ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಕೊಹ್ಲಿ ತಂಡವನ್ನು ಮಣಿಸಿ ಕಪ್ ಗೆದ್ದ ಧೋನಿ ಟೀಂ!

By Mahesh

ಮಡಗಾಂವ್,ಡಿ.20: ಟೀಂ ಇಂಡಿಯಾದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಒಡೆತನದ ಎಫ್ ಸಿ ಗೋವಾ ತಂಡವನ್ನು ಟೀಂ ಇಂಡಿಯಾದ ಏಕದಿನ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ತಂಡ ಎಫ್‌ಸಿ ಚೆನ್ನೈಯಿನ್ ಸೋಲಿಸಿದೆ. ಈ ಮೂಲಕ ನೂತನ ಇಂಡಿಯನ್ ಸೂಪರ್ ಲೀಗ್ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಅಂತಿಮ ಹಣಾಹಣಿಯಲ್ಲಿ ಚೆನ್ನೈ ತಂಡ 3-2 ಗೋವಾ ತಂಡವನ್ನು ಮಣಿಸಿದೆ.

ಫಟೊರ್ಡಾದ ಜವಾಹರ್‌ಲಾಲ್ ನೆಹರೂ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್) ಫೈನಲ್‌ ಕುತೂಹಲ ಕೆರಳಿಸಿತ್ತು. ಕೊಲಂಬಿಯಾದ ಸ್ಟ್ರೈಕರ್ ಜಾನ್ ಸ್ಟಿವೆನ್ ಮೆಂಡೋಜಾ ಅವರು ಪೆನಾಲ್ಟಿ ಮಿಸ್ ಮಾಡಿದ್ದು, ಚೆನ್ನೈಗೆ ವರವಾಯಿತು. ಚೊಚ್ಚಲ ಪ್ರಶಸ್ತಿ ಗೆಲ್ಲುವ ಅವಕಾಶ ಗೋವಾ ಕೈತಪ್ಪಿತು.

ಪ್ರಥಮಾರ್ಧದಲ್ಲಿ ಉಭಯ ತಂಡಗಳಿಂದಲೂ ಗೋಲು ದಾಖಲಾಗಿರಲಿಲ್ಲ. ಆದರೆ, ದ್ವಿತೀಯಾರ್ಧ ದಲ್ಲಿ ಬ್ರುನೊ ಪೆಲ್ಲಿಸ್ಸರಿ (54ನೇ ನಿಮಿಷ) ಚೆನ್ನೈನ ಗೋಲು ಖಾತೆ ತೆರೆದಿದ್ದರು. ಮತ್ತೆ ನಾಲ್ಕು ನಿಮಿಷ ಕಳೆಯುವಷ್ಟರಲ್ಲಿ ಗೋವಾ ತಂಡದ ಥೊಂಗ್‌ಕೊಸಿಮ್ ಹಾವೊಕಿಪ್ (58ನೇ ನಿಮಿಷ) ಗೋಲು ಜಮೆ ಮಾಡಿ 1-1 ಸಮಬಲ ಸಾಧಿಸಿದ್ದರು.

ಆದರೆ, ಜಾಫ್ರಿ 87ನೇ ನಿಮಿಷದಲ್ಲಿ ಗೋಲು ಸಂಪಾದಿಸಿ ಗೋವಾ ತಂಡ 2-1 ಮುನ್ನಡೆ ತಂದು ಕೊಟ್ಟರು. 90ನೆ ನಿಮಿಷದಲ್ಲಿ ಗೋವಾ ತಂಡದ ಗೋಲು ಕೀಪರ್ ಲಕ್ಷ್ಮೀಕಾಂತ್ ಕಟ್ಟಿಮನಿ ಮಾಡಿದ ಎಡವಟ್ಟಿನಿಂದಾಗಿ ಚೆನ್ನೈ ಖಾತೆಗೆ ಸ್ವಯಂ ಗೋಲು ಉಡುಗೊರೆ ಸಿಕ್ಕಿತು. ಮೆಂಡೊನ್ಸಾ ವೆಲೆನ್ಸಿಯಾ ಗೋಲು ಬಾರಿಸುವುದರೊಂದಿಗೆ ಚೆನ್ನೈ ತಂಡ ಚಾಂಪಿಯನ್ ಆಗಲು ನೆರವಾದರು.

ಕೊಹ್ಲಿ ಜೊತೆ ಅಭಿಶೇಕ್, ನೀತು ಅಂಬಾನಿ

ಕೊಹ್ಲಿ ಜೊತೆ ಅಭಿಶೇಕ್, ನೀತು ಅಂಬಾನಿ

29 ಗೋಲು ಸಂಪಾದಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದ ಗೋವಾ ತಂಡ ಫೈನಲ್‌ನಲ್ಲಿ ಎಡವಿತು.

ವಿಜೇತ ಚೆನ್ನೈ ತಂಡ 8 ಕೋಟಿ ರೂ

ವಿಜೇತ ಚೆನ್ನೈ ತಂಡ 8 ಕೋಟಿ ರೂ

ವಿಜೇತ ಚೆನ್ನೈ ತಂಡ 8 ಕೋಟಿ ರೂ, ದ್ವಿತೀಯ ಸ್ಥಾನ ಪಡೆದ ಗೋವಾ 4 ಕೋಟಿ ರೂ. ಮೊತ್ತದ ಬಹುಮಾನ ಪಡೆಯಿತು.ನೀತಾ ಅಂಬಾನಿ ಬಹುಮಾನ ವಿತರಿಸಿದರು.

ಸ್ಟೀವನ್ ಮೆಂಡೊನ್ಸಾ ‘ಗೋಲ್ಡನ್ ಬೂಟ್’

ಸ್ಟೀವನ್ ಮೆಂಡೊನ್ಸಾ ‘ಗೋಲ್ಡನ್ ಬೂಟ್’

ಚೆನ್ನೈಯಿನ್ ಎಫ್‌ಸಿಯ ಸ್ಟೀವನ್ ಮೆಂಡೊನ್ಸಾ ‘ಗೋಲ್ಡನ್ ಬೂಟ್' ಮತ್ತು ‘ಹೀರೊ ಆಫ್ ಲೀಗ್ ಅವಾರ್ಡ್' ಚೆನ್ನೈ ತಂಡದ ಗೋಲ್ ಕೀಪರ್ ಅಪೋಲಾ ಎಡ್ಮಿಯಾ ಎಡೆಲ್ ಬೇಟೆ ‘ಗೋಲ್ಡನ್ ಗ್ಲೌವ್, ಚೆನ್ನೈನ ಜೀಜೆ ಉದಯೋನ್ಮುಖ ಆಟಗಾರ ಪ್ರಶಸ್ತಿ ಪಡೆದರು.

ಕಳೆದ ವರ್ಷ 121 ಗೋಲು ದಾಖಲಾಗಿತ್ತು

ಕಳೆದ ವರ್ಷ 121 ಗೋಲು ದಾಖಲಾಗಿತ್ತು

ಕಳೆದ ವರ್ಷ 121 ಗೋಲು ದಾಖಲಾಗಿತ್ತು. ಈ ಸಾಲಿನಲ್ಲಿ 60 ಪಂದ್ಯಗಳಲ್ಲಿ 186 ಗೋಲು ಜಮೆ ಆಗಿದೆ. ಗೋವಾದಲ್ಲಿ ನಡೆದ ಫೈನಲ್‌ನಲ್ಲಿ 5 ಗೋಲುಗಳು ಬಂದಿವೆ. ಅದರಲ್ಲೂ ಮುಖ್ಯವಾಗಿ ದ್ವಿತೀಯಾರ್ಧದಲ್ಲಿ ಗೋಲುಗಳು ದಾಖಲಾಗಿದೆ.

ಗಂಗೂಲಿ ತಂಡದ ನಿರಾಶೆ ಪ್ರದರ್ಶನ

ಗಂಗೂಲಿ ತಂಡದ ನಿರಾಶೆ ಪ್ರದರ್ಶನ

ಗಂಗೂಲಿ ಅವರ ಅಟ್ಲೆಂಟಿಕೋ ಕೊಲ್ಕತ್ತಾ ತಂಡದ ನಿರಾಶೆ ಪ್ರದರ್ಶನ ನೀಡಿ ಐಎಸ್ ಎಲ್ ಫೈನಲ್ ಕೂಡಾ ತಲುಪಲಿಲ್ಲ.

Story first published: Wednesday, January 3, 2018, 10:13 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X