ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

5 ಗಂಟೆ 53 ನಿಮಿಷದಲ್ಲಿ ಫಲಿತಾಂಶ : ಟೆಸ್ಟ್ ಇತಿಹಾಸದ ಅತ್ಯಂತ ಕಿರು ಅವಧಿಯ ಪಂದ್ಯ ಯಾವುದು ಗೊತ್ತಾ?

Worlds Shortest duration test matche 5 Hours and 53 Minutes

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ಎರಡನೇ ದಿನದಲ್ಲೇ ಫಲಿತಾಂಶವನ್ನು ಪಡೆದಿದೆ. ಈ ಮೂಲಕ ಕಡಿಮೆ ಅವಧಿಯಲ್ಲಿ ಫಲಿತಾಂಶವನ್ನು ಪಡೆದುಕೊಂಡಿದೆ. ಭಾರತ ಹಾಗೂ ಇಂಗ್ಲೆಂಡ್ ನಡುವಿನ ಈ ಪಂದ್ಯ ಐದು ಸೆಶನ್‌ನಲ್ಲಿ ಫಲಿತಾಂಶವನ್ನು ಪಡೆದುಕೊಂಡಿದೆ. ಆದರೆ ಟೆಸ್ಟ್ ಇತಿಹಾಸವನ್ನು ಗಮನಿಸಿದರೆ ಇದಕ್ಕಿಂತಲೂ ಕಡಿಮೆ ಅವಧಿಯಲ್ಲಿ ಫಲಿತಾಂಶವನ್ನು ಪಡೆದ ಪಂದ್ಯಗಳು ದೊರೆಯುತ್ತದೆ.

1932ರಲ್ಲಿ ನಡೆದ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಪಂದ್ಯ ಟೆಸ್ಟ್ ಇತಿಹಾಸದ ಅತ್ಯಂತ ಕಡಿಮೆ ಅವಧಿಯಲ್ಲಿ ಫಲಿತಾಂಶವನ್ನು ಪಡೆದ ಪಂದ್ಯ ಎನಿಸಿಕೊಂಡಿದೆ. ಇದು ಕೇವಲ 5 ಗಂಟೆ 53 ನಿಮಿಷದಲ್ಲಿ ಫಲಿತಾಂಶವನ್ನು ಪಡೆದುಕೊಂಡಿದ್ದು ಈವರೆಗಿನ ದಾಖಲೆಯಾಗಿ ಉಳಿದುಕೊಂಡಿದೆ. ಎಸೆತಗಳ ಲೆಕ್ಕಾಚಾರದಲ್ಲಿಯೂ ಇದೇ ಪಂದ್ಯ ಅತ್ಯಂತ ಕಿರು ಅವಧಿಯ ಪಂದ್ಯ ಎನಿಸಿಕೊಂಡಿದೆ. 656 ಎಸೆತಗಳಲ್ಲಿ ಈ ಪಂದ್ಯ ಸಂಪೂರ್ಣವಾಗಿತ್ತು.

ಪಂದ್ಯದ ಮಧ್ಯೆಯೇ ವಿರಾಟ್ ಕೊಹ್ಲಿ ಬಳಿಗೆ ಬಂದ ಅಭಿಮಾನಿ: ವಿಡಿಯೋಪಂದ್ಯದ ಮಧ್ಯೆಯೇ ವಿರಾಟ್ ಕೊಹ್ಲಿ ಬಳಿಗೆ ಬಂದ ಅಭಿಮಾನಿ: ವಿಡಿಯೋ

ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವೆ 1932ರ ಫೆಬ್ರವರಿ 12ರಂದು ಮೆಲ್ಬರ್ನ್‌ನಲ್ಲಿ ಈ ಪಂದ್ಯ ನಡೆದಿತ್ತು. ಐದು ಪಂದ್ಯಗಳ ಈ ಸರಣಿಯ ಮೊದಲ ನಾಲ್ಕು ಪಂದ್ಯಗಳಲ್ಲಿ ಬಲಿಷ್ಠ ಆಸ್ಟ್ರೇಲಿಯಾ ಗೆಲುವು ಸಾಧಿಸಿತ್ತು. ಈ ಸರಣಿಯ ಅಂತಿಮ ಪಂದ್ಯವೇ ಈ ದಾಖಲೆಯಾಗಿ ಉಳಿದುಕೊಂಡಿದೆ.

ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕಾ ಕೇವಲ 36 ರನ್‌ಗಳಿಗೆ ಆಲೌಟ್ ಆಗಿತ್ತು. ದಕ್ಷಿಣ ಆಫ್ರಕಾ ತಂಡದ ನಾಯಕ ಜಾಕ್ ಕ್ಯಾಮರೂನ್ ಗಳಿಸಿದ 11 ರನ್ ಈ ಇನ್ನಿಂಗ್ಸ್‌ನ ಏಕೈಕ ಎರಡಂಕಿ ಮೊತ್ತವಾಗಿತ್ತು. 23.2 ಓವರ್‌ಗಳಲ್ಲಿ ಈ ಇನ್ನಿಂಗ್ಸ್‌ ಅಂತ್ಯವಾಗಿತ್ತು.

ಇದಕ್ಕೆ ಪ್ರತಿಯಾಗಿ ಆಸ್ಟ್ರೇಲಿಯಾ ಬ್ಯಾಟಿಂಗ್ ನಡೆಸಿ 153 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡಿತ್ತು. ಈ ಪಂದ್ಯದಲ್ಲಿ ಕ್ರಿಕೆಟ್ ಲೋಕದ ದಿಗ್ಗಜ ಆಟಗಾರ ಡಾನ್ ಬ್ರಾಡ್ಮನ್ ಗಾಯಗೊಂಡ ಕಾರಣ ಮೈದಾನಕ್ಕೆ ಇಳಿದಿರಲಿಲ್ಲ. ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಮತ್ತೆ ಹೀನಾಯ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಕೇವಲ 45 ರನ್‌ಗಳಿಗೆ ಆಲೌಟ್ ಆಗಿತ್ತು. ಈ ಮೂಲಕ ಆಸ್ಟ್ರೇಲಿಯಾ ಇನ್ನಿಂಗ್ಸ್ ಹಾಗೂ 72 ರನ್‌ಗಳ ಅಂತರದ ಗೆಲುವು ಸಾಧಿಸಿತ್ತು. ಒಟ್ಟಾರೆ ಈ ಪಂದ್ಯ 5 ಗಂಟೆ 53 ನಿಮಿಷದಲ್ಲಿ ಅಂತ್ಯವಾಗಿತ್ತು.

Story first published: Friday, February 26, 2021, 8:47 [IST]
Other articles published on Feb 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X