ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಪೀಲೆ ಇನ್ನಿಲ್ಲ: ಫುಟ್ಬಾಲ್ ದಿಗ್ಗಜ ಸಾಧಿಸಿರುವ ಕೆಲ ಮಹತ್ವದ ದಾಖಲೆಗಳು ಹಾಗೂ ಮೈಲಿಗಲ್ಲುಗಳು

Brazilian Football legend Pele records and greatest achievements

ಫುಟ್ಬಾಲ್ ಮತ್ತೋರ್ವ ದಂತಕತೆಯನ್ನು ಕಳೆದುಕೊಂಡಿದೆ. ಬ್ರೆಜಿಲ್‌ನ ಶ್ರೇಷ್ಠ ಆಟಗಾರ ಪೀಲೆ ದೀರ್ಘ ಕಾಲದ ಅಸೌಖ್ಯದಿಂದಾಗಿ ಚಿಕಿತ್ಸೆ ಫಲಿಸದೆ ಗುರುವಾರ ನಿಧನವಾಗಿದ್ದಾರೆ. ಕಳೆದ ನವೆಂಬರ್ 29ರಂದು ಬ್ರೆಜಿಲ್ ನಗರ ಸೌ ಪೌಲೋದ ಅಲ್ಬರ್ಟ್ ಐನ್‌ಸ್ಟಿನ್ ಆಸ್ಪತ್ರೆಗೆ ದಾಖಲಾಗಿದ್ದ ಪೀಲೆ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.

ಫುಟ್ಬಾಲ್ ಲೋಕದಲ್ಲಿಅಭಿಮಾನಿಗಳಿಂದ ದಿ ಕಿಂಗ್ ಎಂದೇ ಕರೆಸಿಕೊಳ್ಳುತ್ತಿದ್ದ ಪೀಲೆ ಅನೇಕ ಶ್ರೇಷ್ಠ ಮೈಲಿಗಲ್ಲುಗಳನ್ನು ಸಾಧಿಸಿದ್ದಾರೆ. ತಮ್ಮ 15 ನೇ ವಯಸ್ಸಿನಲ್ಲಿ ಬ್ರೆಜಿಲಿಯನ್ ಕ್ಲಬ್ ಸ್ಯಾಂಟೋಸ್ ಎಫ್‌ಸಿ ಪರವಾಗಿ ಕಣಕ್ಕಿಳಿಯುವ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು ತಮ್ಮ ನಿಖರತೆ, ವೇಗ, ಡ್ರಿಬ್ಲಿಂಗ್ ಮತ್ತು ಚುರುಕುತನದಿಂದ ಫುಟ್‌ಬಾಲ್ ಜಗತ್ತನ್ನು ಅಕ್ಷರಶಃ ಬೆರಗುಗೊಳಿಸಿದರು. 16ನೇ ವಯಸ್ಸಿನಲ್ಲಿ ಬ್ರೆಜಿಲ್ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದರು. ಬ್ರೆಜಿಲ್ ಮೂರು ವಿಶ್ವಕಪ್ ಗೆಲ್ಲಲು ಕಾರಣವಾಗಿದ್ದ ದಿಗ್ಗಜ ಆಟಗಾರನ ಕೆಲ ಶ್ರೇಷ್ಠ ಸಾಧನೆಗಳ ಮಾಹಿತಿ ಇಲ್ಲಿದೆ.

3 ಫಿಫಾ ವಿಶ್ವಕಪ್ ಚಾಂಪಿಯನ್‌ಶಿಪ್: ಪೀಲೆ ಬ್ರೆಜಿಲ್ ತಂಡದಲ್ಲಿದ್ದಾಗ ಫಿಫಾ ವಿಶ್ವಕಪ್ ಟ್ರೋಫಿಯನ್ನು ಮೂರು ಬಾರಿ ಬ್ರೆಜಿಲ್ ಗೆದ್ದುಕೊಂಡಿತ್ತು. ಈ ಸಾಧನೆ ಮಾಡಿದ ವಿಶ್ವದ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ ಪೀಲೆ. 1958 ಹಾಗೂ 1962ರಲ್ಲಿ ಸತತ ಎರಡು ಬಾರಿ ವಿಶ್ವಕಪ್ ಗೆದ್ದ ಬ್ರೆಜಿಲ್ ಬಳಿಕ 1970ರಲ್ಲಿ ಮತ್ತೊಮ್ಮೆ ಗೆದ್ದುಕೊಂಡಿತ್ತು. ಆಟಗಾರನಾಗಿ ವಿಶ್ವದ ಯಾವುದೇ ಆಟಗಾರ ಈ ಸಾಧನೆಯನ್ನು ಈವರೆಗೆ ಮಾಡಲು ಸಾಧ್ಯವಾಗಿಲ್ಲ. ಇದು ಗಿನ್ನೀಸ್ ವಿಶ್ವದಾಖಲೆಯಲ್ಲಿಯೂ ಸ್ಥಾನ ಪಡೆದಿದೆ.

ಸ್ಯಾಂಟೋಸ್ ಹಾಗೂ ಬ್ರೆಜಿಲ್ ಪರ ಅತೀ ಹೆಚ್ಚು ಗೋಲುಗಳ ಸಾಧನೆ: ಪೀಲೆ ವೃತ್ತಿ ಜೀವನದ ಬಹುತೇಕ ಅವಧಿಯನ್ನು ಸ್ಯಾಂಟೋಸ್ ಫುಟ್ಬಾಲ್ ಕ್ಲಬ್ ತಂಡದ ಪರವಾಗಿ ಆಡಿದ್ದಾರೆ. 659 ಪಂದ್ಯಗಳಲ್ಲಿ 643 ಗೋಲುಗಳು ಪೀಲೆ ಹೆಸರಿನಲ್ಲಿದೆ. ಬ್ರೆಜಿಲ್ ಫುಟ್ಬಾಲ್ ಕ್ಲಬ್‌ನ ಪರವಾಗಿ ಈವರೆಗೆ ಈ ದಾಖಲೆಯನ್ನು ಮುರಿಯಲು ಯಾರಿಂದಲೂ ಸಾಧ್ಯವಾಗಿಲ್ಲ. 1956ರಿಂದ 1974ರ ಅವಧಿಯಲ್ಲಿ ಸ್ಯಾಂಟೋಸ್ ಪರವಾಗಿ ಆಡಿದ್ದಾರೆ ಪೀಲೆ.
ಇನ್ನು ಒಟ್ಟಾರೆಯಾಗಿಯೂ ಒಂದೇ ಫುಟ್ಬಾಲ್ ಕ್ಲಬ್ ಪರವಾಗಿ ದಾಖಲಾಗಿರುವ ಅತಿ ಹೆಚ್ಚಿನ ಗೋಲ್ ಎಂಬ ದಾಖಲೆಯನ್ನು ಪೀಲೆ 2020ರ ಡಿಸೆಂಬರ್‌ವರೆಗೂ ಹೊಂದಿದ್ದರು. 46 ವರ್ಷಗಳ ಬಳಿಕ ಈ ದಾಖಲೆಯನ್ನು ಮೆಸ್ಸಿ ಬಾರ್ಸಿಲೋನಾ ಪರವಾಗಿ 644ನೇ ಗೋಲು ಗಳಿಸುವ ಮೂಲಕ ಮುರಿದರು. ಇನ್ನು ಬ್ರೆಜಿಲ್ ಪರವಾಗಿ ಅತೀ ಹೆಚ್ಚು ಗೋಲು ಗಳಿಸಿದ ಆಟಗಾರ ಪಟ್ಟಿಯಲ್ಲಿ ಈಗಲೂ ಪೀಲೆ ಅಗ್ರಸ್ಥಾನದಲ್ಲಿದ್ದು ಇತ್ತೀಚೆಗಷ್ಟೇ ನೇಮಾರ್ ಈ ಸಾಧನೆಯನ್ನು ಸರಿಗಟ್ಟಿದ್ದಾರೆ

ಇನ್ನು ಪೀಲೆ ಫಿಫಾ ವಿಶ್ವಕಪ್‌ನಲ್ಲಿ ಗೋಲು ದಾಖಲಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ಕೂಡ ಹೊಂದಿದ್ದಾರೆ. 17 ವರ್ಷ 239 ದಿನಗಳಾಗಿದ್ದಾಗ ಪೀಲೆ ವಿರ್ಶವಕಪ್‌ನಂಥಾ ಅತ್ಯುನ್ನತ ವೇದಿಕೆಯಲ್ಲಿ ತಮ್ಮ ಮೊದಲ ಗೋಲು ಗಳಿಸಿ ಈ ದಾಖಲೆ ಬರೆದಿದ್ದರು. ಇದು ಇನ್ನು ಕೂಡ ಮುರಿಯದೆ ಉಳಿದುಕೊಂಡಿದೆ. ಇನ್ನು ವಿಶ್ವಕಪ್ ಚಾಂಪಿಯನ್ ತಂಡದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ಕೂಡ ಪೀಲೆ ಹೆಸರಿನಲ್ಲಿದೆ.

Story first published: Friday, December 30, 2022, 9:02 [IST]
Other articles published on Dec 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X