ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ 100 ಅಥ್ಲಿಟ್ಸ್‌: ಸ್ಥಾನ ಪಡೆದ ಏಕೈಕ ಕ್ರಿಕೆಟಿಗ ವಿರಾಟ್ ಕೊಹ್ಲಿ

Virat kohli

ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ಕೆಟ್ಟ ಫಾರ್ಮ್‌ನಿಂದ ಕಂಗೆಟ್ಟಿದ್ದಾರೆ. ಅಂತರಾಷ್ಟ್ರೀಯ ಶತಕ ದಾಖಲಿಸಿ ಮೂರು ವರ್ಷಗಳೇ ಸಮೀಪಿಸುತ್ತಿದೆ. ಅದ್ರಲ್ಲೂ ಐಪಿಎಲ್ 2022ರಲ್ಲಿ ಮೂರು ಬಾರಿ ಗೋಲ್ಡನ್ ಡಕೌಟ್ ಆಗಿರುವ ವಿರಾಟ್ ಗಳಿಸಿದ್ದು ಕೇವಲ ಒಂದು ಅರ್ಧಶತಕ.

ಇಷ್ಟು ಕೆಟ್ಟ ಫಾರ್ಮ್‌ನಲ್ಲಿದ್ದರೂ ವಿರಾಟ್ ಕೊಹ್ಲಿ ಬ್ರ್ಯಾಂಡ್ ಮೌಲ್ಯಕ್ಕೆ ಯಾವುದೇ ನಷ್ಟವಿಲ್ಲ. ಮೈದಾನದಲ್ಲಿ ರನ್‌ಗಳ ಸುರಿಮಳೆಯಾಗದಿದ್ದರೂ ವಿರಾಟ್ ಅಪರೂಪದ ಸಾಧನೆ ಮಾಡಿದರು. ವಿರಾಟ್ ಕೊಹ್ಲಿ ವಿಶ್ವದಾದ್ಯಂತ ಅತಿ ಹೆಚ್ಚು ಆದಾಯ ಗಳಿಸುವ 100 ಅಥ್ಲೀಟ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ವಿಶೇಷ ಅಂದ್ರೆ ಈ ಪಟ್ಟಿಯಲ್ಲಿರುವ ಏಕೈಕ ಕ್ರಿಕೆಟಿಗ ಇವರಾಗಿದ್ದಾರೆ.

ಐಪಿಎಲ್‌ನಲ್ಲಿ ಇದುವರೆಗೆ 12 ಪಂದ್ಯಗಳನ್ನು ಆಡಿರುವ ವಿರಾಟ್ 19.6 ಸರಾಸರಿಯಲ್ಲಿ 216 ರನ್ ಗಳಿಸಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಐಪಿಎಲ್‌ನಲ್ಲಿ ಮೊದಲ ಬಾರಿಗೆ ವಿರಾಟ್ ಕೊಹ್ಲಿ 20 ಸರಾಸರಿಗಿಂತ ಕೆಳಗಿದ್ದಾರೆ.

Kuldeepಗಳ ಮುಖಾಮುಖಿಯಲ್ಲಿ ಗೆದ್ದವರು ಯಾರು | Oneindia Kannada

2009ರ ಋತುವಿನಲ್ಲಿ 27.6ರ ಸರಾಸರಿಯಲ್ಲಿ 359 ರನ್ ಗಳಿಸಿದ್ದು ಕೊಹ್ಲಿ ಅವರ ಕನಿಷ್ಠ ಮೊತ್ತವಾಗಿತ್ತು. ಆದರೆ ಈ ಬಾರಿ ವಿರಾಟ್ ಕನಿಷ್ಠ 300 ರನ್ ಕೂಡ ಮಾಡದ ಸ್ಥಿತಿಯಲ್ಲಿ ಕಾಣುತ್ತಿದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ಧ ಅರ್ಧ ಶತಕ ಗಳಿಸಿದ್ರೂ ಸಹ ಆ ಇನ್ನಿಂಗ್ಸ್ ಉತ್ತಮವಾಗಿ ಕಾಣಲಿಲ್ಲ. 53 ಎಸೆತಗಳಲ್ಲಿ 58 ರನ್ ಗಳಿಸಿ ತಂಡದ ಪರ ಭಾರೀ ಇನ್ನಿಂಗ್ಸ್ ಆಡಿದರು. ಆದರೆ ಈ ಅರ್ಧಶತಕದಿಂದ ವಿರಾಟ್ ಫಾರ್ಮ್ ಗೆ ಬಂದಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಅವರ ಆತ್ಮವಿಶ್ವಾಸವನ್ನು ವಿರಾಟ್ ಬುಡಮೇಲು ಮಾಡಿದರು.

Story first published: Thursday, May 12, 2022, 9:27 [IST]
Other articles published on May 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X