ವಿರಾಟ್ ಕೊಹ್ಲಿ, ರವಿ ಶಾಸ್ತ್ರಿ ಮಾತುಕತೆಯ ಆಡಿಯೋ ತುಣುಕು ಲೀಕ್!

Virat Kohli ಆ ವಿಡಿಯೋದಲ್ಲಿ ಹೆಸರಿಸಿದ ಆ ಬೌಲರ್ ಯಾರು | Oneindia Kannada

ಲಂಡನ್: ನ್ಯೂಜಿಲೆಂಡ್ ವಿರುದ್ಧದ ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಇಂಗ್ಲೆಂಡ್‌ಗೆ ತೆರಳಿದೆ. ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಮೊದಲ ಆವೃತ್ತಿ ಫೈನಲ್ ಪಂದ್ಯ ಮುಗಿದ ಬಳಿಕ ವಿರಾಟ್ ಕೊಹ್ಲಿ ಪಡೆ ಆತಿಥೇಯ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್‌ ಸರಣಿ ಆಡಲಿದೆ. ಜೂನ್ 18ರಿಂದ 22ರ ವರೆಗೆ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯ ನಡೆಯಲಿದೆ.

ಐಪಿಎಲ್ 2022ರ ಹರಾಜಿನಲ್ಲಿ ಚೆನ್ನೈ ಉಳಿಸಿಕೊಳ್ಳಬಹುದಾದ ಆಟಗಾರರು

ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಬಲಿಷ್ಠ ತಂಡಗಳಾದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಕದನ ಕುತೂಹಲ ಮೂಡಿಸಿದೆ. ಇದರ ಮಧ್ಯೆ ಇಂಗ್ಲೆಂಡ್‌ಗೆ ಹೊರಡುವ ಮುನ್ನ ಸಂಪ್ರದಾಯದಂತೆ ವಿರಾಟ್ ಕೊಹ್ಲಿ ಮತ್ತು ರವಿ ಶಾಸ್ತ್ರಿ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದಾರೆ. ಈ ಸುದ್ದಿಗೋಷ್ಠಿ ವೇಳೆ ಎಡವಟ್ಟಾಗಿದೆ.

ಸುದ್ದಿಗೋಷ್ಠಿ ವೇಳೆ ಎಡವಟ್ಟು

ಸುದ್ದಿಗೋಷ್ಠಿ ವೇಳೆ ಎಡವಟ್ಟು

ಬುಧವಾರ (ಜೂನ್ 3) ಭಾರತ ತಂಡ ಇಂಗ್ಲೆಂಡ್‌ಗೆ ಪ್ರಯಾಣಿಸಿತು. ಭಾರತ ಬಿಡುವುದಕ್ಕೂ ಮುನ್ನ ಮುಂಬೈಯಲ್ಲಿ ಭಾರತೀಯ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಮುಖ್ಯ ಕೋಚ್ ರವಿ ಶಾಸ್ತ್ರಿ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಸಣ್ಣ ಎಡವಟ್ಟಾಗಿತ್ತು. ಸುದ್ದಿಗೋಷ್ಠಿ ಆರಂಭವಾಗಿದ್ದು ಕೊಹ್ಲಿ, ಶಾಸ್ತ್ರಿ ಗಮನಕ್ಕೆ ಬಂದಿರಲಿಲ್ಲ. ಹೀಗಾಗಿ ಅವರು ಮಾತನಾಡುತ್ತಿದ್ದುದು ಮೈಕ್‌ನಲ್ಲಿ ರೆಕಾರ್ಡ್ ಆಗಿತ್ತು. ಅದರ ಆಡಿಯೋ ವೈರಲ್ ಆಗಿದೆ.

ಆಡಿಯೋದಲ್ಲಿ ಏನಿದೆ?

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಆಡಿಯೋ ತುಣುಕಿನಲ್ಲಿ ವಿರಾಟ್ ಕೊಹ್ಲಿ, 'hum inko round the wicket dalwayenge, Left-handers hai inpe, Lala, Siraj sabko start se hi laga denge,' ಎಂದು ಹೇಳಿದ್ದಾರೆ. ಅಂದರೆ ಇಲ್ಲಿ ಕೊಹ್ಲಿ, ಶಾಸ್ತ್ರಿ ಇಬ್ಬರೂ ಬೌಲಿಂಗ್ ತಂತ್ರದ ಬಗ್ಗೆ ಮಾತನಾಡುತ್ತಿದ್ದಾರೆ. ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ಗಳನ್ನು ಹೇಗೆ ಕಟ್ಟಿ ಹಾಕಬೇಕೆಂದು ಚರ್ಚೆ ಮಾಡುತ್ತಿರುವುದು ಕಂಡು ಬಂದಿದೆ.

ಭಾರತ ತಂಡದ ತಂತ್ರವೇನು?

ಭಾರತ ತಂಡದ ತಂತ್ರವೇನು?

ಯಾವುದೋ ಬ್ಯಾಟ್ಸ್‌ಮನ್‌ ಅನ್ನು ಉದ್ದೇಶಿಸಿ ಮಾತನಾಡಿರುವ ಕೊಹ್ಲಿ, ಆ ಬ್ಯಾಟ್ಸ್‌ಮನ್‌ಗೆ ವಿಕೆಟ್‌ನ ಸುತ್ತಲೂ ಬೌಲಿಂಗ್ ಮಾಡಿಸೋಣ. ಆ ತಂಡದಲ್ಲಿ ಎಡಗೈ ಬ್ಯಾಟ್ಸ್‌ಮನ್‌ ಕೂಡ ಇದ್ದಾರೆ. ಲಾಲ, ಸಿರಾಜ್ ಇಬ್ಬರನ್ನು ಆರಂಭದಿಂದಲೇ ಬೌಲಿಂಗ್ ಮಾಡಿಸೋಣ ಎಂದು ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ಬಳಸಿ ಬೌಲಿಂಗ್‌ ಉಪಾಯ ಹೇಗಿರಬೇಕು ಅಂತ ಕೊಹ್ಲಿ-ಶಾಸ್ತ್ರಿ ಮಾತನಾಡಿಕೊಂಡಿರುವುದು ಆಡಿಯೋದಲ್ಲಿ ದಾಖಲಾಗಿದೆ.

For Quick Alerts
ALLOW NOTIFICATIONS
For Daily Alerts
Story first published: Friday, June 4, 2021, 14:16 [IST]
Other articles published on Jun 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X