ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ನಾರ್ತ್ ಈಸ್ಟ್, ಮುಂಬೈ ನಡುವೆ ಮಹಾತ್ವಾಕಾಂಕ್ಷೆಯ ಪಂದ್ಯ

FCNorthEast United FC v Mumbai City FC

ಗುವಾಹಟಿ, ನವೆಂಬರ್ 9 : ನಾರ್ತ್ ಈಸ್ಟ್ ಯುನೈಟೆಡ್‌ ತಂಡ ಇಂಡಿಯನ್‌ ಸೂಪರ್ ಲೀಗ್‌ನ (ಐಎಸ್ಎಲ್) ಈ ಬಾರಿಯ ಆವೃತ್ತಿಯಲ್ಲಿ ನಿರೀಕ್ಷೆಗಿಂತ ಉತ್ತಮ ಪ್ರದರ್ಶನ ತೋರಿದೆ. ಅದೇ ರೀತಿ ಮುಂಬೈ ಸಿಟಿ ತಂಡದ ವಿರುದ್ಧ ಜಯಗಳಿಸಿ ಪ್ಲೇ ಆಫ್ ಹಾದಿಯನ್ನು ಸುಗಮಗೊಳಿಸುವ ಗುರಿ ಹೊಂದಿದೆ.

ಮೂರನೇ ಸ್ಥಾನದಲ್ಲಿರುವ ನಾರ್ತ್ ಈಸ್ಟ್ ಯುನೈಟೆಡ್ ಹಾಗೂ ಐದನೇ ಸ್ಥಾನದಲ್ಲಿರುವ ಮುಂಬೈ ಸಿಟಿ ತಂಡದ ನಡುವಿನ ಅಂಕಗಳ ಅಂತರ ಕೇವಲ ಒಂದು. ಆದರೂ ಅತಿಥೇಯ ತಂಡಕ್ಕೆ ಇನ್ನೂ ಒಂದು ಪಂದ್ಯ ಹೆಚ್ಚಿದೆ. ಪರ್ವತ ಪ್ರದೇಶದ ತಂಡ ಐದು ಪಂದ್ಯಗಳಿಂದ 11 ಅಂಕ ಗಳಿಸಿದ್ದರೆ, ಪ್ರವಾಸಿ ತಂಡ ಆರು ಪಂದ್ಯಗಳಿಂದ ಹತ್ತು ಅಂಕಗಳನ್ನು ಗಳಿಸಿದೆ.

ಐಎಸ್ಎಲ್ 2018 : ಪುಟಿದೆದ್ದ ಚೆನ್ನೈ ಗೆ ಶರಣಾದ ಪುಣೆ ಐಎಸ್ಎಲ್ 2018 : ಪುಟಿದೆದ್ದ ಚೆನ್ನೈ ಗೆ ಶರಣಾದ ಪುಣೆ

ಎಲ್ಕೊ ಷಟೋರಿ ಅವರ ತರಬೇತಿಯಲ್ಲಿ ಪಳಗಿರುವ ನಾರ್ತ್ ಈಸ್ಟ್ ತಂಡ ಈ ಬಾರಿಯ ಐಎಸ್‌ಎಲ್‌ನಲ್ಲಿ ಉತ್ತಮ ಆರಂಭ ಕಂಡಿತ್ತು. ಬಾರ್ತಲೋಮ್ಯೋ ಒಗ್ಬಚೆ ಹಾಗೂ ಫೆರ್ನಾಂಡೋ ಗಾಲ್ಲೆಗೋ ಅವರ ಹೊಂದಾಣಿಕೆಯ ದಾಳಿ ವಿಭಾಗ ಎದುರಾಳಿ ತಂಡಕ್ಕೆ ಕಠಿಣ ಸವಾಲು ನೀಡಲಿದೆ.

ಐದು ಪಂದ್ಯಗಳಿಂದ ಆರು ಗೋಲು ಗಳಿಸಿರುವ ಒಗ್ಬಚೆ ಗೋವಾ ತಂಡದ ಫರಾನ್ ಕೊರೊಮಿನಾಸ್ ಅವರೊಂದಿಗೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಗಲ್ಲೆಗೋ ಐದು ಪಂದ್ಯಗಳಲ್ಲಿ ನಾಲ್ಕು ಗೋಲು ಗಳಿಕೆಯಲ್ಲಿ ನೆರವಾಗಿದ್ದಾರೆ. ಗೋಲು ಗಳಿಸಲು ಸಹಾಯಕರಾದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಗೋವಾದ ವಿರುದ್ಧ ಮೊದಲ ಜಯದ ಹುಡುಕಾಟದಲ್ಲಿ ಡೆಲ್ಲಿ ಗೋವಾದ ವಿರುದ್ಧ ಮೊದಲ ಜಯದ ಹುಡುಕಾಟದಲ್ಲಿ ಡೆಲ್ಲಿ

ಷಟೋರಿ ಹುಡುಗರು ಮನೆಯಂಗಣದ ಹೊರಗಡೆ ನಡೆದ ಮೂರು ಪಂದ್ಯಗಳಲ್ಲೂ ಜಯಗಳಿಸಿದ್ದಾರೆ. ಆದರೆ ಮನೆಯಂಗಣದಲ್ಲಿ ಇನ್ನೂ ಮೂರು ಅಂಕ ಗಳಿಸಬೇಕಾಗಿದೆ. ಜಾರ್ಜ್ ಕೋಸ್ಟಾ ಅವರು ತಂಡಕ್ಕೆ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಅಸ್ಥಿರ ಪ್ರದರ್ಶನ ನೀಡುತ್ತಿರುವ ತಂಡ ಮೂರು ಅಂಕಗಳನ್ನು ಗಳಿಸಲು ಉತ್ಸುಕವಾಗಿದೆ.

"ನಾರ್ತ್ ಈಸ್ಟ್ ತಂಡ ಈ ಬಾರಿಯ ಋತುವಿನಲ್ಲಿ ಉತ್ತಮ ಆರಂಭ ಕಂಡಿದೆ. ಕಳೆದ ಎರಡು ಮೂರು ದಿನಗಳಿಂದ ನಾರ್ತ್ ಈಸ್ಟ್ ತಂಡವನ್ನು ಗಮನಿಸುತ್ತಿದ್ದೇನೆ. ತೊಂಬತ್ತು ನಿಮಿಷಗಳ ಆಟದಲ್ಲಿ ಅದೊಂದು ಉತ್ತಮ ತಂಡವಾಗಿ ರೂಪುಗೊಂಡಿದೆ. ಇದರರ್ಥ ನಾವು ಕಠಿಣ ಶ್ರಮ ವಹಿಸಬೇಕಾಗಿದೆ. ಆದರೆ ನಾಳೆಯ ಪಂದ್ಯ 11ರ ಎದುರಾಳಿ 11. ನಾವು ಕೂಡ ಉತ್ತಮವಾಗಿ ಆಡಬಲ್ಲೆವು. ಮೂರು ಅಂಕಗಳೊಂದಿಗೆ ಮನೆ ಸೇರುವುದು ನಮ್ಮ ಗುರಿಯಾಗಿದೆ" ಎಂದು ಕೋಸ್ಟಾ ಹೇಳಿದ್ದಾರೆ.

ಗೋವಾ ವಿರುದ್ಧ 5-0 ಗೋಲುಗಳ ಅಂತರದಲ್ಲಿ ಹೀನಾಯ ಸೋಲನುಭವಿಸಿದ ನಂತರ ಮುಂಬೈ ತಂಡ ಡೆಲ್ಲಿ ಡೈನಮೋಸ್ ಹಾಗೂ ಚೆನ್ನೈಯಿನ್ ಎಫ್ಸಿ ತಂಡದ ವಿರುದ್ಧ ಜಯ ಗಳಿಸಿ ದಿಟ್ಟ ಹೆಜ್ಜೆಯೊಂದಿಗೆ ಚೇತರಿಸಿಕೊಂಡಿತು. ಮೌಡೌ ಸೌಗೌ ಅವರು ಮುಂಬೈ ಪರ ಉತ್ತಮ ರೀತಿಯಲ್ಲಿ ಆಡುತ್ತಿದ್ದು, ನಾರ್ತ್ ಈಸ್ಟ್ ವಿರುದ್ಧವೂ ತಮ್ಮ ಪ್ರದರ್ಶನವನ್ನು ಮುಂದುವರಿಸಿದರೆ ಪರ್ವತಪ್ರದೇಶದ ತಂಡಕ್ಕೆ ಜಯದ ಹಾದಿ ಕಠಿಣವಾಗುವುದು ಸ್ಪಷ್ಟ.

ಐಎಸ್‌ಎಲ್‌: ಜೆಮ್ಷೆಡ್ಪುರ್ ಎಫ್‌ಸಿ vs ಡೆಲ್ಲಿ ಡೈನಮೋಸ್ ಪಂದ್ಯ ಸಮಬಲ ಐಎಸ್‌ಎಲ್‌: ಜೆಮ್ಷೆಡ್ಪುರ್ ಎಫ್‌ಸಿ vs ಡೆಲ್ಲಿ ಡೈನಮೋಸ್ ಪಂದ್ಯ ಸಮಬಲ

ಗಾಯದ ಸಮಸ್ಯೆಯ ಕಾರಣ ಡಿಫೆನ್ಸ್ ವಿಭಾಗದಲ್ಲಿ ನಾರ್ತ್ ಈಸ್ಟ್ ತಂಡ ಗುರ್ವಿಂದರ್ ಸಿಂಗ್ ಅವರ ಸೇವೆಯಿಂದ ವಂಚಿತವಾಗಲಿದೆ. ಆದರೆ ತಂಡದಲ್ಲಿ ಅನುಭವಿ ಆಟಗಾರರಿರುವುದರಿಂದ ಕೋಚ್‌ಗೆ ಇದು ಸಮಸ್ಯೆಯಾಗಿ ಕಾಣುವುದಿಲ್ಲ.

"ನಮ್ಮ ತಂಡದಲ್ಲಿ ಉತ್ತಮ ಆಟಗಾರರಿದ್ದಾರೆ. ಎದುರಾಳಿಗಿಂತ ಒಂದು ಗೋಲು ಹೆಚ್ಚು ಗಳಿಸುವುದು ನಮ್ಮ ಗುರಿ. ನಮ್ಮ ಡಿಫೆನ್ಸ್ ವಿಭಾಗದಲ್ಲಿ ಸುರಕ್ಷತೆ ಕಾಯ್ದುಕೊಳ್ಳಲಿದ್ದೇವೆ. ನಮ್ಮ ಡಿಫೆನ್ಸ್ ವಿಭಾಗ ಸ್ವಲ್ಪ ಶಕ್ತಿಗುಂದಿದೆ ಎಂಬ ಸುದ್ದಿ ಕೇಳಿ ಬಂದಿದೆ. ಆದರೂ ಬೆಂಗಳೂರು ತಂಡದ ನಂತರ ಅತಿ ಕಡಿಮೆ ಗೋಲು ನೀಡಿದ್ದು ನಮ್ಮ ತಂಡ. ನಮ್ಮದು ಉತ್ತಮ ಸಂಘಟಿತ ತಂಡ, ಅದೇ ರೀತಿ ಪ್ರದರ್ಶನವನ್ನು ಮುಂದುವರಿಸಲಿದ್ದೇವೆ ಎಂಬ ನಂಬಿಕೆ ಇದೆ" ಎಂದು ಷಟೋರಿ ಹೇಳಿದ್ದಾರೆ.

ಹಾಲಿ ಚಾಂಪಿಯನ್ ಚೆನ್ನೈಯಿನ್ ತಂಡ ರಕ್ಷಣಾ ಕೋಟೆಯನ್ನು ಮುರಿದು ಜಯ ಗಳಿಸಿರುವ ಮುಂಬೈ ತಂಡವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಅದೇ ರೀತಿ ಪ್ರದರ್ಶನ ಮುಂದುವರಿದರೆ ನಾರ್ತ್ ಈಸ್ಟ್‌ ಮನೆಯಂಗಣದಲ್ಲಿ ಕಠಿಣ ಸವಾಲು ಎದುರಾಗುವುದು ಸ್ಪಷ್ಟ.

Story first published: Friday, November 9, 2018, 10:27 [IST]
Other articles published on Nov 9, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X