ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹರ್‌ಪ್ರೀತ್‌ ಬ್ರಾರ್ ಪ್ರದರ್ಶನಕ್ಕೆ ಯುವರಾಜ್ ಸಿಂಗ್ ಮೆಚ್ಚುಗೆ

Yuvraj Singh very happy for Harpreet Brar after his match-winning show against RCB

ಅದ್ಮದಾಬಾದ್: ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶುಕ್ರವಾರ (ಏಪ್ರಿಲ್ 30) ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 34 ರನ್ ಸೋಲನುಭವಿಸಿತ್ತು. ಇದಕ್ಕೆ ಮುಖ್ಯ ಕಾರಣ ಪಂಜಾಬ್‌ನ ಸ್ಪಿನ್ನರ್ ಹರ್‌ಪ್ರೀತ್‌ ಬ್ರಾರ್.

ಕಳಪೆ ಪ್ರದರ್ಶನಕ್ಕೆ ವಾರ್ನರ್ ತಲೆದಂಡ, ಸನ್‌ರೈಸರ್ಸ್‌ಗೆ ಕೇನ್ ವಿಲಿಯಮ್ಸನ್ ನೂತನ ನಾಯಕಕಳಪೆ ಪ್ರದರ್ಶನಕ್ಕೆ ವಾರ್ನರ್ ತಲೆದಂಡ, ಸನ್‌ರೈಸರ್ಸ್‌ಗೆ ಕೇನ್ ವಿಲಿಯಮ್ಸನ್ ನೂತನ ನಾಯಕ

ಶುಕ್ರವಾರದ ಪಂದ್ಯದಲ್ಲಿ 14ನೇ ಆವೃತ್ತಿಯ ಐಪಿಎಲ್‌ನಲ್ಲಿ ಮೊದಲ ಪಂದ್ಯ ಆಡಿದ್ದ ಎಡಗೈ ಆರ್ಥೋಡಾಕ್ಸ್ ಬೌಲರ್ ಹರ್ಪ್ರೀತ್‌ ಬ್ರಾರ್, ಆರ್‌ಸಿಬಿ ಪ್ರಮುಖ ವಿಕೆಟ್‌ಗಳನ್ನು ಕೆಡವಿ ಪಂಜಾಬ್‌ಗೆ ಗೆಲುವಿಗೆ ಕಾರಣರಾಗಿದ್ದರು. ವಿರಾಟ್ ಕೊಹ್ಲಿ (35 ರನ್), ಗ್ಲೆನ್ ಮ್ಯಾಕ್ಸ್‌ವೆಲ್ (0), ಎಬಿ ಡಿ ವಿಲಿಯರ್ಸ್ (3) ವಿಕೆಟ್‌ಗಳು ಬ್ರಾರ್‌ಗೆ ಲಭಿಸಿತ್ತು.

ಬ್ರಾರ್ ವೀರೋಚಿತ ಪ್ರದರ್ಶನ ಮೆಚ್ಚಿ ಟೀಮ್ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್‌ ಯುವರಾಜ್ ಸಿಂಗ್‌ ಟ್ವೀಟ್‌ ಮಾಡಿದ್ದಾರೆ. 'ಹರ್‌ಪ್ರೀತ್ ಬ್ರಾರ್ ಪ್ರದರ್ಶನಕ್ಕೆ ಖುಷಿಯಾಗಿದೆ. ಗುಣಮಟ್ಟದ ಬ್ಯಾಟ್ಸ್‌ಮನ್‌ಗಳ ವಿಕೆಟ್ ಪಡೆಯೋದು ಮತ್ತು ಪಂದ್ಯದ ಕೊನೆಯಲ್ಲಿ ಅಗತ್ಯ ರನ್‌ ಕೊಡುಗೆ ನೀಡಿದ್ದು ಖುಷಿಯಾಗಿದೆ' ಎಂದು ಯುವಿ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಪಂಜಾಬ್‌ ವಿರುದ್ಧ ಬೆಂಗಳೂರು ಸೋಲಿಗೆ ಕಾರಣ ಹೇಳಿದ ಬ್ರಾಡ್‌ ಹಾಗ್ಪಂಜಾಬ್‌ ವಿರುದ್ಧ ಬೆಂಗಳೂರು ಸೋಲಿಗೆ ಕಾರಣ ಹೇಳಿದ ಬ್ರಾಡ್‌ ಹಾಗ್

ಟ್ವೀಟ್‌ನ ಮುಂದಿನ ಸಾಲುಗಳಲ್ಲಿ, 'ರಾಜ್ಯ ಕ್ರಿಕೆಟ್‌ನ ವಿಚಾರಕ್ಕೆ ಬಂದಾಗ ನಿನ್ನ ಮೇಲಿನ ಟೀಕೆಗಳಿಗೆ ಉತ್ತರಿಸಲು ಉತ್ತಮ ವಿಧಾನವಿದು. ಮ್ಯಾಚ್ ವಿನ್ನರ್ ಆಟಗಾರನ ನೀಡಿ ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್, ಹರ್ಭಜನ್‌ ಸಿಂಗ್ ಒಳ್ಳೆಯ ಕೆಲಸ ಮಾಡಿದಿರಿ,' ಎಂದು ಬರೆದುಕೊಳ್ಳಲಾಗಿದೆ. ಅಂದ್ಹಾಗೆ ಪಂಜಾಬ್‌ ಇನ್ನಿಂಗ್ಸ್‌ನಲ್ಲಿ ಬ್ರಾರ್ ಅಜೇಯ 25 ರನ್ (17 ಎಸೆತ) ಕೊಡುಗೆ ಕೂಡ ನೀಡಿದ್ದರು.

Story first published: Saturday, May 1, 2021, 16:43 [IST]
Other articles published on May 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X