ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ ಸುರೇಶ್ ರೈನಾ; ಗೌರವ ಸಲ್ಲಿಸಿದ ಶುಭ್‌ಮನ್ ಗಿಲ್

Your Contribution To Cricket is Invaluable; Team India Player Shubman Gill Paid Tribute To Suresh Raina

ಎಡಗೈ ಸ್ಫೋಟಕ ಬ್ಯಾಟರ್ ಸುರೇಶ್ ರೈನಾ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ಭಾರತದ ಯುವ ಆರಂಭಿಕ ಆಟಗಾರ ಶುಭ್‌ಮನ್ ಗಿಲ್ ಮಂಗಳವಾರ ಸುರೇಶ್ ರೈನಾ ಅವರಿಗೆ ಗೌರವ ಸಲ್ಲಿಸಿದರು.

ಸುರೇಶ್ ರೈನಾ ಅವರು ಭಾರತದ ದೇಶೀಯ ಕ್ರಿಕೆಟ್ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್‌ನ ಭಾಗವಾಗುವುದಿಲ್ಲ ಎಂದು ಹೇಳುವ ಮೂಲಕ ವರ್ಣರಂಜಿತ ಕ್ರಿಕೆಟ್ ವೃತ್ತಿಜೀವನಕ್ಕೆ ತೆರೆ ಎಳೆದರು.

ICC T20 Ranking: ಅಗ್ರ ಸ್ಥಾನಕ್ಕಾಗಿ ಇಬ್ಬರು ಪಾಕ್, ಒಬ್ಬ ಭಾರತೀಯನಿಂದ ನಿಕಟ ಪೈಪೋಟಿ!ICC T20 Ranking: ಅಗ್ರ ಸ್ಥಾನಕ್ಕಾಗಿ ಇಬ್ಬರು ಪಾಕ್, ಒಬ್ಬ ಭಾರತೀಯನಿಂದ ನಿಕಟ ಪೈಪೋಟಿ!

ಆಗಸ್ಟ್ 15, 2020ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಸುರೇಶ್ ರೈನಾ ಅವರಿಗೆ ಅಭಿನಂದನೆಗಳು ಹರಿದುಬರುತ್ತಿವೆ. ಸುರೇಶ್ ರೈನಾ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುವುದನ್ನು ಮುಂದುವರೆಸಿದ್ದರು, ಆದರೆ 2018ರಿಂದ ಯಾವುದೇ ಪ್ರಥಮ ದರ್ಜೆ ಕ್ರಿಕೆಟ್‌ನ ಯಾವುದೇ ಲಿಸ್ಟ್-ಎ ಆಡದ ರೈನಾ, ಐಪಿಎಲ್ 2022ರ ಹರಾಜಿನಲ್ಲಿ ಖರೀದಿಯಾಗಲಿಲ್ಲ.

ದೇಶ ಪ್ರತಿನಿಧಿಸುವುದು ಸಂಪೂರ್ಣ ಗೌರವದ ವಿಷಯವಾಗಿದೆ

"ನನ್ನ ದೇಶ ಮತ್ತು ರಾಜ್ಯ ಉತ್ತರಪ್ರದೇಶವನ್ನು ಪ್ರತಿನಿಧಿಸುವುದು ಸಂಪೂರ್ಣ ಗೌರವದ ವಿಷಯವಾಗಿದೆ. ನಾನು ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಿಂದ ನಿವೃತ್ತಿ ಘೋಷಿಸಲು ಬಯಸುತ್ತೇನೆ," ಎಂದು ಸುರೇಶ್ ರೈನಾ ಮಂಗಳವಾರ ಸಾಮಾಜಿಕ ಮಾಧ್ಯಮ ಟ್ವಿಟ್ಟರ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಸುರೇಶ್ ರೈನಾ ಅವರ ಅತ್ಯುನ್ನತ ಮಟ್ಟದ ಪ್ರದರ್ಶನಕ್ಕಾಗಿ ಆಗಾಗ್ಗೆ ಶ್ಲಾಘಿಸಿದ ಶುಭ್‌ಮನ್ ಗಿಲ್, ಕೂ ಆಪ್‌ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. "ಕ್ರಿಕೆಟ್ ಆಟಕ್ಕೆ ನಿಮ್ಮ ಕೊಡುಗೆ ಅಮೂಲ್ಯವಾಗಿದೆ. ಸುರೇಶ್ ರೈನಾ ಭಾಯ್‌ ನಿಮ್ಮ ಎರಡನೇ ಇನ್ನಿಂಗ್ಸ್‌ಗೆ ಶುಭವಾಗಲಿ," ಎಂದಿದ್ದಾರೆ.

300ಕ್ಕೂ ಹೆಚ್ಚು ಪಂದ್ಯಗಳಲ್ಲಿ ಭಾರತ ಪ್ರತಿನಿಧಿಸಿದ ರೈನಾ

300ಕ್ಕೂ ಹೆಚ್ಚು ಪಂದ್ಯಗಳಲ್ಲಿ ಭಾರತ ಪ್ರತಿನಿಧಿಸಿದ ರೈನಾ

ಸುರೇಶ್ ರೈನಾ 13 ವರ್ಷಗಳ ವೃತ್ತಿಜೀವನದಲ್ಲಿ 300ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಸ್ಟೈಲಿಶ್ ಬ್ಯಾಟರ್ 2005ರಲ್ಲಿ ಶ್ರೀಲಂಕಾ ವಿರುದ್ಧ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದ್ದರು. ಅವರು 226 ಏಕದಿನ ಪಂದ್ಯಗಳಲ್ಲಿ 5615 ರನ್ ಗಳಿಸಿದರು.

ಮಿಸ್ಟರ್ ಐಪಿಎಲ್' ಸುರೇಶ್ ರೈನಾ ಐಪಿಎಲ್‌ನಲ್ಲಿ 5,000ಕ್ಕೂ ಹೆಚ್ಚು ರನ್‌ಗಳನ್ನು 4 ಟ್ರೋಫಿಗಳೊಂದಿಗೆ ಪೂರ್ಣಗೊಳಿಸಿದರು. ಇವೆಲ್ಲವೂ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕಾಗಿ ಬಂದವು. ಸುರೇಶ್ ರೈನಾ 2008ರಿಂದ 2019ರವರೆಗೆ ಪ್ರತಿ ಐಪಿಎಲ್‌ನಲ್ಲಿ ಕನಿಷ್ಠ 350 ರನ್ ಗಳಿಸಿದರು. ಅವರು ವೈಯಕ್ತಿಕ ಕಾರಣಗಳಿಂದ ಐಪಿಎಲ್ 2022ರಿಂದ ಹಿಂದೆ ಸರಿದಿದ್ದರು, ಆದರೆ ಅವರು 2021ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನೊಂದಿಗೆ ಪ್ರಶಸ್ತಿ ವಿಜೇತ ಅಭಿಯಾನದ ಭಾಗವಾಗಿ ಮರಳಿದರು.

ಇಂಡಿಯಾ ಲೆಜೆಂಡ್ಸ್‌ಗಾಗಿ ಆಡಲು ಸಿದ್ಧರಾದ ಸುರೇಶ್ ರೈನಾ

ಇಂಡಿಯಾ ಲೆಜೆಂಡ್ಸ್‌ಗಾಗಿ ಆಡಲು ಸಿದ್ಧರಾದ ಸುರೇಶ್ ರೈನಾ

ಸುರೇಶ್ ರೈನಾ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್‌ನ ಎರಡನೇ ಸೀಸನ್‌ನಲ್ಲಿ ಇಂಡಿಯಾ ಲೆಜೆಂಡ್ಸ್‌ಗಾಗಿ ಆಡಲು ಸಿದ್ಧರಾಗಿದ್ದಾರೆ.

13 ವರ್ಷಗಳ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಸುರೇಶ್ ರೈನಾ 18 ಟೆಸ್ಟ್‌ಗಳು, 226 ಏಕದಿನ ಪಂದ್ಯಗಳು ಮತ್ತು 78 ಟಿ20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

Virat Kohli ಹೇಳಿಕೆ ಬಗ್ಗೆ BCCI ಪ್ರತಿಕ್ರಿಯೆ | *Cricket | OneIndia Kannada
205 ಐಪಿಎಲ್ ಪಂದ್ಯಗಳಲ್ಲಿ 39 ಅರ್ಧ ಶತಕ

205 ಐಪಿಎಲ್ ಪಂದ್ಯಗಳಲ್ಲಿ 39 ಅರ್ಧ ಶತಕ

ಸುರೇಶ್ ರೈನಾ ಭಾರತ ಪರ 226 ಏಕದಿನ ಪಂದ್ಯಗಳಿಂದ 5615 ಮತ್ತು 78 ಟಿ20 ಪಂದ್ಯಗಳಿಂದ 1605 ರನ್ ಗಳಿಸಿದ್ದಾರೆ. ಟೆಸ್ಟ್‌ನಲ್ಲಿ ಚೊಚ್ಚಲ ಶತಕವನ್ನು ಗಳಿಸಿದ ಸುರೇಶ್ ರೈನಾ, ಕ್ರಿಕೆಟ್‌ನ ಎಲ್ಲಾ ಮೂರು ಸ್ವರೂಪಗಳಲ್ಲಿ ಶತಕಗಳನ್ನು ಗಳಿಸಿದ ಮೊದಲ ಭಾರತೀಯ ಮತ್ತು ಭಾರತದ ಹೊರಗೆ ಅವರ ಶತಕಗಳನ್ನು ಗಳಿಸಿದವರಾಗಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಆಡುತ್ತಿರುವಾಗ ಸುರೇಶ್ ರೈನಾ 205 ಐಪಿಎಲ್ ಪಂದ್ಯಗಳಲ್ಲಿ 39 ಅರ್ಧ ಶತಕಗಳು ಮತ್ತು 136.76 ಸ್ಟ್ರೈಕ್ ರೇಟ್‌ನಲ್ಲಿ ಒಂದು ಶತಕದೊಂದಿಗೆ 5528 ರನ್ ಗಳಿಸಿದ್ದಾರೆ.

Story first published: Tuesday, September 6, 2022, 18:29 [IST]
Other articles published on Sep 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X