ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2025ರ ಮಹಿಳಾ ವಿಶ್ವಕಪ್‌ಗೆ ಭಾರತ ಆತಿಥ್ಯ?; ಬಿಡ್ ಮಾಡಲು ಬಿಸಿಸಿಐ ಸಜ್ಜು: ವರದಿ

Womens World Cup: BCCI Ready To Bid For 2025 Womens World Cup Hosting Rights: Report

2025ರ 50 ಓವರ್‌ಗಳ ಮಹಿಳಾ ವಿಶ್ವಕಪ್‌ಗೆ ಭಾರತ ಆತಿಥ್ಯ ವಹಿಸುವ ಸಾಧ್ಯತೆಯಿದೆ. ಏಕೆಂದರೆ ಬಿಸಿಸಿಐ ಈ ಮೆಗಾ ಈವೆಂಟ್‌ಗೆ ಬಿಡ್ ಮಾಡಲು ಸಿದ್ಧವಾಗಿದೆ. ಭಾರತ ಬಿಡ್ ಗೆದ್ದರೆ, ಐಸಿಸಿಯ ಪ್ರಮುಖ ಟೂರ್ನಿ ಒಂದು ದಶಕಕ್ಕೂ ಹೆಚ್ಚು ನಂತರ ದೇಶಕ್ಕೆ ಮರಳಿದಂತಾಗುತ್ತದೆ.

2013ರಲ್ಲಿ ಮುಂಬೈನಲ್ಲಿ ನಡೆದ ಫೈನಲ್‌ನಲ್ಲಿ ವೆಸ್ಟ್ ಇಂಡೀಸ್ ಅನ್ನು 114 ರನ್‌ಗಳಿಂದ ಸೋಲಿಸಿ ಆಸ್ಟ್ರೇಲಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದಾಗ ಕೊನೆಯ ಬಾರಿಗೆ ಭಾರತದಲ್ಲಿ ಮಹಿಳಾ 50 ಓವರ್‌ಗಳ ವಿಶ್ವಕಪ್ ನಡೆದಿತ್ತು.

ICC Women's T20 Ranking: ನಂ.1 ಸ್ಥಾನಕ್ಕೇರಿದ ಮೆಗ್ ಲ್ಯಾನಿಂಗ್; ಸ್ಮೃತಿ, ಶಫಾಲಿ ಸ್ಥಾನವೆಷ್ಟು?ICC Women's T20 Ranking: ನಂ.1 ಸ್ಥಾನಕ್ಕೇರಿದ ಮೆಗ್ ಲ್ಯಾನಿಂಗ್; ಸ್ಮೃತಿ, ಶಫಾಲಿ ಸ್ಥಾನವೆಷ್ಟು?

ಐಸಿಸಿಯ ವಾರ್ಷಿಕ ಸಮ್ಮೇಳನವನ್ನು ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಸಲಾಗುತ್ತಿದೆ ಮತ್ತು ಮುಂದಿನ ಕ್ರಿಕೆಟ್ ಋತುವಿಗಾಗಿ ನಾಲ್ಕು ದೊಡ್ಡ ಮಹಿಳಾ ಐಸಿಸಿ ಈವೆಂಟ್‌ಗಳ ಬಿಡ್‌ಗಳನ್ನು ಸಭೆಯ ಸಮಯದಲ್ಲಿ ಸ್ವೀಕರಿಸಲಾಗುವುದು ಎಂದು ತಿಳಿದು ಬಂದಿದೆ. ಜಾಗತಿಕ ಏಕದಿನ ಟೂರ್ನಿ 2025 ಆವೃತ್ತಿಯನ್ನು ಆಯೋಜಿಸಲು ಭಾರತವು ಮೆಚ್ಚಿನ ಸ್ಥಳವಾಗಿರುತ್ತದೆ.

ನಾಲ್ಕು ಮಹಿಳಾ ಟೂರ್ನಿಗಳಿಗೆ ಬಿಡ್‌ಗಳನ್ನು ಸ್ವೀಕಾರ

ನಾಲ್ಕು ಮಹಿಳಾ ಟೂರ್ನಿಗಳಿಗೆ ಬಿಡ್‌ಗಳನ್ನು ಸ್ವೀಕಾರ

"ನಾಲ್ಕು ಮಹಿಳಾ ಟೂರ್ನಿಗಳಿಗೆ ಬಿಡ್‌ಗಳನ್ನು ಸ್ವೀಕರಿಸಲಾಗುತ್ತಿದೆ. ಅವುಗಳಲ್ಲಿ ಪ್ರಮುಖವಾದವು 2024 ಮತ್ತು 2026 ಐಸಿಸಿ ಟಿ20 ವಿಶ್ವಕಪ್ ಮತ್ತು 2025ರ ಏಕದಿನ ವಿಶ್ವಕಪ್‌ನ ಆವೃತ್ತಿಯಾಗಿದೆ," ಎಂದು ಐಸಿಸಿ ಮಂಡಳಿಯ ಸದಸ್ಯರೊಬ್ಬರು ಅನಾಮಧೇಯತೆಯ ಷರತ್ತುಗಳ ಕುರಿತು PTIಗೆ ತಿಳಿಸಿದರು.

ಭಾರತದಲ್ಲಿ ನಡೆದ ಕೊನೆಯ ದೊಡ್ಡ ಮೆಗಾ ಮಹಿಳಾ ಜಾಗತಿಕ ಕ್ರಿಕೆಟ್ ಈವೆಂಟ್ 2016 ವಿಶ್ವ ಟಿ20 ಆಗಿತ್ತು, ಆದರೆ ಇದು ಪ್ರಾಥಮಿಕವಾಗಿ ಐಸಿಸಿ ಪುರುಷರ ಮತ್ತು ಮಹಿಳೆಯರ ಎರಡೂ ಈವೆಂಟ್‌ಗಳನ್ನು ಏಕಕಾಲದಲ್ಲಿ ಆಯೋಜಿಸುತ್ತಿತ್ತು.

50 ಓವರ್‌ಗಳ ಮಹಿಳಾ ವಿಶ್ವಕಪ್ 1973ರಲ್ಲಿ ಪ್ರಾರಂಭ

50 ಓವರ್‌ಗಳ ಮಹಿಳಾ ವಿಶ್ವಕಪ್ 1973ರಲ್ಲಿ ಪ್ರಾರಂಭ

ಆದಾಗ್ಯೂ, ಮಹಿಳಾ ಆಟದ ಜನಪ್ರಿಯತೆಯು ವ್ಯಾಪಕವಾಗಿ ಹೆಚ್ಚುವುದರೊಂದಿಗೆ ವ್ಯವಸ್ಥೆಯು ಬದಲಾಗಿದೆ ಮತ್ತು ಪ್ರತ್ಯೇಕ ಪ್ರಸಾರ ಒಪ್ಪಂದ ಮತ್ತು ವಿಶೇಷ ಕವರೇಜ್‌ನೊಂದಿಗೆ ಮಹಿಳೆಯರ ಆಟಕ್ಕೆ ಸರಿಯಾದ ಮೌಲ್ಯವನ್ನು ಪಡೆಯಲು ಐಸಿಸಿ ಈವೆಂಟ್‌ಗಳನ್ನು ಪ್ರತ್ಯೇಕಿಸಿದೆ.

ಆದಾಗ್ಯೂ, 1975ರಲ್ಲಿ ಇಂಗ್ಲೆಂಡ್‌ನಲ್ಲಿ ಪುರುಷರ ಮೆಗಾ ಈವೆಂಟ್ ಪ್ರಾರಂಭವಾಗುವ ಎರಡು ವರ್ಷಗಳ ಮೊದಲು, 50 ಓವರ್‌ಗಳ ಮಹಿಳಾ ವಿಶ್ವಕಪ್ 1973ರಲ್ಲಿ ಪ್ರಾರಂಭವಾಗಿತ್ತು. ಭಾರತವು ಮೂರು ಬಾರಿ 50 ಓವರ್‌ಗಳ ವಿಶ್ವಕಪ್ ಟೂರ್ನಿಯನ್ನು 1978, 1997 ಮತ್ತು 2013ರಲ್ಲಿ ಆಯೋಜಿಸಿದೆ.

2025ರ ಈವೆಂಟ್‌ಗೆ ಬಿಡ್ ಮಾಡುತ್ತಿದ್ದರೆ ಅದು ಬಿಸಿಸಿಐನ ವಿವೇಕ

2025ರ ಈವೆಂಟ್‌ಗೆ ಬಿಡ್ ಮಾಡುತ್ತಿದ್ದರೆ ಅದು ಬಿಸಿಸಿಐನ ವಿವೇಕ

ಐಸಿಸಿಯಲ್ಲಿನ ವಿಷಯಗಳ ಬಗ್ಗೆ ತಿಳಿದಿರುವವರು, 2025ರ ಏಕದಿನ ಈವೆಂಟ್‌ಗೆ ಬಿಡ್ ಮಾಡುತ್ತಿದ್ದರೆ ಅದು ಬಿಸಿಸಿಐನ ವಿವೇಕಯುತ ಕರೆ ಎಂದು ಭಾವಿಸಿದ್ದಾರೆ.

"ಮುಂದಿನ ಋತುವಿನಿಂದ ಮಹಿಳಾ ಐಪಿಎಲ್ ಅನ್ನು ಪ್ರಾರಂಭಿಸುವ ಬಗ್ಗೆ ಬಿಸಿಸಿಐ ತಯಾರಿ ಆರಂಭಿಸಿರುವುದರಿಂದ, ಅವರು ಈಗಿನಿಂದಲೇ ಯಾವುದೇ ಮಾರ್ಕ್ಯೂ ಟಿ20 ಮಹಿಳಾ ಕಾರ್ಯಕ್ರಮವನ್ನು ನಡೆಸಲು ಇಷ್ಟಪಡುವುದಿಲ್ಲ ಎಂದು ನಾನು ಭಾವಿಸುತ್ತೇವೆ. ಆದ್ದರಿಂದ 2025ರ ವಿಶ್ವಕಪ್‌ಗೆ ಬಿಡ್ ಮಾಡುವ ನಿರ್ಧಾರವು ತಾರ್ಕಿಕವಾಗಿದೆ," ಎಂದು ಮೂಲಗಳು ತಿಳಿಸಿವೆ.

2022-2025ರ ಐದು ಅಗ್ರ ರಾಷ್ಟ್ರಗಳು ಪಂದ್ಯಾವಳಿಗೆ ನೇರ ಪ್ರವೇಶ

2022-2025ರ ಐದು ಅಗ್ರ ರಾಷ್ಟ್ರಗಳು ಪಂದ್ಯಾವಳಿಗೆ ನೇರ ಪ್ರವೇಶ

2025ರ ಮಹಿಳಾ ವಿಶ್ವಕಪ್‌ನಲ್ಲಿ ಆತಿಥೇಯ ತಂಡ ಮತ್ತು ಐಸಿಸಿ ಮಹಿಳಾ ಚಾಂಪಿಯನ್‌ಶಿಪ್ (IWC) 2022-2025 ರಿಂದ ಐದು ಅಗ್ರ ರಾಷ್ಟ್ರಗಳು ಪಂದ್ಯಾವಳಿಗೆ ನೇರ ಪ್ರವೇಶವನ್ನು ಪಡೆಯುತ್ತವೆ.

ಉಳಿದ ಎರಡು ತಂಡಗಳನ್ನು ಆರು ತಂಡಗಳನ್ನು ಒಳಗೊಂಡ ಜಾಗತಿಕ ಅರ್ಹತಾ ಪಂದ್ಯದ ಮೂಲಕ ಗುರುತಿಸಲಾಗುತ್ತದೆ. ಕ್ವಾಲಿಫೈಯರ್‌ನಲ್ಲಿರುವ ಆರು ತಂಡಗಳಲ್ಲಿ ನಾಲ್ಕು IWC ಯಿಂದ (ಟಾಪ್ ಐದು ತಂಡಗಳ ನಂತರ ಶ್ರೇಯಾಂಕಗಳು) ಮತ್ತು ಇನ್ನೆರಡು ಐಸಿಸಿ ಮಹಿಳಾ ಏಕದಿನ ತಂಡದ ಶ್ರೇಯಾಂಕಗಳ ಪ್ರಕಾರ ಆಯ್ಕೆಯಾಗುತ್ತವೆ.

Story first published: Tuesday, July 26, 2022, 22:06 [IST]
Other articles published on Jul 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X