ಮತ್ತೊಮ್ಮೆ ಮೆಸ್ಸಿ ಹಿಂದಿಕ್ಕಿ ಬ್ಯಾಲನ್ ಡಿ’ಒರ್ ಪ್ರಶಸ್ತಿ ಗೆದ್ದ ರೊನಾಲ್ಡೊ
ನವದೆಹಲಿ, ಡಿಸೆಂಬರ್ 8: ರಿಯಲ್ ಮ್ಯಾಡ್ರಿಡ್ ಹಾಗೂ ಪೋರ್ಚುಗಲ್ ನ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರಿಗೆ ಐದನೇ ಬಾರಿಗೆ ಪ್ರತಿಷ್ಠಿತ 'ಬ್ಯಾಲನ್ ಡಿ' ಒರ್ ಪ್ರಶಸ್ತಿ ಒಲಿದಿದೆ.
ಬಾರ್ಸಿಲೋನಾದ ಸ್ಟಾರ್ ಲಿಯೊನೆಲ್ ಮೆಸ್ಸಿ ಅವರನ್ನು ಮತ್ತೊಮ್ಮೆ ರೊನಾಲ್ಡೊ ಹಿಂದಿಕ್ಕಿ 2017 'ಬ್ಯಾಲನ್ ಡಿ' ಒರ್ ಪ್ರಶಸ್ತಿಗೆ ಮುತ್ತಿಕ್ಕಿದರು. ಭಾರತೀಯ ಕಾಲಮಾನದ ಪ್ರಕಾರ, ಗುರುವಾರ ಮಧ್ಯರಾತ್ರಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿಗೆ ರೊನಾಲ್ಡೊ ಭಾಜನರಾದರು.

ಸುಮಾರು 10 ವರ್ಷಗಳಿಂದ ಬಾರ್ಸಿಲೋನ ಹಾಗೂ ಅರ್ಜೆಂಟೀನದ ಸೂಪರ್ ಸ್ಟಾರ್ ಮೆಸ್ಸಿ ಹಾಗೂ ರೊನಾಲ್ಡೊ ನಡುವೆ ಈ ಪ್ರಶಸ್ತಿಗಾಗಿ ಸ್ಪರ್ಧೆ ನಡೆಯುತ್ತಿದೆ. ಮೆಸ್ಸಿ 2015ರಲ್ಲಿ ಜಯಿಸುವುದರ ಮೂಲಕ 5ನೇ ಬಾರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಜಯಿಸಿದ್ದರು. 2008ರಲ್ಲಿ ಮೊದಲ ಬಾರಿಗೆ ಚಿನ್ನದ ಚೆಂಡಿಗೆ ರೊನಾಲ್ಡೋ ಮುತ್ತಿಟ್ಟಿದ್ದರು.
ಚಿನ್ನದ ಚೆಂಡಿಗೆ ರೊನಾಲ್ಡೋ ಮುತ್ತಿಟ್ಟಿ ವರ್ಷಗಳು: 2008 ಮೊದಲ ಬಾರಿಗೆ ಈ ಚಿನ್ನದ ಚೆಂಡಿಗೆ ಮುತ್ತಿಕ್ಕಿದ್ದ ರೊನಾಲ್ಡೊ ಬಳಿಕ 2013, 2014, 2016 ರಲ್ಲಿ 'ಬ್ಯಾಲನ್ ಡಿ' ಒರ್ ಪ್ರಶಸ್ತಿಯನ್ನು ತಮ್ಮ ದಾಗಿಸಿಕೊಂಡಿದ್ದರು ಇದೀಗ 2017ರ 'ಬ್ಯಾಲನ್ ಡಿ' ಒರ್ ಪ್ರಶಸ್ತಿಯನ್ನೂ ಸಹ ರೊನಾಲ್ಡೋ ತಮ್ಮದಾಗಿಸಿಕೊಂಡರು.
ಆಯ್ಕೆ ಹೇಗೆ?: ಬ್ಯಾಲನ್ ಡಿ'ಒರ್ ಪ್ರಶಸ್ತಿ ವಿಜೇತರನ್ನು ವಿಶ್ವದ 173 ಪತ್ರಕರ್ತರು ಆಯ್ಕೆ ಮಾಡುತ್ತಾರೆ. 1956ರಿಂದ ಈ ಪ್ರಶಸ್ತಿ ನೀಡಲಾಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications