ವಿಶ್ವಕಪ್‌: ಮಳೆಯಿಂದಾಗಿ ಸೆಮಿಫೈನಲ್‌ ರದ್ದು, ಬುಧವಾರಕ್ಕೆ ಮುಂದೂಡಿಕೆ

ಮ್ಯಾಂಚೆಸ್ಟರ್‌, ಜುಲೈ 9: ಭಾರತ ಮತ್ತು ನ್ಯೂಜಿಲೆಂಡ್‌ ನಡುವೆ ಮಂಗಳವಾರ ನಡೆದ ಮೊದಲ ಸೆಮಿಫೈನಲ್‌ ಪಂದ್ಯವು ಮಳೆಗೆ ಆಹುತಿಯಾಯಿತು. ಹೀಗಾಗಿ ಪಂದ್ಯವನ್ನು ಸೆಮಿಫೈನಲ್‌ಗೆ ಕಾಯ್ದಿರಿಸಿದ ದಿನವಾದ ಬುಧವಾರಕ್ಕೆ ಮುಂದೂಡಲಾಗಿದೆ.

ವಿಶ್ವಕಪ್‌: ಭಾರತ vs ನ್ಯೂಜಿಲೆಂಡ್‌ ಸೆಮಿಫೈನಲ್ ಪಂದ್ಯದ ಲೈವ್‌ ಸ್ಕೋರ್‌ ಕಾರ್ಡ್‌

1
43689

ಇಲ್ಲಿನ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ಮಂಗಳವಾರ ಟಾಸ್‌ ಗೆದ್ದ ನ್ಯೂಜಿಲೆಂಡ್‌ ದೊಡ್ಡ ಮೊತ್ತ ದಾಖಲಿಸುವ ಲೆಕ್ಕಾಚಾರದೊಂದಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ, ಟೀಮ್‌ ಇಂಡಿಯಾದ ಶಿಸ್ತಿನ ಬೌಲಿಂಗ್‌ ದಾಳಿ ಎದುರು 46.1 ಓವರ್‌ಗಳಲ್ಲಿ 211/5 ರನ್‌ಗಳನ್ನು ಮಾತ್ರವೇ ಗಳಿಸಲು ಶಕ್ತವಾಗಿತ್ತು.

ಈ ಸಂದರ್ಭದಲ್ಲಿ ಧಾರಾಕಾರ ಮಳೆ ಸುರಿದ ಕಾರಣ ಪಂದ್ಯ ನಡೆಸಲು ಸಾಧ್ಯವಾಗಲಿಲ್ಲ. ಒಂದು ಹಂತದಲ್ಲಿ ಮಳೆ ಆರ್ಭಟ ಕಡಿಮೆಯಾಗಿ ಭಾರತಕ್ಕೆ ಡಕ್ವರ್ತ್‌ ಲೂಯಿಸ್‌ ನಿಯಮದನ್ವಯ 20 ಓವರ್‌ಗಳಲ್ಲಿ 148 ರನ್‌ಗಳ ಗುರಿ ನಿಗದಿ ಪಡಿಸುವ ಸಾಧ್ಯತೆ ಇತ್ತಾದರೂ, ವರುಣನ ಆರ್ಭಟ ಮತ್ತೆ ಶುರುವಾದ ಹಿನ್ನೆಲೆಯಲ್ಲಿ ದಿನದಾಟವನ್ನು ರದ್ದುಪಡಿಸುವಂತಾಯಿತು.

ಇದರೊಂದಿಗೆ ಬುಧವಾರಕ್ಕೆ ಪಂದ್ಯವನ್ನು ಮುಂದೂಡಲಾಗಿದ್ದು, ನ್ಯೂಜಿಲೆಂಡ್‌ ತಂಡ 46.1 ಓವರ್‌ಗಳಿಂದ ತನ್ನ ಬ್ಯಾಟಿಂಗ್‌ ಮುಂದುವರಿಸಲಿದೆ. ಬಳಿಕ ಭಾರತ ತಂಡ ಗುರಿ ಬೆನ್ನತ್ತಲಿದೆ.

ಇದಕ್ಕೂ ಮುನ್ನ ವೇಗದ ಬೌಲಿಂಗ್‌ಗೆ ಹೇಳಿ ಮಾಡಿಸಿದ ವಾತಾವರಣದಲ್ಲಿ ದಾಳಿಗಿಳಿದ ಟೀಮ್‌ ಇಂಡಿಯಾದ ವೇಗಿಗಳು ಮೊದಲ ಎರಡು ಓವರ್‌ಗಳಲ್ಲಿ ಮೇಡಿನ್‌ ತೆಗೆದುಕೊಂಡರು. ಅಷ್ಟೇ ಅಲ್ಲದೆ ತಮ್ಮ ಎರಡನೇ ಓವರ್‌ನಲ್ಲಿ ಜಸ್‌ಪ್ರೀತ್‌ ಬುಮ್ರಾ, ಕಿವೀಸ್‌ನ ಆರಂಭಿಕ ಬ್ಯಾಟ್ಸ್‌ಮನ್‌ ಮಾರ್ಟಿನ್‌ ಗಪ್ಟಿಲ್‌ ಅವರ ವಿಕೆಟ್‌ ಪಡೆದರು.

ಆದರೆ, ನಾಯಕ ಕೇನ್‌ ವಿಲಿಯಮ್ಸನ್ (67) ಮತ್ತು ಅನುಭವಿ ಬ್ಯಾಟ್ಸ್‌ಮನ್‌ ರಾಸ್‌ ಟೇಲರ್‌ (67*) ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ ನ್ಯೂಜಿಲೆಂಡ್‌ ಎಚ್ಚರಿಕೆಯ ಬ್ಯಾಟಿಂಗ್‌ ನಡೆಸಿ 46.1 ಓವರ್‌ಗಳಲ್ಲಿ 211/5 ರನ್‌ಗಳನ್ನು ಗಳಿಸಿತ್ತು. ಈ ಸಂದರ್ಭದಲ್ಲಿ ಮಳೆ ಸುರಿದ ಕಾರಣ ಪಂದ್ ಸ್ಥಗಿತ ಗೊಂಡಿತು.

ಬುಮ್ರಾ ಬೌಲಿಂಗ್‌ ಎದುರು ರನ್‌ ಗಳಿಸುವಲ್ಲಿ ಪರದಾಡುತ್ತಿದ್ದ ಕಿವೀಸ್‌ನ ಅನುಭವಿ ಬ್ಯಾಟ್ಸ್‌ಮನ್‌ ಗಪ್ಟಿಲ್‌ ಎಡ್ಜ್‌ ಮಾಡಿದ ಚೆಂಡನ್ನು ಸ್ಲಿಪ್‌ನಲ್ಲಿ ನಿಂತಿದ್ದ ಭಾರತ ತಂಡದ ನಾಯಕ ಅದ್ಭುತ ರೀತಿಯಲ್ಲಿ ಕ್ಯಾಚ್‌ ಸ್ವೀಕರಿಸಿ ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರ ಸಂಭ್ರಮಕ್ಕೆ ಕಾರಣರಾದರು.

ತಂಡಗಳ ವಿವರ

ಭಾರತ (ಪ್ಲೇಯಿಂಗ್‌ 11): ಕೆ.ಎಲ್‌ ರಾಹುಲ್‌, ವಿರಾಟ್‌ ಕೊಹ್ಲಿ (ನಾಯಕ), ರಿಷಭ್‌ ಪಂತ್‌, ಎಂ.ಎಸ್‌ ಧೋನಿ (ವಿಕೆಟ್‌ಕೀಪರ್‌), ದಿನೇಶ್‌ ಕಾರ್ತಿಕ್‌, ದಿನೇಶ್‌ ಕಾರ್ತಿಕ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್‌ ಕುಮಾರ್‌ ಯುಜ್ವೇಂದ್ರ ಚಹಲ್‌, ಜಸ್‌ಪ್ರೀತ್‌ ಬುಮ್ರಾ.

ನ್ಯೂಜಿಲೆಂಡ್‌ (ಪ್ಲೇಯಿಂಗ್‌ 11): ಮಾರ್ಟಿನ್‌ ಗಪ್ಟಿಲ್‌, ಹೆನ್ರಿ ನಿಕೋಲ್ಸ್‌, ಕೇನ್‌ ವಿಲಿಯಮ್ಸನ್‌ (ನಾಯಕ), ರಾಸ್‌ ಟೇಲರ್‌, ಟಾಮ್‌ ಲೇಥಮ್‌ (ವಿಕೆಟ್‌ಕೀಪರ್‌), ಜೇಮ್ಸ್‌ ನೀಶಮ್‌, ಕಾಲಿನ್‌ ಡಿ'ಗ್ರ್ಯಾಂಡ್‌ಹೋಮ್‌, ಮಿಚೆಲ್‌ ಸ್ಯಾಂಟ್ನರ್‌, ಲಾಕಿ ಫರ್ಗ್ಯೂಸನ್‌, ಮ್ಯಾಟ್‌ ಹೆನ್ರಿ, ಟ್ರೆಂಟ್‌ ಬೌಲ್ಟ್‌.

{headtohead_cricket_3_4}

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, July 9, 2019, 15:30 [IST]
Other articles published on Jul 9, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X