರಾಷ್ಟ್ರ ಶ್ರೀಲಂಕಾ ಎಡಗೈ ಸ್ಪಿನ್ನರ್ ಇನೋಕಾ ರಣವೀರ ಅವರನ್ನು ಆಯ್ಕೆ ಮಾಡಿದ್ದು, ಈಕೆ ಚುಟುಕು ಕ್ರಿಕೆಟ್ ಸ್ವರೂಪದಲ್ಲಿ ಎರಡನೇ ಅತ್ಯಂತ ಯಶಸ್ವಿ ಬೌಲರ್ ಆಗಿದ್ದಾರೆ.

IND vs AUS: ಭಾರತಕ್ಕೆ ಹಿನ್ನಡೆ; ಬಾರ್ಡರ್-ಗವಾಸ್ಕರ್ ಟ್ರೋಫಿ ಮೊದಲ ಟೆಸ್ಟ್‌ನಿಂದ ಸ್ಟಾರ್ ಬ್ಯಾಟರ್ ಔಟ್!IND vs AUS: ಭಾರತಕ್ಕೆ ಹಿನ್ನಡೆ; ಬಾರ್ಡರ್-ಗವಾಸ್ಕರ್ ಟ್ರೋಫಿ ಮೊದಲ ಟೆಸ್ಟ್‌ನಿಂದ ಸ್ಟಾರ್ ಬ್ಯಾಟರ್ ಔಟ್!

ಇನ್ನು ಶ್ರೀಲಂಕಾ ಮಹಿಳಾ ತಂಡದಲ್ಲಿ ಅನುಷ್ಕಾ ಸಂಜೀವನಿ, ನೀಲಾಕ್ಷಿ ಡಿ ಸಿಲ್ವಾ, ಕವಿಶಾ ದಿಲ್ಹಾರಿ ಮತ್ತು ಓಶಾದಿ ರಣಸಿಂಗ್ ಕೂಡ ವಿಶ್ವಕಪ್ ಪಂದ್ಯಾವಳಿಯಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.

ಟಿ20 ಮಹಿಳಾ ವಿಶ್ವಕಪ್‌ನಲ್ಲಿ ಶ್ರೀಲಂಕಾ ತನ್ನ ಮೊದಲ ಪಂದ್ಯವನ್ನು ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಫೆಬ್ರವರಿ 10ರಂದು ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್‌ನಲ್ಲಿ ಆಡಲಿದೆ.

ಮಹಿಳೆಯರ T20 ವಿಶ್ವಕಪ್‌ಗಾಗಿ ಶ್ರೀಲಂಕಾ ತಂಡ
ಟಿ20 ಮಹಿಳಾ ವಿಶ್ವಕಪ್‌ಗಾಗಿ ಶ್ರೀಲಂಕಾ ತಂಡ
ಚಾಮರಿ ಅಥಾಪತ್ತು (ನಾಯಕಿ), ಓಶಾದಿ ರಣಸಿಂಗ್, ಹರ್ಷಿತಾ ಸಮರವಿಕ್ರಮ, ನೀಲಾಕ್ಷಿ ಡಿ ಸಿಲ್ವಾ, ಕವಿಶಾ ದಿಲ್ಹಾರಿ, ಅನುಷ್ಕಾ ಸಂಜೀವನಿ, ಕೌಶಿನಿ ನುತ್ಯಂಗನ, ಮಲ್ಶಾ ಶೆಹಾನಿ, ಇನೋಕಾ ರಣವೀರ, ಸುಗಂದಿಕಾ ಕುಮಾರಿ, ಅಚಿನಿ ಕುಲಸೂರ್ಯ, ವಿಶ್ಮಿ ಗುಣರತ್ನೆ, ತಾರಿಕಾ ಸೇವಂಡಿ, ಅಮ ಕಾಂಚನ, ಸತ್ಯ ಸಂದೀಪನಿ.

Story first published: Wednesday, February 1, 2023, 19:54 [IST]
Other articles published on Feb 1, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X