ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

FIFA World Cup 2022: 4 ಬಾರಿ ಚಾಂಪಿಯನ್‌ ಜರ್ಮನಿಗೆ ಶಾಕ್, 2-1 ಗೋಲುಗಳ ಜಯ ಸಾಧಿಸಿದ ಜಪಾನ್

Biggest Upset In Fifa World Cup 2022: Japan Stuns Germany With 2-1 Defeat

ಸೌದಿ ಅರೇಬಿಯಾ ಬಲಿಷ್ಟ ಅರ್ಜೆಂಟೀನಾಗೆ ಶಾಕ್ ಕೊಟ್ಟ 24 ಗಂಟೆಗಳಲ್ಲೇ ಫಿಫಾ ವಿಶ್ವಕಪ್ 2022ರಲ್ಲಿ ಮತ್ತೊಂದು ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಬಾಲ್ಕು ಬಾರಿ ಚಾಂಪಿಯನ್ ಆಗಿರುವ ಜರ್ಮನಿ ವಿರುದ್ಧ ಜಪಾನ್ 2-1 ಗೋಲುಗಳ ಜಯ ಸಾಧಿಸಿದೆ.

ವಿಶ್ವರ್‍ಯಾಂಕಿಂಗ್‌ನಲ್ಲಿ 11ನೇ ಸ್ಥಾನದಲ್ಲಿರುವ ಜರ್ಮನಿ ವಿಶ್ವಕಪ್‌ನಲ್ಲಿ ಬಲಿಷ್ಠ ತಂಡಗಳಲ್ಲಿ ಒಂದಾಗಿತ್ತು. ವಿಶ್ವ ರ್‍ಯಾಂಕಿಂಗ್‌ನಲ್ಲಿ 23ನೇ ಸ್ಥಾನದಲ್ಲಿರುವ ಜಪಾನ್ ಉತ್ತಮ ಪ್ರದರ್ಶನ ನೀಡುವ ಮೂಲಕ ಬಲಿಷ್ಠ ತಂಡಕ್ಕೆ ಶಾಕ್ ಕೊಟ್ಟಿದೆ.

ಇಲ್ಲಿನ ಖಲೀಫಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಜರ್ಮನಿ ಗೆಲ್ಲುವ ವಿಶ್ವಾಸದಲ್ಲೇ ಕಣಕ್ಕಿಳಿಯಿತು. ಪಂದ್ಯದ ಆರಂಭದ ಸಮಯದಲ್ಲಿ ಅದಕ್ಕೆ ತಕ್ಕಂತೆ ಪ್ರದರ್ಶನವನ್ನು ನೀಡಿತು. ಆಟದ 33ನೇ ನಿಮಿಷದಲ್ಲಿ ಗುಯೋಗಾನ್ ಪೆನಾಲ್ಟಿ ಮೂಲಕ ಗೋಲು ಬಾರಿಸಿ ಜರ್ಮನಿಗೆ 1-0 ಗೋಲುಗಳ ಮುನ್ನಡೆ ನೀಡಿದರು. ಮೊದಲಾರ್ಧದಲ್ಲಿ ಜರ್ಮನಿ ಜಪಾನ್ ವಿರುದ್ಧ ಮೇಲುಗೈ ಸಾಧಿಸಿತ್ತು.

IPL 2023 : ಹರಾಜಿಗೆ ನೊಂದಾಯಿಸಲು ಕೊನೆಯ ದಿನಾಂಕ ತಿಳಿಸಿದ ಬಿಸಿಸಿಐIPL 2023 : ಹರಾಜಿಗೆ ನೊಂದಾಯಿಸಲು ಕೊನೆಯ ದಿನಾಂಕ ತಿಳಿಸಿದ ಬಿಸಿಸಿಐ

ಆದರೆ, ದ್ವಿತೀಯಾರ್ಧದಲ್ಲಿ ಜಪಾನ್ ಉತ್ತಮ ಆಟವಾಡಿತು. ಬದಲೀ ಆಟಗಾರರಾಗಿ ಕಣಕ್ಕಿಳಿದ ದೊಯಾನ್ ಮತ್ತು ಅಸಾನೋ ಎರಡು ಗೋಲುಗಳನ್ನು ಗಳಿಸಿದ್ದು ವಿಶೇಷವಾಗಿತ್ತು.

Biggest Upset In Fifa World Cup 2022: Japan Stuns Germany With 2-1 Defeat

ಅವಿಸ್ಮರಣೀಯ ಗೆಲುವು

ದೊಯಾನ್ ಪಂದ್ಯದ 75ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ 1-1 ಗೋಲುಗಳಿಂದ ಸಮಬಲ ಸಾಧಿಸಿದರು. ಅದಾದ 8 ನಿಮಿಷಗಳ ಅಂತರದಲ್ಲಿಯೇ ಅಸಾನೋ ಪಂದ್ಯದ 83ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಜಪಾನ್‌ಗೆ ಅವಿಸ್ಮರಣೀಯ ಗೆಲುವು ಸಾಧಿಸಿಲು ಕಾರಣವಾದರು.

ಪಂದ್ಯದ ಉದ್ದಕ್ಕೂ ಆಟದ ಮೇಲೆ ನಿಯಂತ್ರಣ ಹೊಂದಿದ್ದರೂ ಜರ್ಮನಿ ತನಗೆ ಗೋಲು ಗಳಿಸಲು ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ವಿಫಲವಾಯಿತು. 9 ಬಾರಿ ಗೋಲು ಗಳಿಸುವ ಅವಕಾಶ ಸಿಕ್ಕರೂ ಅದರಲ್ಲಿ ಕೇವಲ ಒಮ್ಮೆ ಮಾತ್ರ ಯಶಸ್ವಿಯಾಯಿತು.

ಆದರೆ ಜಪಾನ್‌ಗೆ 4 ಬಾರಿ ಮಾತ್ರ ಗೋಲು ಗಳಿಸುವ ಅವಕಾಶ ಸಿಕ್ಕರೂ ಅದರಲ್ಲಿ ಎರಡು ಬಾರಿ ಗೋಲು ಗಳಿಸುವಲ್ಲಿ ಯಶಸ್ವಿಯಾಗುವ ಮೂಲಕ ಪಂದ್ಯದಲ್ಲಿ ಮೇಲುಗೈ ಸಾಧಿಸಿತು.

ಮೊದಲ ಪಂದ್ಯದಲ್ಲೇ ಗೆಲುವು ಸಾಧಿಸಿದ ಜಪಾನ್ 3 ಅಂಕಗಳನ್ನು ಪಡೆದುಕೊಂಡಿದೆ. ಮೊದಲ ಪಂದ್ಯದಲ್ಲೇ ಸೋಲು ಕಂಡ ಜರ್ಮನಿಗೆ ನಾಕೌಟ್‌ ಹಂತ ತಲುಪಬೇಕಾದರೆ ಇ ಗುಂಪಿನಲ್ಲಿರುವ ಸ್ಪೇನ್ ಮತ್ತು ಕೋಸ್ಟರಿಕಾ ವಿರುದ್ಧ ಜಯ ದಾಖಲಿಸಬೇಕಿದೆ.

ಫಿಫಾ ವಿಶ್ವಕಪ್ 2022 ಆರಂಭವಾದ ನಾಲ್ಕನೇ ದಿನದಲ್ಲೇ ಎರಡು ಅಚ್ಚರಿಯ ಫಲಿತಾಂಶಗಳಿಗೆ ಕಾರಣವಾಗಿದೆ. ಇಲ್ಲಿ ಯಾವ ತಂಡವೂ ಬಲಿಷ್ಠವಲ್ಲ, ಯಾವ ತಂಡವೂ ದುರ್ಬಲವಲ್ಲ ಯಾವ ತಂಡ ಉತ್ತಮವಾಗಿ ಆಡುತ್ತದೋ ಆ ತಂಡ ಗೆಲುವು ಸಾಧಿಸಬಹುದು ಎನ್ನುವುದನ್ನು ಸೌದಿ ಅರೇಬಿಯಾ ಮತ್ತು ಜಪಾನ್ ತೋರಿಸಿಕೊಟ್ಟಿವೆ.

Story first published: Wednesday, November 23, 2022, 21:47 [IST]
Other articles published on Nov 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X