ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿಗಿಂತ ಧೋನಿ ಯಾಕೆ ಶ್ರೇಷ್ಠ ಎಂದು ಸೊಗಸಾಗಿ ವಿವರಿಸಿದ ರೈನಾ

World Cup: Dhoni is captain of captains, he gives Kohli confidence-Raina

ನವದೆಹಲಿ, ಮೇ 28: ಭಾರತ ಕ್ರಿಕೆಟ್ ತಂಡದಲ್ಲಿ ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿ ಶಾಸ್ತ್ರಿಗಿಂತ ಎಂಎಸ್ ಧೋನಿ ಅತೀ ಪ್ರಮುಖ ಎಂಬ ಮಾತು ಮತ್ತೆ ಪುನರುಚ್ಛರಿಸಲ್ಪಟ್ಟಿದೆ. ಟೀಮ್ ಇಂಡಿಯಾಕ್ಕೆ ಧೋನಿಯ ರನ್ ಕೊಡುಗೆಗಿಂತಲೂ ಮಿಗಿಲಾಗಿ ಅವರ ಉಪಸ್ಥಿತಿಯೇ ತಂಡಕ್ಕೆ ಬಲ ತುಂಬುತ್ತದೆ ಎಂದು ಅನುಭವಿ ಆಟಗಾರ ಸುರೇಶ್ ರೈನಾ ಹೇಳಿದ್ದಾರೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು ಮೈಖೇಲ್ ಕನ್ನಡದ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಐಪಿಎಲ್‌ನಲ್ಲಿ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ನಲ್ಲಿ ಆಡುವ ಸುರೇಶ್ ರೈನಾ, ಧೋನಿ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುತ್ತ, 'ಎಂಎಸ್‌ಡಿ ಆಟಗಾರನಾಗಿಯೂ ತಂತ್ರಜ್ಞನಾಗಿಯೂ ಭಾರತ ತಂಡದಲ್ಲಿ ಹೆಚ್ಚು ಪ್ರಮುಖ ವ್ಯಕ್ತಿ ಎಂದು ಹೇಳಿದ್ದಾರೆ.

ವಿಶ್ವಕಪ್‌: ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ಆಟಗಾರನಿಗೆ ಪೆಟ್ಟು!ವಿಶ್ವಕಪ್‌: ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ಆಟಗಾರನಿಗೆ ಪೆಟ್ಟು!

ಕೊಹ್ಲಿಗಿಂತ ಧೋನಿ ಯಾವೆಲ್ಲ ಕಾರಣಕ್ಕೆ ಶ್ರೇಷ್ಠ ಎಂಬುದನ್ನು ರೈನಾ ಸೊಗಸಾಗಿ ವಿವರಿಸಿದ್ದಾರೆ.

ಆಟಗಾರರ ಜೊತೆ ಸದಾ ಸಂವಹನ

ಆಟಗಾರರ ಜೊತೆ ಸದಾ ಸಂವಹನ

'ಅಧಿಕೃತವಾಗಿ ಧೋನಿ ಈಗ ನಾಯಕನಲ್ಲ. ಆದರೆ ಮೈದಾನದಲ್ಲಿ ಧೋನಿ ಅವರು ವಿರಾಟ್ ಕೊಹ್ಲಿಗೂ ನಾಯಕನೇ ಎಂಬುದು ನನ್ನನಿಸಿಕೆ. ಧೋನಿ ಪಾತ್ರ ಈಗಲೂ ನಾಯಕನಾಗಿಯೇ ಮುಂದುವರೆದಿದೆ. ವಿಕೆಟ್ ಕೀಪಿಂಗ್ ಮಾಡುತ್ತಲೇ ಧೋನಿ ಆಟಗಾರರ ಜೊತೆ ಸಂವಹನ ಮಾಡುತ್ತಿರುತ್ತಾರೆ' ಎಂದು ರೈನಾ ತಿಳಿಸಿದರು.

ನಾಯಕನ ನಾಯಕ ಧೋನಿ

ನಾಯಕನ ನಾಯಕ ಧೋನಿ

'ಪಂದ್ಯ ನಡೆಯುತ್ತಿದ್ದಾಗ ಈಗಲೂ ಧೋನಿ ಸ್ಟಂಪ್‌ನ ಹಿಂದಿದ್ದುಕೊಂಡೇ ಸಲಹೆಗಳನ್ನು ನೀಡುತ್ತಿರುತ್ತಾರೆ. ಫೀಲ್ಡರ್‌ಗಳನ್ನು ನಿಲ್ಲಿಸುವಾಗಲೂ ಧೋನಿ ಪ್ರಮುಖ ಪಾತ್ರ ವಹಿಸುತ್ತಾರೆ. ಧೋನಿ ನಿಜಕ್ಕೂ ನಾಯಕನ ನಾಯಕ' ಎಂದು ರೈನಾ ಅಭಿಪ್ರಾಯಿಸಿದರು.

ಧೋನಿಯಿದ್ದರೆ ಗೆಲ್ಲೋ ಹುಮ್ಮಸ್ಸು

ಧೋನಿಯಿದ್ದರೆ ಗೆಲ್ಲೋ ಹುಮ್ಮಸ್ಸು

'ಧೋನಿ ಸ್ಟಂಪ್‌ ಹಿಂದೆ ಇದ್ದಾರೆಂದರೆ, ಕೊಹ್ಲಿಗೂ ಒಂದು ಹಿಡಿ ಆತ್ಮ ವಿಶ್ವಾಸ ಜಾಸ್ತಿ. ಧೋನಿ ಯಾವತ್ತಿಗೂ ನಮ್ಮಲ್ಲಿ ಗೆಲುವಿನ ಭರವಸೆ ಮೂಡಿಸುತ್ತಿರುತ್ತಾರೆ. ಮಹಿ ಆತ್ಮವಿಶ್ವಾಸವುಳ್ಳವ, ಆತ ನಾಯಕ-ಆಟಗಾರ ಎರಡೂ ಹೌದು' ಎಂದು ರೈನಾ ವಿವರಿಸಿದರು.

ಕಪ್ ನಮ್ಮದೇ ಎಂಬ ವಿಶ್ವಾಸ

ಕಪ್ ನಮ್ಮದೇ ಎಂಬ ವಿಶ್ವಾಸ

'ವಿಶ್ವಕಪ್‌ನಂತ ದೊಡ್ಡ ಟೂರ್ನಿಯಲ್ಲಿ ಧೋನಿ ಅತೀ ಅಮೂಲ್ಯ ಆಟಗಾರ. ತನ್ನ ಜವಾಬ್ದಾರಿ ಏನೆಂಬುದು ಆತನಿಗೆ ಚೆನ್ನಾಗಿ ಗೊತ್ತಿದೆ. ಆಟಗಾರರಿಗೆ ಅವರ ಆತ್ಮ ವಿಶ್ವಾಸದ ಬೆಂಬಲ ಬೇಕಿದೆ. ಟೂರ್ನಿಯಲ್ಲಿ ಎಲ್ಲವೂ ನಮ್ಮ ಫೇವರ್ ಆಗಬೇಕಿದೆ. ಉದ್ದೇಶಗಳು ಧನಾತ್ಮಕವಾಗಿರಬೇಕಿದೆ. ಈ ಬಾರಿಯ ವಿಶ್ವಕಪ್ ಗೆಲ್ಲಲು ನಮ್ಮದು ಅತ್ಯುತ್ತಮ ತಂಡ' ಎಂದು ರೈನಾ ಟೀಮ್ ಇಂಡಿಯಾದ ಟ್ರೋಫಿ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.

Story first published: Tuesday, May 28, 2019, 15:48 [IST]
Other articles published on May 28, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X