ಯುವರಾಜ್ ಕಡೆಗಣಿಸಿದ ಬಿಸಿಸಿಐಗೆ ಛೀಮಾರಿ, ಟ್ವೀಟ್ಸ್

Posted By:

ಬೆಂಗಳೂರು, ಸೆ. 10: ದುಲೀಪ್ ಟ್ರೋಫಿಯ ಮೂರು ತಂಡಗಳ ಪೈಕಿ ಒಂದು ತಂಡಕ್ಕೂ ಯುವರಾಜ್ ರನ್ನು ಆಯ್ಕೆ ಮಾಡದೆ ಬಿಸಿಸಿಐ ಆಯ್ಕೆದಾರರು ಕಡೆಗಣಿಸಿದ್ದು ಗೊತ್ತಿರಬಹುದು. ಭಾನುವಾರದಂದು ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯಗಳಿಗೆ ತಂಡವನ್ನು ಪ್ರಕಟಿಸಿದ್ದು, ಯುವರಾಜ್ ರನ್ನು ಮತ್ತೊಮ್ಮೆ ಕಡೆಗಣಿಸಿರುವುದಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕಪಡಿಸಿದ್ದಾರೆ.

ಸೆಪ್ಟೆಂಬರ್ 07 ರಿಂದ 29ರ ವರೆಗೆ ಕಾನ್ಪುರ ಹಾಗೂ ಲಕ್ನೋದಲ್ಲಿ ಪಂದ್ಯಗಳು ನಡೆಯಲಿವೆ. ಇದಲ್ಲದೆ, ಆಸ್ಟ್ರೇಲಿಯಾ ವಿರುದ್ಧ ಆಡಲಿರುವ ಅಧ್ಯಕ್ಷರ ಮಂಡಳಿ ಎಲೆವನ್ ತಂಡಕ್ಕೂ ಯುವರಾಜ್ ರನ್ನು ಪರಿಗಣಿಸಿಲ್ಲ.

ಶ್ರೀಲಂಕಾ ವಿರುದ್ಧದ ಸರಣಿಗೆ ಆಯ್ಕೆಯಾಗಬೇಕಿದ್ದ ಯುವರಾಜ್ ಸಿಂಗ್ ಅವರು 'ಯೋ ಯೋ 'ಟೆಸ್ಟ್ ನಲ್ಲಿ ಪಾಸಾಗದ ಕಾರಣ ತಂಡದಿಂದ ಹೊರಗುಳಿಯಬೇಕಾಯಿತು.

ಇದೇ ಟೆಸ್ಟ್ ನಲ್ಲಿ ಫೇಲ್ ಆಗಿದ್ದ ಸುರೇಶ್ ರೈನಾ ಅವರನ್ನು ಇಂಡಿಯಾ ಬ್ಲೂ ತಂಡದ ನಾಯಕರನ್ನಾಗಿ ಹೆಸರಿಸಲಾಗಿದೆ. ಪಾರ್ಥಿವ್ ಪಟೇಲ್ ಇಂಡಿಯಾ ಗ್ರೀನ್ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು ಇಂಡಿಯಾ ರೆಡ್ ತಂಡದ ಸಾರಥ್ಯವನ್ನು ಅಭಿನವ್ ಮುಕುಂದ್ ವಹಿಸಲಿದ್ದಾರೆ.

ಫಾರ್ಮ್, ಫಿಟ್ನೆಸ್ ಸಮಸ್ಯೆ

ಫಾರ್ಮ್, ಫಿಟ್ನೆಸ್ ಸಮಸ್ಯೆ

37 ವರ್ಷ ವಯಸ್ಸಿನ ಯುವರಾಜ್ ಸಿಂಗ್ ಅವರಿಗೆ ಈ ವರ್ಷ ನಡೆಯಲಿರುವ 23ಕ್ಕೂ ಅಧಿಕ ಪಂದ್ಯಗಳ ಪೈಕಿ ಆಡುವ ಅವಕಾಶ ಸಿಗುವುದು ಅನುಮಾನ ಎನಿಸಿದೆ.
ಕೋಚ್ ರವಿಶಾಸ್ತ್ರಿ ಹಾಗೂ ನಾಯಕ ವಿರಾಟ್ ಕೊಹ್ಲಿ ಅವರ ಮೊದಲ ಆಯ್ಕೆಯಂತೂ ಯುವ ಆಟಗಾರರ ಮೇಲಿರುತ್ತದೆ. ಜತೆಗೆ ಫಿಟ್ನೆಸ್ ಸಮಸ್ಯೆ ಎದುರಿಸುತ್ತಿರುವ ಯುವರಾಜ್, ಸುರೇಶ್ ರೈನಾ ಅವರಿಗೆ ಟೀಂ ಇಂಡಿಯಾಕ್ಕೆ ಮರಳುವುದು ಸ್ವಲ್ಪ ಕಷ್ಟವಾಗಲಿದೆ.

ಯುವರಾಜ್ ಆಯ್ಕೆ ಮಾಡಿಲ್ಲ ಏಕೆ?

ದುಲೀಪ್ ಟ್ರೋಫಿ, ಮಂಡಳಿ ಅಧ್ಯಕ್ಷರ ಎಲೆವೆನ್, ಆಸ್ಟ್ರೇಲಿಯಾ ವಿರುದ್ಧದ ಸರಣಿ ಯಾವುದಕ್ಕೂ ಯುವರಾಜ್ ಆಯ್ಕೆ ಮಾಡಿಲ್ಲವೇಕೆ? ರಾಜಕೀಯ ಮಾಡಿ, ಪ್ರತಿಭೆಯನ್ನು ತುಳಿಯುತ್ತಿರುವುದು ಸರಿಯೇ ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ.

ಫಾರ್ಮ್ಸ್ ಅಷ್ಟು ಮುಖ್ಯವೇ?

ಸದ್ಯ ತಂಡಕೆಕ್ ಆಯ್ಕೆಯಾಗಿರುವ ಕೆಎಲ್ ರಾಹುಲ್, ಕೇದಾರ್ ಜಾಧವ್ ಅವರು ಕೂಡಾ ಉತ್ತಮ ಲಯದಲ್ಲಿಲ್ಲ. ಯುವರಾಜ್, ರೈನಾ ಅವರ ಆಯ್ಕೆ ಮಾಡಬಹುದಾಗಿತ್ತು.

ನಮಗೆ ಉತ್ತರ ಬೇಕಿದೆ

ಯುವರಾಜ್ ರನ್ನು ಕಡೆಗಣಿಸಲಾಗಿದೆಯೇ? ಅಥವಾ ವಿಶ್ರಾಂತಿ ನೀಡಲಾಗಿದೆಯೇ? ಅವರ ಆಯ್ಕೆ ಬಗ್ಗೆ ಎದ್ದಿರುವ ಪ್ರಶ್ನೆಗೆ ಉತ್ತರ ನೀಡಬೇಕಿದೆ.

ಬಿಸಿಸಿಐ ಬ್ರೈನ್ ಟೆಸ್ಟ್ ಮಾಡಿಸಿ

ಯುವರಾಜ್, ಸುರೇಶ್ ರೈನಾ ಅವರ ಫಿಟ್ನೆಸ್ ಟೆಸ್ಟ್ ಮಾಡಬೇಕಾಗಿಲ್ಲ. ಮೊದಲಿಗೆ ಬಿಸಿಸಿಐ ಅಧಿಕಾರಿಗಳ ಬ್ರೈನ್ ಟೆಸ್ಟ್ ಮಾಡಿಸಿ ಎಂದ ಅಭಿಮಾನಿಗಳು

Story first published: Sunday, September 10, 2017, 16:35 [IST]
Other articles published on Sep 10, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ