ಸತತ 2ನೇ ಬಾರಿಗೆ ಎಎಫ್ ಸಿ ಫೈನಲ್ ಗೆ ಕಾಲಿಟ್ಟ ಬೆಂಗಳೂರು ಫುಟ್ಬಾಲ್ ಕ್ಲಬ್

Posted By:

ಪೊಂಗ್ಯಾಂಗ್ (ಉತ್ತರ ಕೊರಿಯಾ), ಸೆಪ್ಟೆಂಬರ್ 13: ವರ್ಷದಿಂದ ವರ್ಷಕ್ಕೆ ಉತ್ತಮ ಪ್ರಗತಿ ತೋರುತ್ತಿರುವ ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್ ಸಿ) ತಂಡವು, ಪ್ರತಿಷ್ಠಿತ ಏಷ್ಯನ್ ಕಾನ್ಫಿಡರೇಷನ್ ಫುಟ್ಬಾಲ್ ಟೂರ್ನಿ (ಎಎಫ್ ಸಿ) 2017ರ ಆವೃತ್ತಿಯ ಅಂತರ ವಲಯ ವಿಭಾಗದ ಫೈನಲ್ ಹಂತಕ್ಕೆ ಕಾಲಿಟ್ಟಿದೆ.

ಸೆ. 13ರಂದು ಇಲ್ಲಿನ ಮೇಡೇ ಕ್ರೀಡಾಂಗಣದಲ್ಲಿ ನಡೆದ ಎಎಫ್ ಸಿಯ ಸೆಮಿಫೈನಲ್ ಹಂತದ 2ನೇ ಪಂದ್ಯದಲ್ಲಿ ಉತ್ತರ ಕೊರಿಯಾದ 'ಏಪ್ರಿಲ್ 25 ಎಫ್ ಸಿ' ತಂಡದ ವಿರುದ್ಧ ಯಾವುದೇ ಗೋಲು ದಾಖಲಿಸದೇ ಬೆಂಗಳೂರು ತಂಡ, ಪಂದ್ಯವನ್ನು ಡ್ರಾ ಮಾಡಿಕೊಂಡಿತು.

ಇದೇ ತಂಡದ ವಿರುದ್ಧ 15 ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದಿದ್ದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ 3-0 ಗೋಲು ಅಂತರದಲ್ಲಿ ಬಿಎಫ್ ಸಿ ಗೆದ್ದಿದ್ದರಿಂದಾಗಿ, ಒಟ್ಟಾರೆ ಗೋಲುಗಳ ಸಾಧನೆಯ ಮೇರೆಗೆ ಬೆಂಗಳೂರು ತಂಡವನ್ನು ಸೆಮಿಫೈನಲ್ ಹಂತದ ವಿಜಯಿ ತಂಡವೆಂದು ಘೋಷಿಸಲಾಯಿತು. ಇದರಿಂದಾಗಿ, ಬೆಂಗಳೂರು ತಂಡ, ಟೂರ್ನಿಯ ಫೈನಲ್ ತಲುಪಿದೆ.

ಉಪಾಂತ್ಯದ ನಿಯಮ ಹೀಗಿದೆ

ಉಪಾಂತ್ಯದ ನಿಯಮ ಹೀಗಿದೆ

ಈ ಟೂರ್ನಿಯಲ್ಲಿ ಸಾಮಾನ್ಯವಾಗಿ ಸೆಮಿಫೈನಲ್ ಪಂದ್ಯಗಳನ್ನು ಎರಡು ಬಾರಿ ಆಡಿಸಲಾಗುತ್ತದೆ. ಒಂದು ತಂಡದ ತವರಿನ ಕ್ರೀಡಾಂಗಣದಲ್ಲಿ ಒಂದು ಪಂದ್ಯ ನಡೆದರೆ, ಎದುರಾಳಿ ತಂಡದ ತವರು ಕ್ರೀಡಾಂಗಣದಲ್ಲಿ ಮತ್ತೊಂದು ಪಂದ್ಯ ನಡೆಯುತ್ತದೆ.

ಗೋಲು ಹೆಚ್ಚಳವೇ ತರುತ್ತೆ ಜಯ

ಗೋಲು ಹೆಚ್ಚಳವೇ ತರುತ್ತೆ ಜಯ

ಎರಡೂ ಪಂದ್ಯಗಳಲ್ಲಿ ಯಾವ ತಂಡ ಹೆಚ್ಚು ಗೋಲು ದಾಖಲಿಸುವುದೋ ಆ ತಂಡವನ್ನು ವಿಜಯಿ ಎಂದು ತೀರ್ಮಾನಿಸಿ, ಫೈನಲ್ ಹಂತಕ್ಕೆ ಬಡ್ತಿ ನೀಡಲಾಗುತ್ತದೆ.

ಬಿಎಫ್ ಸಿಯ ಸಾಧನೆ ಹಿಂದಿದೆ ಈ ತರ್ಕ

ಬಿಎಫ್ ಸಿಯ ಸಾಧನೆ ಹಿಂದಿದೆ ಈ ತರ್ಕ

ಹಾಗಾಗಿಯೇ, ಬೆಂಗಳೂರು ತಂಡವು ಸೆಮಿಫೈನಲ್ ಹಂತದ 2ನೇ ಪಂದ್ಯದಲ್ಲಿ ನೀರಸ ಡ್ರಾ ಕಂಡರೂ, ಮೊದಲ ಸೆಮಿಫೈನಲ್ ಗೆದ್ದಿದ್ದರಿಂದಾಗಿ ಫೈನಲ್ ಗೆ ಕಾಲಿಡಲು ಸಾಧ್ಯವಾಗಿದೆ.

ಕಳೆದ ವರ್ಷವೂ ಫೈನಲ್ ಗೆ ಹೋಗಿತ್ತು ಬಿಎಫ್ ಸಿ

ಕಳೆದ ವರ್ಷವೂ ಫೈನಲ್ ಗೆ ಹೋಗಿತ್ತು ಬಿಎಫ್ ಸಿ

ಅಂದಹಾಗೆ, ಈ ಪ್ರತಿಷ್ಠಿತ ಟೂರ್ನಿಯ ಫೈನಲ್ ಗೆ ಬಿಎಫ್ ಸಿ ಲಗ್ಗೆಯಿಡುತ್ತಿರುವುದು ಇದು ಎರಡನೇ ಬಾರಿ. ಕಳೆದ ವರ್ಷವೂ ಬಿಎಫ್ ಸಿ, ಎಎಫ್ ಸಿಯ ಫೈನಲ್ ತಲುಪಿತ್ತು. ಆ ಮೂಲಕ, ಬಿಎಫ್ ಸಿಯು ಈ ಟೂರ್ನಿಯ ಫೈನಲ್ ಪ್ರವೇಶಿಸಿದ ಮೊದಲ ತಂಡವಾಗಿ ಹೊರಹೊಮ್ಮಿತ್ತು. ಆದರೆ, ಫೈನಲ್ ನಲ್ಲಿ ಏರ್ ಫೋರ್ಸ್ ಕ್ಲಬ್ ತಂಡದ ವಿರುದ್ಧ 0-1 ಗೋಲಿನ ಅಂತರದಲ್ಲಿ ಸೋತಿದ್ದ ಬಿಎಫ್ ಸಿ, ರನ್ನರ್ ಅಪ್ ಗೆ ತೃಪ್ತಿಪಡಬೇಕಾಗಿತ್ತು.

Story first published: Wednesday, September 13, 2017, 17:21 [IST]
Other articles published on Sep 13, 2017
+ ಇನ್ನಷ್ಟು
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ