ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಯೋಯೋ ಟೆಸ್ಟ್ ಯಾಕೆ ಮಹತ್ವದ್ದೆಂಬುದನ್ನು ಬಿಚ್ಚಿಟ್ಟ ರವಿ ಶಾಸ್ತ್ರಿ

YoYo fitness Test is here to stay: Ravi Shastri

ನವದೆಹಲಿ, ಜೂ. 22: ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದುಕೊಳ್ಳಬೇಕಾದರೆ ಯೋಯೋ ಟೆಸ್ಟ್ ಒಂದು ರೀತಿಯಲ್ಲಿ ಮಾನದಂಡವೇ ಎಂದು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ. ರಾಷ್ಟ್ರೀಯ ಕ್ರಿಕೆಟ್ ತಂಡ ನಿರ್ವಹಣಾ ನಮಿತಿ ವಿಧಿಸುವ ಮಾನದಂಡದ ಅನೇಕ ವಿಚಾರಗಳು ಯೋಯೋ ಟೆಸ್ಟನ್ನು ಸುತ್ತುವರೆದಿವೆ ಎಂದು ಅವರು ತಿಳಿಸಿದ್ದಾರೆ.

ಇಂಗ್ಲೆಂಡ್ ಪ್ರವಾಸಕ್ಕೆ ನಾನು ಶೇ 100 ಫಿಟ್ ಎಂದರು ವಿರಾಟ್ ಕೊಹ್ಲಿಇಂಗ್ಲೆಂಡ್ ಪ್ರವಾಸಕ್ಕೆ ನಾನು ಶೇ 100 ಫಿಟ್ ಎಂದರು ವಿರಾಟ್ ಕೊಹ್ಲಿ

ಆಟಗಾರರು ಇತ್ತೀಚೆಗೆ ಯೋಯೋ ಫಿಟ್ನೆಟ್ ಟೆಸ್ಟ್ ನಲ್ಲಿ ವಿಫಲರಾಗಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗದ ನಿದರ್ಶನಕ್ಕೆ ಸಂಬಂಧಿಸಿ ಮಾತನಾಡುತ್ತ ಶಾಸ್ತ್ರಿ, ಈ ವಿದ್ಯಾಮಾನವು ಫಿಟ್ನೆಟ್ ಪರೀಕ್ಷೆ ಎಷ್ಟು ಮಹತ್ವದ್ದು ಎಂಬುದನ್ನು ಬಿಸಿಸಿಐಗೆ ಸಾಬೀತುಪಡಿಸಿದೆ ಎಂದು ನುಡಿದರು.

ಇಂಗ್ಲೆಂಡ್ ನತ್ತ ಭಾರತ ತಂಡ ಎರಡು ತಿಂಗಳ ದೀರ್ಘ ಪ್ರವಾಸ ಹೊರಡಲಿರುವ ಒಂದು ದಿನ ಮುಂಚಿತವಾಗಿ ಶುಕ್ರವಾರ ಮಾತನಾಡಿದ ಶಾಸ್ತ್ರಿ ಫಿಟ್ನೆಸ್ ಟೆಸ್ಟನ್ನು ಬಲವಾಗಿ ಸಮರ್ಥಿಸಿಕೊಂಡರು. ಭಾರತ ಕ್ರಿಕೆಟ್ ತಂಡದ ವಿಚಾರಕ್ಕೆ ಬಂದರೆ ಯೋಯೋ ಟೆಸ್ಟ್ ರಾಜಿಯ ವಿಚಾರವಲ್ಲ. ಅಭ್ಯಾಸ, ಫಿಟ್ನೆಸ್ ಇಲ್ಲಿ ಬಹುಮುಖ್ಯ ಎಂದವರು ತಿಳಿಸಿದರು.

'ನನಗನ್ನಿಸಿದ ಮಟ್ಟಿಗೆ ಯೋಯೋ ಟೆಸ್ಟ್ ಅಂದರೆ ಅದು ಸಾಮರ್ಥ್ಯ ಮತ್ತು ಫಿಟ್ನೆಸ್ ಎರಡರ ಸಂಯೋಜನೆ. ನೀವು ಫಿಟ್ಟಾಗಿದ್ದರೆ ನಿಮ್ಮ ಸಾಮರ್ಥವನ್ನು ಪ್ರದರ್ಶಿಸಬಲ್ಲಿರಿ. ಯೋಯೋ ಟೆಸ್ಟ್ ರೂಪುಗೊಂಡಿದ್ದು, ನಡೆಸುತ್ತಿರುವುದೆಲ್ಲ ಇದೇ ಅಂಶಗಳನ್ನು ಅವಲಂಭಿಸಿ. ಇದೇ ಕಾರಣಕ್ಕೆ ಯೋಯೋ ಟೆಸ್ಟ ಟೆಸ್ಟ್ ಇಷ್ಟು ಮಹತ್ವದ್ದಾಗಿದೆ' ಎಂದು ರವಿ ಹೇಳಿದರು.

ಭಾರತೀಯ ಕ್ರಿಕೆಟ್ ತಂಡದ ನಿರ್ವಹಣಾ ಸಮಿತಿ ನಡೆಸುವ ಯೋಯೋ ಫಿಟ್ನೆಸ್ ಟೆಸ್ಟ್ ನಲ್ಲಿ ಅರ್ಹತೆ ಗಿಟ್ಟಿಸಿಕೊಳ್ಳಲು ಆಟಗಾರರು ಕನಿಷ್ಟ 16.1 ಅಂಕಗಳನ್ನು ಗಳಿಸಬೇಕು. ಇಂಗ್ಲೆಂಡ್, ನ್ಯೂಜಿಲ್ಯಾಂಡ್ ನಂತ ದೇಶಗಳಿಗೆ ಹೋಲಿಸದರೆ ಇದು ಸಣ್ಣ ಅಂಕ. ಇಂಗ್ಲೆಂಡ್, ನ್ಯೂಜಿಲ್ಯಾಂಡ್ ನಲ್ಲಿ ಆಟಗಾರರು 19 ಅಂಕಗಳನ್ನು ಗಳಿಸಿದರಷ್ಟೇ ಅವರು ಟೆಸ್ಟ್ ಪಾಸ್ ಆದಂತೆ.

ಮಾಹಿತಿಯ ಪ್ರಕಾರ ಬಿಸಿಸಿಐ ಯೋಯೋ ಟೆಸ್ಟ್ ಅರ್ಹತೆ ಅಂಕವನ್ನು 16.1 ರಿಂದ 16.3ಕ್ಕೆ ಏರಿಸಲು ಬಯಸಿದೆ. ರವಿ ಶಾಸ್ತ್ರಿಯವರೇ ಇಂಥದ್ದೊಂದು ಪ್ರಸ್ತಾಪ ಮುಂದಿಟ್ಟಿದ್ದಾರೆ ಎಂದು ಕ್ರೀಡಾವಲಯದಲ್ಲಿ ಮಾತುಗಳು ಕೇಳಿಬರುತ್ತಿವೆ.

Story first published: Friday, June 22, 2018, 19:21 [IST]
Other articles published on Jun 22, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X