ಕೊರೊನಾವೈರಸ್ ಆಸ್ಪತ್ರೆಯಾಗಿ ಬದಲಾಗಲಿದೆ ಮರಕಾನಾ ಸ್ಟೇಡಿಯಂ

ರಿಯೋ ಡಿ ಜನೈರೋ, ಮಾರ್ಚ್ 27: ಬ್ರೆಜಿಲ್‌ನ ರಿಯೋ ಡಿ ಜನೈರೋದಲ್ಲಿರುವ ಜನಪ್ರಿಯ ಫುಟ್ಬಾಲ್ ಅರೆನಾ, ಮರಕಾನಾ ಇನ್ಮುಂದೆ ತಾತ್ಕಾಲಿ ಕೊರೊನಾ ಆಸ್ಪತ್ರೆಯಾಗಿ ಬದಲಾಗಲಿದೆ. ಬ್ರೆಜಿಲ್‌ನ ಅಧಿಕಾರಿಗಳು ಗುರುವಾರ (ಮಾರ್ಚ್ 26) ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಪೊಲೀಸ್ ಮೇಲಿನ ಹಲ್ಲೆಯ ವೀಡಿಯೋ ಶೇರ್ ಮಾಡಿದ ಹರ್ಭಜನ್ ಸಿಂಗ್

ಗುರುವಾರದ ವೇಳೆಗೆ ಬ್ರೆಜಿಲ್‌ನಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 2,900 ದಾಟಿದೆ. ಆತಂಕ ಮಟ್ಟದಲ್ಲಿ ಏರುತ್ತಿರುವ ಸೋಂಕಿತರ ಸಂಖ್ಯೆಯಿಂದ ಎಚ್ಚೆತ್ತಿರುವ ಕೇಂದ್ರೀಯ ಪ್ರಾಧಿಕಾರ ಫುಟ್ಬಾಲ್ ಸ್ಟೇಡಿಯಂ ಅನ್ನು ಸೋಂಕಿತರ ಚಿಕಿತ್ಸೆಗಾಗಿ ಬಳಲು ಯೋಚಿಸಿದೆ.

ವಿರಾಟ್ ಕೊಹ್ಲಿಯಿಂದ ಮುರಿಯಲು ಸಾಧ್ಯವೇ ಇಲ್ಲದ 5 ದಾಖಲೆಗಳು

ಬ್ರೆಜಿಲ್‌ನಲ್ಲಿ ಈಗಾಗಲೇ ಸುಮಾರು 77 ಮಂದಿ ಸಾವನ್ನಪ್ಪಿರುವುದು ವರದಿಯಾಗಿದೆ. ಬ್ರೆಜಿಲ್‌ನ ಅಧ್ಯಕ್ಷ ಜೈರ್ ಬೋಲ್ಸನಾರೊ, ಮಾರಕ ಸೋಂಕನ್ನು 'ಸಣ್ಣ ಫ್ಲೂ'ಗೆ ಹೋಲಿಸಿ ನಿರ್ಲಕ್ಷ್ಯ ವಹಿಸಿದ್ದರಿಂದಲೇ ಸೋಂಕಿತರ ಸಂಖ್ಯೆಯಲ್ಲಿ ದೊಡ್ಡ ಹೆಚ್ಚಳವಾಗಲು ಕಾರಣವಾಗಿದೆ ಎನ್ನಲಾಗುತ್ತಿದೆ.

ಐಪಿಎಲ್ ಇತಿಹಾಸದಲ್ಲಿ ಈವರೆಗೆ ಉಳಿದುಕೊಂಡಿರುವ 5 ವಿಶಿಷ್ಠ ದಾಖಲೆಗಳು

ಜ್ರೆಜಿಲ್‌ನಲ್ಲಿ ರಾಜ್ಯಮಟ್ಟದಲ್ಲಿ ಗವರ್ನರ್‌ಗಳು ಲಾಕ್‌ಡೌನ್‌ ಜಾರಿಗೆ ಮಾಡಲು ಯತ್ನಿಸುತ್ತಿದ್ದಾರೆ. ವೈದ್ಯಕೀಯ ಸೌಲಭ್ಯಗಳನ್ನು ವಿಸ್ತರಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಬೋಲ್ಸನಾರೊ, ಕೊರೊನಾ ನಿಗ್ರಹ ಕ್ರಮಗಳನ್ನು ಇದು ಲ್ಯಾಟಿನ್ ಅಮೆರಿಕಾದ ಆರ್ಥಿಕತೆ ಸುಖಾಸುಮ್ಮನೆ ಮಂದಗತಿಯೆನಿಸಲು ಕಾರಣ ಎಂದು ಟೀಕಿಸಿದ್ದರು ಎಂದು ಹೇಳಲಾಗುತ್ತಿದೆ.

For Quick Alerts
ALLOW NOTIFICATIONS
For Daily Alerts
Story first published: Friday, March 27, 2020, 11:50 [IST]
Other articles published on Mar 27, 2020
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X