ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ 2019: ಅದ್ದೂರಿ ಕ್ರಿಕೆಟ್ ಟೂರ್ನಿಯ ಆರಂಭೋತ್ಸವ ಸಪ್ಪೆ ಸಪ್ಪೆ!

World Cup 2019 ceremony was not as impressive

ಲಂಡನ್, ಮೇ 30: ಲಂಡನ್ ಮತ್ತು ವೇಲ್ಸ್‌ನಲ್ಲಿ ಆರಂಭಗೊಳ್ಳುತ್ತಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಆರಂಭೋತ್ಸವ ಅತ್ಯಾಕರ್ಷಣೆ ಮೂಡಿಸುವ ಬದಲು ಬಹುತೇಕ ಸಪ್ಪೆ ಅನ್ನಿಸಿತು. ಬುಧವಾರ (ಮೇ 29) ರಾತ್ರಿ ಟೂರ್ನಿಯ ಉದ್ಘಾಟನಾ ಕಾರ್ಯಕ್ರಮ ಲಂಡನ್ ನಲ್ಲಿ ಜರಗಿತು.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು ಮೈಖೇಲ್ ಕನ್ನಡದ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ದೊಡ್ಡ ಮಟ್ಟದ ಕ್ರೀಡಾಕೂಟ, ಪಂದ್ಯಾಟಗಳ ಉದ್ಘಾಟನಾ ಸಮಾರಂಭಗಳು ಸಾಮಾನ್ಯವಾಗಿ ವಿಶೇಷತೆಗಳಿಂದ ಗಮನ ಸೆಳೆಯೋದಿದೆ. ಆದರೆ ಇಂಗ್ಲೆಂಡ್ ಆತಿಥ್ಯದಲ್ಲಿ ನಡೆದ 2019ರ ವಿಶ್ವಕಪ್ ಉದ್ಘಾಟನಾ ಸಮಾರಂಭ, ಒಲಿಂಪಿಕ್ಸ್ ಅಥವಾ ಫುಟ್ಬಾಲ್ ಟೂರ್ನಿಯ ಆರಂಭೋತ್ಸವಕ್ಕೆ ಹೋಲಿಸಿದರೂ ಕಮ್ಮಿ ಅನ್ನಿಸಿತು.

ಇಂಗ್ಲೆಂಡ್ 1999ರಲ್ಲಿ ಕ್ರಿಕೆಟ್ ವಿಶ್ವಕಪ್ ಆತಿಥ್ಯ ವಹಿಸಿದ್ದೇ ಕೊನೆ. ಅನಂತರ ಇದೇ ಮೊದಲ ಬಾರಿ ಇಂಗ್ಲೆಂಡ್ ಟೂರ್ನಿಯನ್ನು ನಡೆಸುತ್ತಿದೆ. ಹಿಂದಿನ ಸಾರಿ ಆತಿಥ್ಯದ ವೇಳೆಯೂ ಉದ್ಘಾಟನಾ ಪಂದ್ಯ ಗಮನ ಸೆಳೆದಿರಲಿಲ್ಲ. ಬೆಳಗ್ಗೆ ಸಮಾರಂಭದ ವೇಳೆ ಮೋಡ ಕವಿದಿದ್ದಿಂದ ವಾತಾವರಣ ಮಸುಕು ಮಸುಕಿದ್ದಾಗಲೇ ಉದ್ಘಾಟನಾ ಸಮಾರಂಭ ನಡೆದು ಹೋಗಿತ್ತು.

ವಿಶ್ವಕಪ್ 2019: ಭಾರತದ ನಾಯಕ ಕೊಹ್ಲಿಗೆ ಲಂಡನ್‌ನಲ್ಲಿ ವಿಶೇಷ ಗೌರವವಿಶ್ವಕಪ್ 2019: ಭಾರತದ ನಾಯಕ ಕೊಹ್ಲಿಗೆ ಲಂಡನ್‌ನಲ್ಲಿ ವಿಶೇಷ ಗೌರವ

ಅಂದ್ಹಾಗೆ ಕಾರ್ಯಕ್ರಮ ತೀರಾ ಸಪ್ಪೆ ಅನ್ನಿಸಿತ್ತು ಎನ್ನುವ ಬದಲು ಒಂದಿಷ್ಟು ಕಾರ್ಯಕ್ರಮಗಳು ನೆರೆದ ವೀಕ್ಷಕರನ್ನು ರಂಜಿಸಿತು ಎನ್ನಬಹುದೇನೊ. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನದ ವಿದ್ಯಾಭ್ಯಾಸ ಕ್ಷೇತ್ರದಲ್ಲಿನ ಕ್ರಾಂತಿಗಾಗಿ ಗುರುತಿಸಿಕೊಂಡಿರುವ, ನೋಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸಾಫ್ಜಾಯಿ ವೇದಿಯಲ್ಲಿ ಕೊಂಚ ಗಮನ ಸೆಳೆದರು. ಅದು ಬಿಟ್ಟರೆ ಎಂದಿನಂತೆ ಒಂದಿಷ್ಟು ಸೆಲೆಬ್ರೆಟಿಗಳು, ಬ್ಯಾಂಡ್ ವಾದ್ಯಗಳು, ಸಂಗೀತ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಿದವು.

Story first published: Thursday, May 30, 2019, 13:20 [IST]
Other articles published on May 30, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X