ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ನಮ್ಮ ಬೆಂಗಳೂರಲ್ಲಿ ಫ್ರೀ ಸ್ಟೈಲ್ ಫುಟ್ಬಾಲರ್ಸ್ ಮಿಂಚು

By Mahesh
Apollo Tyres presents world's best known Freestyle Footballers in Namma Bengaluru

ಬೆಂಗಳೂರು, ಫೆಬ್ರವರಿ, 9: ನಾಲ್ಕು ಬಾರಿ ವಿಶ್ವ-ಫ್ರೀಸ್ಟೈಲ್ ಚಾಂಪಿಯನ್, ಹಂಗೇರಿಯ ಕಿಟ್ಟಿ ಜಾಜಸ್, ಬುಂಡೆಸ್ಲಿಗದ ಮಾಜಿ ವೃತ್ತಿಪರ ಫುಟ್ಬಾಲ್ ಆಟಗಾರ, ಜರ್ಮನಿಯ ಅಲಿನ್ ಯರೆನ್ ಹಾಗೂ ನಾಲ್ಕು ಬಾರಿಯ ಚಾಂಪಿಯನ್, ಪೊಲೆಂಡಿನ ಅಗ್ನಿಯೆಸ್ಕ ಮಿಚ್ ವಿಶ್ವ ಫುಟ್ಬಾಲ್ ಜಗತ್ತಿನಲ್ಲಿ ಶ್ರೇಷ್ಠ ಫುಟ್ಬಾಲ್ ಕಲಾವಿದರು ಎಂದು ಚಿರಪರಿಚತರಾಗಿರುವವರು.

ಅಪೊಲೊ ಟೈರ್ಸ್ ನೀಡಿರುವ ಆಹ್ವಾನದ ಮೇರೆಗೆ ಇವರೆಲ್ಲ ಭಾರತಕ್ಕೆ ಭೇಟಿ ನೀಡಿದ್ದಾರೆ. ಬೆಂಗಳೂರಿಗೆ ಆಗಮಿಸಿರುವ ಕಿಟ್ಟಿ ಹಾಗೂ ಅಲಿನ್ ತಮ್ಮ ಕೌಶಲ್ಯ ಹಾಗೂ ತಂತ್ರಜ್ಞಾನವನ್ನು ಅಭಿಮಾನಿಗಳ ಜತೆ ಹಂಚಿಕೊಳ್ಳಲಿದ್ದಾರೆ.

Apollo Tyres presents world's best known Freestyle Footballers in Namma Bengaluru

ಫ್ರೀಸ್ಟೈಲ್ ಫುಟ್ಬಾಲ್‍ನಲ್ಲಿ ಅವರು ತಂತ್ರವನ್ನು ಪ್ರದರ್ಶಿಸಲಿದ್ದಾರೆ. ದೇಹದ ಯಾವುದೇ ಅಂಗದೊಂದಿಗೆ ಫುಟ್ಬಾಲ್ ಕಸರತ್ತು ಮಾಡುವುದೇ ಫ್ರೀಸ್ಟೈಲ್ ಫುಟ್ಬಾಲ್. ಇದರಲ್ಲಿ ಸಮನ್ವಯ, ಚೆಂಡಿನ ಮೇಲೆ ಸಾಧಿಸುವ ಸಮತೋಲನ ಹಾಗೂ ನಿಯಂತ್ರಣ ಇದರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಮಾಧ್ಯಮದವರ ಜತೆ ಮಾತನಾಡುತ್ತ ಅಲಿನ್ ಹೇಳಿದ್ದು, ಅನುಭವನ ಸಂತಸ ನೀಡಿದೆ. ಫುಟ್ಬಾಲ್ ಕ್ರೀಡೆಯನ್ನು ಪ್ರೀತಿಸುವ ದೇಶವಾಗಿದ್ದ ಭಾರತ ಈಗ ಫುಟ್ಬಾಲ್ ಆಡುವ ರಾಷ್ಟ್ರವಾಗಿ ಪರಿವರ್ತನೆ ಹೊಂದುತ್ತಿದೆ. ಜನರು ನಮ್ಮ ಪ್ರದರ್ಶನ ಕುರಿತು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಭಾರತಕ್ಕೆ ಭೇಟಿ ನೀಡಿ ನಮ್ಮ ಕೌಶಲ ಪ್ರದರ್ಶಿಸುವುದಕ್ಕೆ ಅನುವು ಮಾಡಿಕೊಟ್ಟ ಅಪೆÇಲೊ ಟೈರ್ಸ್‍ಗೆ ನಾವು ಚಿರಋಣಿ ಆಗಿದ್ದೇವೆ.

Apollo Tyres presents world's best known Freestyle Footballers in Namma Bengaluru

ಹಂಗೇರಿಯಾ ಕಿಟ್ಟಿ ಜಾಜಸ್ ಹೇಳಿದ್ದು, ಅಪೊಲೋ ಟೈರ್ಸ್ ಕೈಗೊಂಡಿರುವ ಈ ಕಾರ್ಯಕ್ರಮದ ಮೂಲಕ ನಾವು ಭಾರತದಲ್ಲಿ ಫ್ರೀಸ್ಟೈಲ್ ಫುಟ್ಬಾಲ್ ಜನಪ್ರಿಯಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ಜಾಗತಿಕವಾಗಿ ಇದು ಜನಪ್ರಿಯ ಕ್ರೀಡೆ.

ಫ್ರೀಸ್ಟೈಲ್ ಫುಟ್ಬಾಲ್ ಸೆಲ್ಫ್ ಎಕ್ಸ್ ಪ್ರೆಷನ್, ದೇಹದ ಯಾವುದಾದರೂ ಅಂಗ ಬಳಸಿ ಬೇರೆಬೇರೆ ರೀತಿಯ ಟ್ರಿಕ್ಸ್ ಮಾಡುವುದು ಹಾಗೂ ಹೀಗೆ ಮಾಡುವಾಗ ಕೈಯಿಂದ ಅಥವಾ ತೋಳಿನಿಂದ ಚೆಂಡನ್ನು ಮುಟ್ಟದಿರುವುದು ಕಲೆಯ ಒಂದು ಭಾಗ.

Apollo Tyres presents world's best known Freestyle Footballers in Namma Bengaluru

ಭಾರತದಲ್ಲಿ ಸಹ ಇದು ಜನಪ್ರಿಯತೆ ಗಳಿಸುತ್ತದೆ ಎಂಬ ಆಶಯ ನಮ್ಮದು. ಇತ್ತೀಚಿನ ವರ್ಷಗಳಲ್ಲಿ ಭಾರತ ಅನೇಕ ಯುವ ಹಾಗೂ ಪ್ರತಿಭಾವಂತ ಫುಟ್ಬಾಲ್ ಆಟಗಾರರನ್ನು ಭಾರತ ರೂಪಿಸಿದೆ ಎಂದರು.

Story first published: Friday, February 9, 2018, 16:29 [IST]
Other articles published on Feb 9, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X