ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್‌ ಆಟವೇ ಮಹಾನ್‌ ಗುರು ಎಂದ ಟೀಮ್‌ ಇಂಡಿಯಾ ಕ್ಯಾಪ್ಟನ್‌ ಕೊಹ್ಲಿ!

ICC World Cup 2019 : ಮೊದಲ ಬಾರಿಗೆ ತನ್ನ ಗುರುವಿನ ಬಗ್ಗೆ ಮಾತನಾಡಿದ ಕೊಹ್ಲಿ..? | Oneindia Kannada
World Cup 2019: Cricket is a great teacher, says Virat Kohli

ಸೌಥಂಪ್ಟನ್‌, ಜೂನ್‌ 21: ಆಧುನಿಕ ಕ್ರಿಕೆಟ್‌ ಕುರಿತಾಗಿ ಮಾತನಾಡುವುದಾದರೆ ಟೀಮ್‌ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ ಸಾರ್ವಕಾಲಿಕ ಶ್ರೇಷ್ಠರ ಸಾಲಿನಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಳ್ಳುತ್ತಾರೆ. ಬ್ಯಾಟಿಂಗ್‌ನಲ್ಲಿ ಇರುವ ಬಹುತೇಕ ವಿಶ್ವ ದಾಖಲೆಗಳನ್ನು ಕಿಂಗ್‌ ಕೊಹ್ಲಿ ಈಗಾಗಲೇ ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದ ತಮ್ಮ ನಾಯಕತ್ವದ ಮೂಲಕವೂ ಟೀಮ್‌ ಇಂಡಿಯಾಗೆ ಹಲವು ಐತಿಹಾಸಿಕ ಗೆಲುವನ್ನು ತಂದುಕೊಟ್ಟಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಪ್ರಸಕ್ತ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲೂ ಕೊಹ್ಲಿ ತಮ್ಮ ವೈಯಕ್ತಿಕ ಪ್ರದರ್ಶನ ಮತ್ತು ಅತ್ಯುತ್ತಮ ನಾಯಕನ ಗುಣಗಳಿಂದ ಟೀಮ್‌ ಇಂಡಿಯಾವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸುತ್ತಿದ್ದಾರೆ. ಹೀಗಾಗಿ ಇಂಗ್ಲೆಂಡ್‌ ಮತ್ತು ವೇಲ್ಸ್‌ ಆತಿಥ್ಯದಲ್ಲಿ ನಡೆಯುತ್ತಿರುವ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡ ಪ್ರಶಸ್ತಿ ಗೆಲ್ಲುವ ಫೇವರಿಟ್‌ ತಂಡ ಎನಿಸಿಕೊಂಡಿದೆ.

ವಿರಾಟ್‌ ಕೊಹ್ಲಿ ಶತಕಗಳ ದಾಖಲೆ ಸರಿಗಟ್ಟಿದ ಡೇವಿಡ್‌ ವಾರ್ನರ್‌!ವಿರಾಟ್‌ ಕೊಹ್ಲಿ ಶತಕಗಳ ದಾಖಲೆ ಸರಿಗಟ್ಟಿದ ಡೇವಿಡ್‌ ವಾರ್ನರ್‌!

ಶನಿವಾರ ನಡೆಯಲಿರುವ ಅಫಘಾನಿಸ್ತಾನ ವಿರುದ್ಧದ ಪಂದ್ಯದಕ್ಕೂ ಮುನ್ನ ಇಲ್ಲಿನ ರೋಸ್‌ಬೌಲ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಕ್ರಿಕೆಟ್‌ 4 ಗುಡ್‌ ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ಬೆರೆತು ಕ್ರಿಕೆಟ್‌ ಆಡಿದ ಕೊಹ್ಲಿ, ಈ ಸಂದರ್ಭದಲ್ಲಿ ಕ್ರಿಕೆಟ್‌ ಆಟದ ಮಹತ್ವದ ಕುರಿತಾಗಿಯೂ ಮಾತನಾಡಿದ್ದಾರೆ.

ವಿಜಯ್‌ ಶಂಕರ್‌ಗೆ ಎಸೆದ ಯಾರ್ಕರ್‌ ಬಗ್ಗೆ ಮಾತನಾಡಿದ ಬುಮ್ರಾ!ವಿಜಯ್‌ ಶಂಕರ್‌ಗೆ ಎಸೆದ ಯಾರ್ಕರ್‌ ಬಗ್ಗೆ ಮಾತನಾಡಿದ ಬುಮ್ರಾ!

"ಮಕ್ಕಳ ಜೀವನದಲ್ಲಿ ಕ್ರಿಕೆಟ್‌ ಮಹತ್ವದ ಪ್ರಭಾವ ಬೀರಬಲ್ಲದು ಎಂದು ನಾನು ನಂಬಿದ್ದೇನೆ. ಒಬ್ಬ ಮನುಷ್ಯನಾಗಿ ಬೆಳೆಯಲು ಕ್ರಿಕೆಟ್‌ ನಿಜಕ್ಕೂ ಅನುಕೂಲಕಾರಿ. ಏಕೆಂದರೆ ಜೀವನದಲ್ಲಿ ಎದುರಾಗುವಂತಹ ಹಲವು ಏಳು ಬೀಳುಗಳ ಅನುಭವವನ್ನು ಕ್ರಿಕೆಟ್‌ ಆಟದಲ್ಲೂ ನಾವು ಅನುಭವಿಸಬಹುದು. ಉತ್ತಮ ಸಮಯ ಮತ್ತು ಕೆಟ್ಟ ಸಮಯ ಎಲ್ಲವುದರ ಅರಿವಾಗುತ್ತದೆ. ಕಠಿಣ ಸಂದರ್ಭಗಳಲ್ಲಿ ಹೇಗೆ ಪುಟಿದೇಳಬೇಕು ಎಂಬುದನ್ನು ಕಲಿಸುತ್ತದೆ. ನನ್ನ ಪ್ರಕಾರ ಕ್ರಿಕೆಟ್‌ ಆಟವೇ ಮಹಾನ್‌ ಗುರು,'' ಎಂದು ಹೇಳಿದ್ದಾರೆ.

ವಿಶ್ವಕಪ್‌ನಿಂದ ಧವನ್‌ ನಿರ್ಗಮನಕ್ಕೆ ಮರುಗಿದ ಸಚಿನ್‌ ತೆಂಡೂಲ್ಕರ್‌!ವಿಶ್ವಕಪ್‌ನಿಂದ ಧವನ್‌ ನಿರ್ಗಮನಕ್ಕೆ ಮರುಗಿದ ಸಚಿನ್‌ ತೆಂಡೂಲ್ಕರ್‌!

ಟೂರ್ನಿಯಲ್ಲಿ ಭಾರತ ತಂಡ ಈವರೆಗೆ ಒಟ್ಟು 4 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯ ಮಳಗೆ ಆಹುತಿಯಾದರೆ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ವಿರುದ್ಧದ ಕಠಿಣ ಪಂದ್ಯಗಳಲ್ಲಿ ಜಯ ದಾಖಲಿಸಿ ಅಂಕಪಟ್ಟಿಯಲ್ಲಿ ಸದ್ಯಕ್ಕೆ ನಾಲ್ಕನೇ ಸ್ಥಾನದಲ್ಲಿದೆ. ಇದೀಗ ತನ್ನ ಮುಂದಿನ ಪಂದ್ಯದಲ್ಲಿ ಕ್ರಿಕೆಟ್‌ ಕೂಸು ಅಫಘಾನಿಸ್ತಾನ ವಿರುದ್ಧ ಜೂನ್‌ 22ರಂದು ಸೌಥಂಪ್ಟನ್‌ನ ರೋಸ್‌ಬೌಲ್‌ ಕ್ರೀಡಾಂಗಣದಲ್ಲಿ ಪೈಪೋಟಿ ನಡೆಸಲಿದೆ.

Story first published: Friday, June 21, 2019, 17:20 [IST]
Other articles published on Jun 21, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X