ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಆ ಇಬ್ಬರೇ ಕೇಂದ್ರಬಿಂದು: ಜಹೀರ್ ಖಾನ್

Zaheer Khan said in series against new zealand focus will be on Rahul Dravid and Rohit Sharma

ಟಿ20 ವಿಶ್ವಕಪ್ ಅಂತ್ಯವಾಗುತ್ತಿದ್ದಂತೆಯೇ ಈಗ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಚಿತ್ತ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಮೇಲೆ ಬಿದ್ದಿದೆ. ಮುಂದಿನ ಬುಧವಾರದಿಂದಲೇ ಭಾರತ ಹಾಗೂ ನ್ಯೂಜಿಲೆಂಡ್ ಮದ್ಯೆ ಟಿ20 ಸರಣಿ ಆರಂಭವಾಗಲಿದೆ. ಈಗಾಗಲೇ ಎರಡು ತಂಡಗಳ ಸ್ಕ್ವಾಡ್ ಘೋಷಣೆಯಾಗಿದ್ದು ಭಾರತೀಯ ಆಟಗಾರರು ಜೈಪುರದಲ್ಲಿದ್ದು ಸರಣಿಗೆ ಸಜ್ಜಾಗಿದ್ದಾರೆ. ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಆಡಿದ್ದ ನ್ಯೂಜಿಲೆಂಡ್ ತಂಡ ಶೀಘ್ರದಲ್ಲಿಯೇ ಭಾರತಕ್ಕೆ ಬಂದಿಳಿಯಲಿದೆ.

ಈ ಟಿ20 ಸರಣಿಯಲ್ಲಿ ಎಲ್ಲರ ಹೆಚ್ಚಿನ ಗಮನ ಇಬ್ಬರ ಮೇಲೆ ಬೀಳಲಿದೆ ಎಂದು ಜಹೀರ್ ಖಾನ್ ಹೇಳಿಕೆ ನೀಡಿದ್ದಾರೆ. ಟೀಮ್ ಇಂಡಿಯಾದ ನಾಯಕನಾಗಿ ಜವಾಬ್ಧಾರಿ ವಹಿಸಿಕೊಂಡಿರುವ ರೋಹಿತ್ ಶರ್ಮಾ ಹಾಗೂ ನೂತನ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮೇಲೆ ಅಭಿಮಾನಿಗಳು ಗಮನ ಕೇಂದ್ರೀಕರಿಸಲಿದ್ದಾರೆ ಎಂದು ಜಹೀರ್ ಖಾನ್ ಹೇಳಿದ್ದಾರೆ. ಟೀಮ್ ಇಂಡಿಯಾ ಪಾಲಿಗೆ ಈ ಸರಣಿ ಬಹಳ ಮುಖ್ಯ ಪಾತ್ರವಹಿಸಲಿದೆ ಎಂದು ಕೂಡ ಜಹೀರ್ ಖಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬುಮ್ರಾರ ಅರ್ಧದಷ್ಟು ಬೌಲರ್ ಆಗಿದ್ರೆ ಸಾಕಿತ್ತು, ತುಂಬಾ ಖುಷಿಯಾಗಿರುವೆ: ನವೀನ್ ಉಲ್ ಹಕ್ಬುಮ್ರಾರ ಅರ್ಧದಷ್ಟು ಬೌಲರ್ ಆಗಿದ್ರೆ ಸಾಕಿತ್ತು, ತುಂಬಾ ಖುಷಿಯಾಗಿರುವೆ: ನವೀನ್ ಉಲ್ ಹಕ್

ನ್ಯೂಜಿಲೆಂಡ್ ವಿರುದ್ಧದ ಈ ಸರಣಿಗೆ ಟೀಮ್ ಇಂಡಿಯಾದ ಕೆಲ ಪ್ರಮುಖ ಆಟಗಾರರಿಗೆ ವಿಶ್ರಾಂತಿಯನ್ನು ನೀಡಲಾಗಿದೆ. ಜಸ್ಪ್ರೀತ್ ಬೂಮ್ರಾ, ವಿರಾಟ್ ಕೊಹ್ಲಿಯಂತಾ ಆಟಗಾರರು ಟಿ20 ಸರಣಿಯಿಂದ ಹೊರಗುಳಿದಿದ್ದಾರೆ. ಆದರೆ ಇದೆಲ್ಲದರ ಮಧ್ಯೆ ನೂತನವಾಗಿ ಜವಾಬ್ಧಾರಿ ವಹಿಸಿಕೊಂಡಿರುವ ರಾಹುಲ್ ದ್ರಾವಿಡ್ ಹಾಗೂ ರೋಹಿತ್ ಶರ್ಮಾ ಮೇಲೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಬಹಳ ನಿರೀಕ್ಷೆಯಿಟ್ಟು ನೋಡುತ್ತಾರೆ ಎಂದು ಜಹೀರ್ ಖಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

"ಟೀಮ್ ಇಂಡಿಯಾ ಸೆಮಿಫೈನಲ್‌ಗೆ ಪ್ರವೇಶಿಸಲು ವಿಫಲವಾಗಿರುವ ಕಾರಣದಿಂದಾಗಿ ಖಂಡಿತವಾಗಿಯೂ ಆಘಾತ ಅನುಭವಿಸಿದೆ. ಅದೇ ಈ ಸರಣಿಯ ಚರ್ಚೆಯ ಕೇಂದ್ರಬಿಂದುವಾಗಿದೆ. ಹೀಗಾಗಿ ಬಹಳಷ್ಟು ಕಾರಣಗಳಿಂದಾಗಿ ಈ ಸರಣಿ ಭಾರತೀಯ ಕ್ರಿಕೆಟ್‌ಗೆ ಹೊಸ ತಿರುವು ನೀಡುವ ನಿರೀಕ್ಷೆಯಿದೆ. ಹೀಗಾಗಿ ರಾಹುಲ್ ದ್ರಾವಿಡ್ ಹಾಗೂ ರೋಹಿತ್ ಶರ್ಮಾ ಮೇಲೆ ನಿರೀಕ್ಷೆಗಳು ಇದೆ. ರಣತಂತ್ರ ಹಾಗೂ ಯೋಜನೆಗಳ ದೃಷ್ಟಿಕೋನದಿಂದ ಭಾರತ ಯಾವ ರೀತಿ ಮುಂದುವರಿಯಲಿದೆ ಎಂಬುದು ಕೂಡ ಬಹಳಷ್ಟು ಕುತೂಹಲಕ್ಕೆ ಕಾರಣವಾಗಲಿದೆ" ಎಂದಿದ್ದಾರೆ ಜಹೀರ್ ಖಾನ್.

ಗುಂಪು ಬೇಡ; ಟಿ20 ವಿಶ್ವಕಪ್‌ನಲ್ಲಾದ ತಪ್ಪು ಮತ್ತೆ ಆಗದಿರಲು ಮಾಸ್ಟರ್‌ಪ್ಲಾನ್ ಹಾಕಿದ ಕೋಚ್ ದ್ರಾವಿಡ್ಗುಂಪು ಬೇಡ; ಟಿ20 ವಿಶ್ವಕಪ್‌ನಲ್ಲಾದ ತಪ್ಪು ಮತ್ತೆ ಆಗದಿರಲು ಮಾಸ್ಟರ್‌ಪ್ಲಾನ್ ಹಾಕಿದ ಕೋಚ್ ದ್ರಾವಿಡ್

ಕಿವೀಸ್‌ಗೆ ತವರಿನಲ್ಲಿ ಆಘಾತ ನೀಡಿದ್ದ ಭಾರತ: ಇನ್ನು ಭಾರತ ನ್ಯೂಜಿಲೆಂಡ್‌ಗೆ ಪ್ರವಾಸ ತೆರಳಿದ್ದ ಸಂದರ್ಭದಲ್ಲಿ ಟಿ20 ಸರಣಿಯಲ್ಲಿ ಆತಿಥೆಯ ನ್ಯೂಜಿಲೆಂಡ್ ತಂಡಕ್ಕೆ 5-0 ಅಂತರದಿಂದ ಭಾರೀ ಸೋಲಿನ ಆಘಾತ ನೀಡಿತ್ತು. ಈಹ ಕಿವೀಸ್ ಪಡೆ ಭಾರತಕ್ಕೆ ಆಗಮಿಸುತ್ತಿದ್ದು ಆ ಸರಣಿ ಸೋಲಿಗೆ ಪ್ರತಿಕಾರಕ್ಕೆ ಅತ್ಯುತ್ತಮ ಅವಕಾಶ ದೊರೆತಿದೆ. ಅದರಲ್ಲು ನ್ಯೂಜಿಲೆಂಡ್ ಸದ್ಯ ಈ ಬಾರಿಯ ವಿಶ್ವಕಪ್‌ನ ಫೈನಲ್ ಹಂತಕ್ಕೇರಿದ್ದು ರನ್ನರ್ ಆಪ್ ಆಗಿ ಹೊರಹೊಮ್ಮಿದೆ. ಹೀಗಾಗಿ ಭಾರತದ ವಿರುದ್ಧ ಮೇಲುಗೈ ಸಾಧಿಸುವ ಲೆಕ್ಕಾಚಾರದಲ್ಲಿದೆ ಕಿವೀಸ್ ಪಡೆ.

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತದ ತಂಡ: ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್ (ಉಪನಾಯಕ), ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್-ಕೀಪರ್), ಇಶಾನ್ ಕಿಶನ್ (ವಿಕೆಟ್-ಕೀಪರ್), ವೆಂಕಟೇಶ್ ಅಯ್ಯರ್, ಯುಜ್ವೇಂದ್ರ ಚಾಹಲ್, ಆರ್ ಅಶ್ವಿನ್, ಅಕ್ಷರ್ ಪಟೇಲ್ , ಅವೇಶ್ ಖಾನ್, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್

ದ್ರಾವಿಡ್ ಕೊಡೋ ಟಾರ್ಚರ್ ನ್ನು ಗಂಗೂಲಿ ಬಳಿ ಹೇಳಿಕೊಂಡ ದ್ರಾವಿಡ್ ಮಗ | Oneindia Kannada

Story first published: Monday, November 15, 2021, 12:48 [IST]
Other articles published on Nov 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X