ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

WTC Final: ನಾಲ್ಕನೇ ದಿನದಾಟದಲ್ಲಿ ಮೇಲುಗೈ ಸಾಧಿಸುವ ವಿಶ್ವಾಸವಿದೆ: ಶುಬ್ಮನ್ ಗಿಲ್‌

WTC Final: Shubman Gill believes India would have slight advantage on Day 4

ಟೀಮ್ ಇಂಡಿಯಾ ಆರಂಭಿಕ ಆಟಗಾರ ಶುಬ್ಮನ್ ಗಿಲ್ ನಾಲ್ಕನೇ ದಿನದಾಟದಲ್ಲಿ ನ್ಯೂಜಿಲೆಂಡ್ ವಿರುದ್ಧ ಮೇಲುಗೈ ಸಾಧಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಮೂರನೇ ದಿನದ ಅಂತ್ಯಕ್ಕೆ ಮುನ್ನ ಆರಂಭಿಕರಿಬ್ಬರನ್ನೂ ಬಲಿ ಪಡೆಯುವ ಮೂಲಕ ಭಾರತೀಯ ಬೌಲರ್‌ಗಳೂ ಯಶಸ್ಸು ಕಂಡರು. ಇದನ್ನು ಮುಂದುವರಿಸುವ ವಿಶ್ವಾಸ ಟೀಮ್ ಇಂಡಿಯಾ ಪಾಳಯದಲ್ಲಿದೆ.

ಮೂರನೇ ದಿನದಂತ್ಯದಲ್ಲಿ ಮತ್ತಷ್ಟು ಓವರ್‌ಗಳ ಆಟ ಆಡಲು ಸಾಧ್ಯವಾಗಿದ್ದರೆ ನ್ಯೂಜಿಲೆಂಡ್ ಬ್ಯಾಟಿಂಗ್ ಕ್ರಮಾಂಕದ ಮೇಲೆ ಮತ್ತಷ್ಟು ಹಾನಿ ಮಾಡಲು ಸಾಧ್ಯವಾಗುತ್ತಿತ್ತು ಎಂಬ ಅಭಿಪ್ರಾಯವನ್ನು ಶುಬ್ಮನ್ ಗಿಲ್ ವ್ಯಕ್ತಪಡಿಸಿದ್ದಾರೆ. "ಕಾನ್ವೆ ಅವರ ವಿಕೆಟ್ ನಮ್ಮ ಪಾಲಿಗೆ ಅತ್ಯಂತ ಮಹತ್ವದ್ದಾಗಿತ್ತು. ಮತ್ತಷ್ಟು ಓವರ್‌ಗಳ ಕಾಲ ನಾವು ಬೌಲಿಂಗ್ ಮಾಡಲು ಸಾಧ್ಯವಾಗಿದ್ದರೆ ರಾಸ್ ಟೇಲರ್ ವಿಕೆಟ್ ಪಡೆಯುವ ಅವಕಾಶವಿರುತ್ತಿತ್ತು. ಹಾಗೂ ಮತ್ತಷ್ಟು ವಿಕೆಟ್‌ಗಳನ್ನು ಕೆಡವುವ ಅವಕಾಶ ನಮಗೆ ದೊರೆಯುತ್ತಿತ್ತು" ಎಂದು ಗಿಲ್ ಹೇಳಿದ್ದಾರೆ.

WTC Final: ನ್ಯೂಜಿಲೆಂಡ್ ಪರ 8 ದಶಕಗಳ ಹಿಂದಿನ ದಾಖಲೆ ಮುರಿದ ಕೈಲ್ ಜ್ಯಾಮಿಸನ್WTC Final: ನ್ಯೂಜಿಲೆಂಡ್ ಪರ 8 ದಶಕಗಳ ಹಿಂದಿನ ದಾಖಲೆ ಮುರಿದ ಕೈಲ್ ಜ್ಯಾಮಿಸನ್

"ಕ್ರೀಸ್‌ಗೆ ಇಬ್ಬರು ಬ್ಯಾಟ್ಸ್‌ಮನ್‌ಗಳು ಕೂಡ ಹೊಸಬರಾಗಿದ್ದಾರೆ. ಹಾಗಾಗಿ ನಾಲ್ಕನೇ ದಿನದಲ್ಲಿ ನಾವು ಹೆಚ್ಚಿನ ಅವಕಾಶವನ್ನು ಹೊಂದಿದ್ದೇವೆ" ಎಂದು ಶುಬ್ಮನ್ ಗುಲ್ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ವೇಳೆ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿ 250ಕ್ಕೂ ಅಧಿಕ ರನ್ ಗಳಿಸುವ ವಿಶ್ವಾಸವಿದೆ ಎಂದಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಸತತವಾಗಿ ಐದು ಇನ್ನಿಂಗ್ಸ್‌ಗಳಲ್ಲಿ 250ಕ್ಕಿಂತ ಕಡಿಮೆ ರನ್‌ಗಳಿಗೆ ಭಾರತ ಆಲೌಟ್ ಆಗಿದೆ. ಈ ವಿಚಾರವಾಗಿ ಗಿಲ್ ಪ್ರತಿಕ್ರಿಯಿಸಿದರು. "2020ರಲ್ಲಿ ನ್ಯೂಜಿಲೆಂಡ್‌ನಲ್ಲಿ ಟೆಸ್ಟ್ ಆಡಿದ್ದಾಗ ನಾವು ಹೆಚ್ಚಿನ ಸಮಯಾವಕಾಶವನ್ನು ದೊರೆತಿರಲಿಲ್ಲ ಹಾಗೂ ನಾವು ಟಿ20 ಹಾಗೂ ಏಕದಿನ ಪಂದ್ಯಗಳತ್ತ ಹೆಚ್ಚಿನ ಚಿತ್ತ ಹರಿಸಿದ್ದೆವು. ಈ ಟೆಸ್ಟ್ ಪಂದ್ಯದಲ್ಲಿ ನಾವು ಉತ್ತಮ ಪ್ರದರ್ಶನ ನೀಡುತ್ತಿದ್ದೆವು. ಆದರೆ ಕೆಲ ವಿಕೆಟ್‌ಗಳನ್ನು ಮೂರನೇ ದಿನದ ಆರಂಭದಲ್ಲಿಯೇ ಕಳೆದುಕೊಂಡೆವು. ಮುಂದಿನ ಇನ್ನಿಂಗ್ಸ್‌ನಲ್ಲಿ ನಾವು 250ರ ಗಡಿ ದಾಟಲಿದ್ದೇವೆ" ಎಂದಿದ್ದಾರೆ.

Story first published: Monday, June 21, 2021, 13:54 [IST]
Other articles published on Jun 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X