WTC Final: ಟಾಸ್‌ಗೆ ಮುನ್ನ ತಂಡವನ್ನು ಬದಲಾಯಿಸಿ: ಸುನಿಲ್ ಗವಾಸ್ಕರ್ ನೀಡಿದ ಈ ಸಲಹೆಗೆ ಕಾರಣವೇನು?

ಟಾಸ್ ಗು ಮುನ್ನ ತಂಡವನ್ನು ಚೇಂಜ್ ಮಾಡಿ ಎಂದ Sunil Gavaskar | Oneindia Kannada

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದ ಮೊದಲ ದಿನದಾಟ ಮಳೆಗೆ ಆಹುತಿಯಾಗಿದೆ. ಶುಕ್ರವಾರ ಸೌಥಾಂಪ್ಟನ್‌ನಲ್ಲಿ ಭಾರೀ ಪ್ರಮಾಣದ ಮಳೆಯಾದ ಕಾರಣ ಅಂಗಳದಲ್ಲಿ ಸಾಕಷ್ಟು ನೀರು ನಿಂತಿತ್ತು. ಹೀಗಾಗಿ ಪಂದ್ಯವನ್ನು ಮೊದಲ ದಿನದಾಟವನ್ನು ರದ್ದುಗೊಳಿಸುವ ನಿರ್ಧಾರಕ್ಕೆ ಬರಲಾಗಿದೆ. ಈ ಮಧ್ಯೆ ಟೀಮ್ ಇಂಡಿಯಾಗೆ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಪ್ರಮುಖ ಸಲಹೆಯೊಂದನ್ನು ನೀಡಿದ್ದಾರೆ.

ಪಂದ್ಯದ ಆರಂಭಕ್ಕೂ ಮುನ್ನ ಭಾರೀ ಮಳೆಯಾಗಿರುವ ಕಾರಣ ಟೀಮ್ ಇಂಡಿಯಾ ತನ್ನ ಆಡುವ ಬಳಗದಲ್ಲಿ ಬದಲಾವಣೆ ಮಾಡುವಂತೆ ಸುನಿಲ್ ಗವಾಸ್ಕರ್ ಸಲಹೆಯನ್ನು ನೀಡಿದ್ದಾರೆ. ಮಳೆ ಬಂದ ಕಾರಣ ಮೈದಾನ ಸಂಪೂರ್ಣವಾಗಿ ಒದ್ದೆಯಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ತಂಡದಲ್ಲಿ ಬದಲಾವಣೆಗೆ ಸುನಿಲ್ ಗವಾಸ್ಕರ್ ಸಲಹೆ ನೀಡಿದ್ದಾರೆ.

WTC Final: ಒಂದೂ ಎಸೆತ ಕಾಣದೆ ಐತಿಹಾಸಿಕ ಪಂದ್ಯದ ಮೊದಲ ದಿನದಾಟ ಮಳೆಗೆ ಆಹುತಿWTC Final: ಒಂದೂ ಎಸೆತ ಕಾಣದೆ ಐತಿಹಾಸಿಕ ಪಂದ್ಯದ ಮೊದಲ ದಿನದಾಟ ಮಳೆಗೆ ಆಹುತಿ

ಗುರುವಾರ ಸಂಜೆ ಟೀಮ್ ಇಂಡಿಯಾ ತನ್ನ ಆಡುವ ಬಳಗವನ್ನು ಘೋಷಿಸಿತು. ಇದರಲ್ಲಿ ಐವರು ಬೌಲರ್‌ಗಳೊಂದಿಗೆ ಟೀಮ್ ಇಂಡಿಯಾ ಕಣಕ್ಕಿಳಿಯುತ್ತಿರುವುದು ಸ್ಪಷ್ಟವಾಗಿತ್ತು. ಮೂವರು ವೇಗಿಗಳು ಹಾಗೂ ಇಬ್ಬರು ಸ್ಪಿನ್ ಆಲ್‌ರೌಂಡರ್‌ಗಳೊಂದಿಗೆ ಟೀಮ್ ಇಂಡಿಯಾ ಆಡಲು ಸಜ್ಜಾಗಿತ್ತು. ರವೀಂದ್ರ ಜಡೇಜಾ ಹಾಗೂ ಆರ್ ಅಶ್ವಿನ್ ಸ್ಪಿನ್ನರ್‌ಗಳಾಗಿ ಜವಾಬ್ಧಾರಿ ವಹಿಸುವ ಜೊತೆಗೆ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕೂಡ ಬೆಂಬಲವಾಗಿ ನಿಲ್ಲಲ್ಲಿದ್ದಾರೆ ಎಂಬ ದೃಷ್ಟಿಕೋನದಿಂದ ತಂಡವನ್ನು ಆಯ್ಕೆ ಮಾಡಲಾಗಿದೆ.

ಕೊನೆಯ ಕ್ಷಣದ ಬದಲಾವಣೆ ಬಯಸಿದ ಗವಾಸ್ಕರ್

ಕೊನೆಯ ಕ್ಷಣದ ಬದಲಾವಣೆ ಬಯಸಿದ ಗವಾಸ್ಕರ್

ಆದರೆ ಈ ಪಂದ್ಯದ ಆರಂಭಕ್ಕೂ ಮುನ್ನ ಭಾರೀ ಮಳೆಯಾಗಿರುವ ಕಾರಣದಿಂದಾಗಿ ಟೀಮ್ ಇಂಡಿಯಾ ಇಬ್ಬರು ಸ್ಪಿನ್ ಬೌಲರ್‌ಗಳೊಂದಿಗೆ ಕಣಕ್ಕಿಳಿಯುವ ತನ್ನ ನಿರ್ಧಾರವನ್ನು ಬದಲಾವಣೆ ಮಾಡಿಕೊಳ್ಳಬೇಕೆಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಇಬ್ಬರು ಸ್ಪಿನ್ನರ್‌ಗಳಲ್ಲಿ ಒಬ್ಬರ ಸ್ಥಾನದ ಬದಲಿಗೆ ಓರ್ವ ಬ್ಯಾಟ್ಸ್‌ಮನ್‌ನನ್ನು ಆಡುವ ಬಳಗದಲ್ಲಿ ಸೇರಿಸಿಕೊಳ್ಳುವುದು ಸೂಕ್ತ ಎಂಬ ಅಭಿಪ್ರಾಯವನ್ನು ಗವಾಸ್ಕರ್ ವ್ಯಕ್ತಪಡಿಸಿದ್ದಾರೆ.

"ಟಾಸ್ ನಡೆಯುವವರೆಗೆ ಬದಲಾವಣೆಗೆ ಅವಕಾಶವಿದೆ"

"ಅವರು ತಮ್ಮ ತಂಡವನ್ನು ನಿನ್ನೆ ಘೋಷಣೆ ಮಾಡಿರಬಹುದು. ಆದರೆ ನಾಯಕರಿಬ್ಬರು ಟಾಸ್ ಸಂದರ್ಭದಲ್ಲಿ ಆಡುವ ಬಳಗದ ಪಟ್ಟಿಯನ್ನು ಹಂಚಿಕೊಳ್ಳುವವರೆಗೆ ಯಾವುದು ಕೂಡ ಅಂತಿಮವಲ್ಲ. ಹೀಗಾಗಿ ಕಡೇಯ ಕ್ಷಣದಲ್ಲಿಯೂ ನೀವು ತಂಡವನ್ನು ಬದಲಾವಣೆ ಮಾಡುವ ಅವಕಾಶವಿರುತ್ತದೆ" ಎಂದು ಗವಾಸ್ಕರ್ ಹೇಳಿದ್ದಾರೆ.

ಕುತೂಹಲಕಾರಿ ಸಂಗತಿ ಬಹಿರಂಗಪಡಿಸಿದ ಗವಾಸ್ಕರ್

ಕುತೂಹಲಕಾರಿ ಸಂಗತಿ ಬಹಿರಂಗಪಡಿಸಿದ ಗವಾಸ್ಕರ್

ಇನ್ನು ಇದೇ ಸಂದರ್ಭದಲ್ಲಿ ಸುನಿಲ್ ಗವಾಸ್ಕರ್ ಕುತೂಹಲಕಾರಿ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ. "ನಾಯಕನಾಗಿದ್ದ ಸಂದರ್ಭದಲ್ಲಿ ನಾನು ಕೂಡ ಸ್ಪಿನ್ನರ್‌ನನ್ನು ಆಡಿಸಬೇಕೋ ಅಥವಾ ಹೆಚ್ಚುವರಿ ಬ್ಯಾಟ್ಸ್‌ಮನ್‌ನನ್ನು ಕಣಕ್ಕಿಳಿಸಬೇಕೋ ಎಂದು ಗೊಂದಲಗೊಳಗಾಗುತ್ತಿದ್ದೆ. ಆಗ ನಾನು ಟಾಸ್‌ಗೆ ಕೆಲ ಕ್ಷಣಗಳ ಮುನ್ನ ಎದುರಾಳಿಯ ಆಡುವ ಬಳಗವನ್ನು ನೋಡಿಕೊಂಡು ನನ್ನ ಕಾಗದದಲ್ಲಿ ತಿದ್ದಿ ಬದಲಾವಣೆ ಮಾಡಿಕೊಂಡು ನೀಡುತ್ತಿದ್ದೆ. ಆಡುವ ಬಳಗವನ್ನು ಟಾಸ್‌ಗಿಂತ ಮುನ್ನ ಯಾವ ಕ್ಷಣದಲ್ಲಿಯೂ ನೀವು ಬದಲಾವಣೆ ಮಾಡಿಕೊಳ್ಳಬಹುದು" ಎಂದಿದ್ದಾರೆ ಸುನಿಲ್ ಗವಾಸ್ಕರ್.

ನ್ಯೂಜಿಲೆಂಡ್ ಬೌಲರ್‌ಗಳಿಗೆ ಹೆಚ್ಚು ಅನುಕೂಲ

ನ್ಯೂಜಿಲೆಂಡ್ ಬೌಲರ್‌ಗಳಿಗೆ ಹೆಚ್ಚು ಅನುಕೂಲ

"ನನಗನಿಸುತ್ತದೆ ಹವಾಮಾನದ ಕಾರಣದಿಂದಾಗಿ ಮತ್ತೋರ್ವ ಬ್ಯಾಟ್ಸ್‌ಮನ್‌ನನ್ನು ಕಣಕ್ಕಿಳಿಸುವ ಬಗ್ಗೆ ಯೋಚಿಸಬಹುದು ಎನಿಸುತ್ತದೆ. ಯಾಕೆಂದರೆ ಈ ವಾತಾವರಣ ನ್ಯೂಜಿಲೆಂಡ್ ತಂಡದ ಬೌಲರ್‌ಗಳಿಗೆ ಹೆಚ್ಚು ಸೂಕ್ತವಾಗಿದೆ. ಹೀಗಾಗಿ ಆರನೇ ಕ್ರಮಾಂಕದಲ್ಲಿ ಇಳಿಯುವ ರಿಷಭ್ ಪಂತ್‌ ಏಳನೇ ಕ್ರಮಾಂಕಕ್ಕೆ ಇಳಿಸಿ ಹೆಚ್ಚುವರಿ ಬ್ಯಾಟ್ಸ್‌ಮನ್ ಇಳಿಯುವುದು ಸೂಕ್ತ. ಈ ಹವಾಮಾನವನ್ನು ನೋಡುತ್ತಿದ್ದರೆ ಓರ್ವ ಸ್ಪಿನ್ನರ್‌ನನ್ನು ಕೈಬಿಡಬಹುದು" ಎಂದು ಗವಾಸ್ಕರ್ ಪ್ರತಿಕ್ರಿಯಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Friday, June 18, 2021, 21:42 [IST]
Other articles published on Jun 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X