ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್ 2020ರ ವೇಳಾಪಟ್ಟಿ ಪ್ರಕಟ: ಕಠಿಣ ಗ್ರೂಪ್‌ನಲ್ಲಿ ಕೊಹ್ಲಿ ಬಳಗ!

ಟಿ20 ವಿಶ್ವಕಪ್ 2020ರ ವೇಳಾಪಟ್ಟಿ ಪ್ರಕಟ: ಕಠಿಣ ಗ್ರೂಪ್‌ನಲ್ಲಿ ಕೊಹ್ಲಿ ಬಳಗ! | Oneindia Kannada
World T20 2020 fixtures announced: Virat Kohli and team in tough group

ನವದೆಹಲಿ, ಜನವರಿ 29: ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪುರುಷರ ಮತ್ತು ಮಹಿಳೆಯರ ಟಿ20 ವಿಶ್ವಕಪ್ 2020ರ ವೇಳಾಪಟ್ಟಿಯ ಚಿತ್ರಣವನ್ನು ಮಂಗಳವಾರ (ಜನವರಿ 29) ನೀಡಿದೆ. ಈ ಪ್ರತಿಷ್ಠಿತ ಕ್ರಿಕೆಟ್ ಟೂರ್ನಿ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ.

ರಣಜಿ ಟ್ರೋಫಿ ಸೆಮಿಫೈನಲ್ ವಿವಾದ: 'ಚೇತೇಶ್ವರ್ ಚೀಟರ್' ಎಂದ ಟ್ವೀಟಿಗರು!ರಣಜಿ ಟ್ರೋಫಿ ಸೆಮಿಫೈನಲ್ ವಿವಾದ: 'ಚೇತೇಶ್ವರ್ ಚೀಟರ್' ಎಂದ ಟ್ವೀಟಿಗರು!

ಟೂರ್ನಿಯಲ್ಲಿ ಭಾರತ 'ಬಿ' ಗ್ರೂಪ್‌ನಲ್ಲಿ ಇದ್ದು, ಈ ಗ್ರೂಪ್‌ನಲ್ಲಿ ಬಲಿಷ್ಠ ತಂಡಗಳಾದ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ ಮತ್ತು ಕ್ವಾಲಿಫೈಯರ್2 ತಂಡಗಳು ಇರಲಿವೆ. ಪುರುಷರ ತಂಡ ಸೌತಾಫ್ರಿಕಾ ಎದುರು ಆರಂಭಿಕ ಸವಾಲು ಸ್ವೀಕರಿಸಲಿದೆ.

ಅದ್ಭುತ ಕ್ಯಾಚ್‌ನಿಂದ ವಿಲಿಯಮ್ಸನ್ ವಿಕೆಟ್ ಮುರಿದ ಹಾರ್ದಿಕ್: ವೈರಲ್ ವಿಡಿಯೋಅದ್ಭುತ ಕ್ಯಾಚ್‌ನಿಂದ ವಿಲಿಯಮ್ಸನ್ ವಿಕೆಟ್ ಮುರಿದ ಹಾರ್ದಿಕ್: ವೈರಲ್ ವಿಡಿಯೋ

ಗ್ರೂಪ್‌ 'ಎ'ಯಲ್ಲಿರುವ ಭಾರತದ ಮಹಿಳಾ ತಂಡ ಹಾಲಿ ಚಾಂಪಿಯನ್ ಮತ್ತು ಆತಿಥೇಯ ತಂಡ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯಲಿದೆ. ಮಹಿಳಾ ಗ್ರೂಪ್ 'ಎ'ಯಲ್ಲಿ ಆಸ್ಟ್ರೇಲಿಯಾ, ಶ್ರೀಲಂಕಾ, ನ್ಯೂಜಿಲ್ಯಾಂಡ್, ಮತ್ತು ಕ್ವಾಲಿಫೈಯರ್1 ತಂಡ ಸ್ಪರ್ಧಿಸಲಿದೆ.

ಒಂದೇ ವರ್ಷ-ಒಂದೇ ದೇಶ ಇದೇ ಮೊದಲು!

ಒಂದೇ ವರ್ಷ-ಒಂದೇ ದೇಶ ಇದೇ ಮೊದಲು!

ಪುರುಷರ ಮತ್ತು ಮಹಿಳಾ ಎರಡೂ ಟಿ20 ವಿಶ್ವಕಪ್ ಪಂದ್ಯಗಳು ಒಂದೇ ವರ್ಷ ಮತ್ತು ಒಂದೇ ದೇಶದಲ್ಲಿ ನಡೆಯುತ್ತಿರುವುದು ಇದೇ ಮೊದಲು. ಪುರುಷರ ಮತ್ತು ಮಹಿಳಾ ಫೈನಲ್ ಪಂದ್ಯಗಳು ವಿಶ್ವದ ಅತೀದೊಡ್ಡ ಸ್ಟೇಡಿಯಂ ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌(ಎಂಸಿಜಿ)ನಲ್ಲಿ ನಡೆಯಲಿವೆ.

ಮಹಿಳೆಯರಿಗೆ ಆಸೀಸ್ ಸವಾಲು

ಮಹಿಳೆಯರಿಗೆ ಆಸೀಸ್ ಸವಾಲು

ಒಟ್ಟು 10 ಮಹಿಳಾ ತಂಡಗಳು 23 ಪಂದ್ಯಗಳನ್ನು ಆಡಲಿವೆ. ಈ ಪಂದ್ಯಗಳು ಫೆಬ್ರವರಿ 21ರಿಂದ ಮಾರ್ಚ್ 8 ನಡುವೆ ನಡೆಯಲಿವೆ. ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವು ಭಾರತದ ವಿರುದ್ಧ ಆರಂಭಿಕ ಸೆಣಸಾಟ ನಡೆಸಲಿದ್ದು, ಈ ಪಂದ್ಯ ಸಿಡ್ನಿಯಲ್ಲಿ ನಡೆಯಲಿದೆ.ಮಹಿಳಾ ಗ್ರೂಪ್ 'ಬಿ'ಯಲ್ಲಿ ಇಂಗ್ಲೆಂಡ್, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಕ್ವಾಲಿಫೈಯರ್ 2 ತಂಡಗಳಿವೆ.

ಅಗ್ರಸ್ಥಾನಿ ಪಾಕಿಸ್ತಾನ

ಅಗ್ರಸ್ಥಾನಿ ಪಾಕಿಸ್ತಾನ

ಪುರುಷರ ಪಂದ್ಯಗಳು ಅಕ್ಟೋಬರ್ 18ರಿಂದ ನವೆಂಬರ್ 15ರ ಅವಧಿಯಲ್ಲಿ ನಡೆಯಲಿವೆ. ಸೂಪರ್ 12 ಗ್ರೂಪ್ ಹಂತದ ಪಂದ್ಯಗಳು ಅಕ್ಟೋಬರ್ 24ರಿಂದ ನಡೆಯಲಿವೆ. ಸೂಪರ್ 12 ಗ್ರೂಪ್ ಪಂದ್ಯಗಳು ವಿಶ್ವ ರ್ಯಾಂಕಿಂಗ್‌ನ ಅಗ್ರ ಶ್ರೇಯಾಂಕಿತ ಪಾಕಿಸ್ತಾನ ವಿರುದ್ಧ ಸಿಡ್ನಿ ಕ್ರಿಕೆಟ್ ಗ್ರೌಂಡ್‌(ಎಸ್‌ಸಿಜಿ) ನಲ್ಲಿ ಆರಂಭಗೊಳ್ಳಲಿದೆ.ಪುರುಷರ ಗ್ರೂಪ್ 'ಎ' ತಂಡದಲ್ಲಿ ಪಾಕಿಸ್ತಾನ, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್, ಕ್ವಾಲಿಫೈಯರ್ 1 ತಂಡಗಳಿವೆ.

ಅಭಿಮಾನಿಗಳು ಬರುತ್ತಾರೆ

ಅಭಿಮಾನಿಗಳು ಬರುತ್ತಾರೆ

'ಆಸ್ಟ್ರೇಲಿಯಾದಲ್ಲಿ ಪ್ರತಿಷ್ಠಿತ ಪಂದ್ಯವೊಂದನ್ನು ನಡೆಸುತ್ತಿದ್ದೇವೆ ಎಂದರೆ, ಈ ಅದ್ಭುತ ಪ್ರದರ್ಶನದ ಟಿಕೆಟ್ ಖರೀದಿಸಲು ವಿಶ್ವದಗಲದ ಕ್ರಿಕೆಟ್ ಅಭಿಮಾನಿಗಳು ಬರುತ್ತಾರೆ ಎಂಬ ನಂಬಿಕೆ ನಮ್ಮದು' ಎಂದು ಐಸಿಸಿ ಮುಖ್ಯ ಕಾರ್ಯ ನಿರ್ವಾಹಕ ಡೇವಿಡ್ ರಿಚರ್ಡ್ಸನ್ ಹೇಳಿದ್ದಾರೆ.ಮಹಿಳಾ ಫೈನಲ್ ಪಂದ್ಯ ಮಾರ್ಚ್ 8ಕ್ಕೆ ನಡೆದರೆ, ಪುರುಷರ ಫೈನಲ್‌ ಪಂದ್ಯ ನವೆಂಬರ್ 15ಕ್ಕೆ ನೆರವೇರಲಿದೆ.

Story first published: Tuesday, January 29, 2019, 15:46 [IST]
Other articles published on Jan 29, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X