WTC Final: ಟೀಮ್ ಇಂಡಿಯಾ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪ್ರತಿಕ್ರಿಯೆ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದ ಆರಂಭಕ್ಕೆ ಕೆಲವೇ ಗಂಟೆಗಳು ಮಾತ್ರವೇ ಬಾಕಿಯಿದೆ. ಈ ಸಂದರ್ಭದಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಟೀಮ್ ಇಂಡಿಯಾ ತಂಡದ ವಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಾಕಷ್ಟು ನಿರೀಕ್ಷೆಯನ್ನುಂಟು ಮಾಡಿರುವ ಮಹತ್ವದ ಟೂರ್ನಿಯಲ್ಲಿ ಟೀಮ್ ಇಂಡಿಯಾ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡುವ ವಿಶ್ವಾಸವನ್ನು ಬಿಸಿಸಿಐ ಅಧ್ಯಕ್ಷ ಗಂಗೂಲಿ ವ್ಯಕ್ತಪಡಿಸಿದ್ದಾರೆ.

ಮಳೆಯಿಂದ ಚಾರ್ಮಾಡಿ ಘಾಟ್ ನಲ್ಲಿ ಸೃಷ್ಟಿಯಾಗಿದೆ ಸುಂದರ ಜಲಪಾತಗಳು | Oneindia Kannada

ಟೀಮ್ ಇಂಡಿಯಾದ ಮಾಜಿ ನಾಯಕನೂ ಆಗಿರುವ ಸೌರವ್ ಗಂಗೂಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಈ ಮಹತ್ವದ ಟೂರ್ನಿಗೆ ಅತ್ಯಂತ ಸಮತೋಲಿತವಾಗಿದೆ ಎಂದಿದ್ದಾರೆ. ಟೀಮ್ ಇಂಡಿಯಾ ಆಟಗಾರರ ಕಳೆದ ಎರಡು ವರ್ಷಗಳ ಕಠಿಣ ಪರಿಶ್ರಮದ ಕಾರಣದಿಂದಾಗಿ ಈ ಉದ್ಘಾಟನಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಹಂತಕ್ಕೇರಲು ಸಾಧ್ಯವಾಗಿದೆ ಎಂದು ಗಂಗೂಲಿ ಪ್ರಶಂಸಿಸಿದ್ದಾರೆ.

WTC Final: ಟೀಮ್ ಇಂಡಿಯಾ ಕಾಂಬಿನೇಶನ್ ಸಮಸ್ಯೆಗೆ ಸುನಿಲ್ ಗವಾಸ್ಕರ್ ನೀಡಿದ ಪರಿಹಾರವಿದುWTC Final: ಟೀಮ್ ಇಂಡಿಯಾ ಕಾಂಬಿನೇಶನ್ ಸಮಸ್ಯೆಗೆ ಸುನಿಲ್ ಗವಾಸ್ಕರ್ ನೀಡಿದ ಪರಿಹಾರವಿದು

ಎಲ್ಲರಿಗೂ ದೊಡ್ಡ ಕ್ಷಣ

ಎಲ್ಲರಿಗೂ ದೊಡ್ಡ ಕ್ಷಣ

"ಇದು ನಮ್ಮೆಲ್ಲರಿಗೂ ದೊಡ್ಡ ಕ್ಷಣವಾಗಿದೆ. ತಂಡದ ಎಲ್ಲಾ ಸದಸ್ಯರಿಗೂ ನಾನು ಶುಭಹಾರೈಸುತ್ತೇನೆ. ಈ ಹಂತಕ್ಕೇರಲು ಕಳೆದ ಎರಡು ವರ್ಷಗಳಲ್ಲಿ ಕಠಿಣ ಪರಿಶ್ರಮವನ್ನು ಆಟಗಾರರು ನೀಡಿದ್ದಾರೆ. ತಮ್ಮ ಆಟದಲ್ಲಿ ಅವರು ಅತ್ಯುತ್ತಮ ಪ್ರದರ್ಶನವನ್ನು ನೀಡಲಿದ್ದಾರೆ ಎಂಬ ಭರವಸೆ ನನಗಿದೆ" ಎಂದು ಸೌರವ್ ಗಂಗೂಲಿ ತಂಡಕ್ಕೆ ಶುಭಹಾರೈಸಿದ್ದಾರೆ.

ತಂಡ ಸಮತೋಲಿತವಾಗಿದೆ

ತಂಡ ಸಮತೋಲಿತವಾಗಿದೆ

"ನಮ್ಮದು ಅತ್ಯಂತ ಸಮತೋಲಿತ ತಂಡ. ಅವರು ಅಂತಿಮ ಹಂತದವರೆಗೂ ಬ್ಯಾಟಿಂಗ್ ನಡೆಸಬಲ್ಲವರಾಗಿದ್ದಾರೆ. ಇದನ್ನು ನೀವು ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿಯೂ ನೋಡಿದ್ದೀರಿ. ಅವರ ಸಾಮರ್ಥ್ಯಕ್ಕೆ ತಕ್ಕದಾದ ಪ್ರದರ್ಶನ ನೀಡುವ ಭರವಸೆಯಿದೆ. ತಂಡದಲ್ಲಿರುವ ಆಟಗಾರರ ಗುಣಮಟ್ಟ ಅತ್ಯುತ್ತಮವಾಗಿದೆ. ಈ ಹಂತಕ್ಕೆ ಬರಲು ಅವರೆಲ್ಲಾ ಅದ್ಭುತವಾಗಿ ಪ್ರದರ್ಶನವನ್ನು ನೀಡಿರುವುದು ಕಾರಣವಾಗಿದೆ" ಎಂದು ಗಂಗೂಲಿ ಎಎನ್‌ಐಗೆ ನೀಡಿದ ಹೇಳಿಕೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಕೊಹ್ಲಿ ಸ್ಮರಣೀಯವಾಗಿಸಲಿದ್ದಾರೆ

ಕೊಹ್ಲಿ ಸ್ಮರಣೀಯವಾಗಿಸಲಿದ್ದಾರೆ

ಇನ್ನು ಇದೇ ಸಂದರ್ಭದಲ್ಲಿ ಈ ಪಂದ್ಯವನ್ನು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸ್ಮರಣೀಯವಾಗಿಸಿಕೊಳ್ಳಲಿದ್ದಾರೆ ಎಂಬ ಭರವಸೆಯನ್ನು ಸೌರವ್ ಗಂಗೂಲಿ ವ್ಯಕ್ತಪಡಿಸಿದ್ದಾರೆ. ಇನ್ನು ಟೀಮ್ ಇಂಡಿಯಾದ ಆಡುವ ಬಳಗದ ಸಂಯೋಜನೆ ವಿಚಾರವಾಗಿ ಪ್ರತಿಕ್ರಿಯಿಸಿದ ಸೌರವ್ ಗಂಗೂಲಿ ಆಡುವ ಬಳಗ ಹೇಗಿರಲಿದೆ ಎಂಬುದನ್ನು ನಾಯಕ ಹಾಗೂ ಕೋಚ್ ಪರಿಸ್ಥಿತಿಯನ್ನು ನೋಡಿಕೊಂಡು ನಿರ್ಧರಿಸಲಿದ್ದಾರೆ ಎಂದಿದ್ದಾರೆ.

ತಂಡದ ಆಯ್ಕೆ ಮ್ಯಾನೇಜ್‌ಮೆಂಟ್ ನಿರ್ಧರಿಸುತ್ತೆ

ತಂಡದ ಆಯ್ಕೆ ಮ್ಯಾನೇಜ್‌ಮೆಂಟ್ ನಿರ್ಧರಿಸುತ್ತೆ

"ಯಾವ ಕಾಂಬಿನೇಶನ್‌ನೊಂದಿಗೆ ಆಡಲಿದೆ ಎಂಬ ಬಗ್ಗೆ ನನಗೆ ತಿಳಿದಿಲ್ಲ. ಅದು ತಂಡದ ಮ್ಯಾನೇಜ್‌ಮೆಂಟ್‌ಗೆ ಬಿಟ್ಟಿರುವ ವಿಚಾರ. ನಾಳೆ ಮುಂಜಾನೆ ಪಂದ್ಯದ ಆರಂಭದ ವೇಳೆಗೆ ನಮಗೂ ಅದು ಗೊತ್ತಾಗಲಿದೆ. ಆದರೆ ನಮ್ಮ ಎಲ್ಲಾ ಬೌಲರ್‌ಗಳು ಕೂಡ ತಂಡವನ್ನು ಗೆಲ್ಲಿಸಿಕೊಡುವ ಸಾಮರ್ಥ್ಯವನ್ನು ಹೊಂದಿದವರಾಗಿದ್ದಾರೆ. ದೇಶಕ್ಕಾಗಿ ಅದ್ಭುತ ಪ್ರದರ್ಶನವನ್ನು ನೀಡಲಿದ್ದಾರೆ ಎಂಬ ಭರವಸೆಯಿದೆ" ಎಮದು ಸೌರವ್ ಗಂಗೂಲಿ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, June 17, 2021, 18:39 [IST]
Other articles published on Jun 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X