ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪ್ರಧಾನಿ ಮೋದಿಗೆ ಫುಟ್ಬಾಲ್ ಜೆರ್ಸಿ ಉಡುಗೊರೆಯೂ, ವಿರೋಧಿಗಳ ಅಣಕವೂ!

FIFA President Gianni infantino gifted Prime Minister Narendra Modi football jersey

ನವದೆಹಲಿ, ಡಿಸೆಂಬರ್ 3: ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ (ಡಿಸೆಂಬರ್ 1) ಫೀಫಾ ಅಧ್ಯಕ್ಷ ಗಿಯಾನಿ ಇನ್ಫ್ಯಾಂಟಿನೊ ಅವರಿಂದ ವಿಶೇಷ ಉಡುಗೊರೆಯೊಂದನ್ನು ಪಡೆದುಕೊಂಡಿದ್ದಾರೆ. ಗಿಯಾನಿ ಅವರು ಮೋದಿ ಅವರಿಗೆ, ಬೆನ್ನ ಮೇಲೆ ಮೋದಿ ಹೆಸರಿರುವ ಫುಟ್ಬಾಲ್ ಜೆರ್ಸಿಯೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

ಆಸೀಸ್ ಟೆಸ್ಟ್: ಕೊಹ್ಲಿ ಬಳಗಕ್ಕೆ 'ಚೆಂಡಿನ ಒರಟುತನದ ಗುಟ್ಟು' ಬಿಚ್ಚಿಟ್ಟ ಸಚಿನ್!ಆಸೀಸ್ ಟೆಸ್ಟ್: ಕೊಹ್ಲಿ ಬಳಗಕ್ಕೆ 'ಚೆಂಡಿನ ಒರಟುತನದ ಗುಟ್ಟು' ಬಿಚ್ಚಿಟ್ಟ ಸಚಿನ್!

ಇನ್ಫ್ಯಾಂಟಿನೊ ಅವರನ್ನು ಮೋದಿ ಶನಿವಾರ (ಡಿಸೆಂಬರ್ 1) ಭೇಟಿಯಾಗಿದ್ದರು. ಜೊತೆಗೆ ಗುರುವಾರ (ನವೆಂಬರ್ 29) ನಡೆದ 'ಯೋಗ ಫಾರ್ ಪೀಸ್' (ಶಾಂತಿಗಾಗಿ ಯೋಗ) ಕಾರ್ಯಕ್ರಮದ ವೇಳೆಯೂ ಫೀಫಾ ಅಧ್ಯಕ್ಷರನ್ನು ಭೇಟಿಯಾಗಿದ್ದ ಮೋದಿ ಫುಟ್ಬಾಲ್ ಕ್ರೀಡೆಯ ಮೂಲಕ ಅರ್ಜೆಂಟೀನಾ ಮತ್ತು ಭಾರತ ಸಂಪರ್ಕಿಸಲು ಹೇಗೆಲ್ಲಾ ಸಹಕಾರಿಯಾಗಿದೆ ಎಂಬುದರ ಬಗ್ಗೆ ಮಾತುಕತೆ ನಡೆಸಿದ್ದರು.

ಕ್ರೀಡೆಗೆ ಸಂಬಂಧಿಸಿದ ಅಧ್ಯಕ್ಷನೊಬ್ಬನನ್ನು ದೇಶದ ಪ್ರಧಾನಿ ಭೇಟಿ ಮಾಡಿದಾಗ ಆ ಖುಷಿಗೆ ಕ್ರೀಡಾಧ್ಯಕ್ಷ ಕ್ರೀಡೆಗೆ ಸಂಬಂಧಿಸಿ ಏನಾದರೂ ಉಡುಗೊರೆ ಕೊಡೋದು ಹೆಚ್ಚು. ಅದರಂತೆ ಗಿಯಾನಿ ಅವರು ಮೋದಿ ಜಿ20 ಎಂದು ಬೆನ್ನಲ್ಲಿ ಪ್ರಿಂಟ್ ಹಾಕಿರುವ ಫುಟ್ಬಾಲ್ ವಿಶೇಷ ಜೆರ್ಸಿಯನ್ನು ಮೋದಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಮಸಾಜರ್ ಗೆ ಗೇಲ್ 'ಗುಪ್ತಾಂಗ ಪ್ರದರ್ಶಿಸಿದ್ರು' ಎಂದ ಮಾಧ್ಯಮಕ್ಕೆ ದಂಡಮಸಾಜರ್ ಗೆ ಗೇಲ್ 'ಗುಪ್ತಾಂಗ ಪ್ರದರ್ಶಿಸಿದ್ರು' ಎಂದ ಮಾಧ್ಯಮಕ್ಕೆ ದಂಡ

ಮೋದಿಗೆ ಜೆರ್ಸಿ ಉಡುಗೊರೆಯಾಗಿ ದೊರೆತ ದಿನದಿಂದಲೇ ಕೆಲ ವಿರೋಧಿಗಳ ಅಣಕವೂ ಶುರುವಾಗಿದೆ. ಕೊಡುಗೆಯಾಗಿ ನೀಡಲಾಗಿರುವ ಜೆರ್ಸಿಯ ಫೋಟೋದಲ್ಲಿ ಜಿ20 ಇರುವಲ್ಲಿ 'ಜಿ' ಬದಲಿಗೆ '4' ಸಂಖ್ಯೆಯನ್ನು ಸೇರಿಸಿ ಎಡಿಟ್ ಮಾಡಿ, ಜಾಲತಾಣಗಳಲ್ಲಿ ಹರಿಯಬಿಟ್ಟು ಅಣಕವಾಡಲಾಗಿದ್ದೂ ಕಂಡು ಬಂದಿದೆ.

ಬೆಲೆಯೇರಿಕೆ, ಆರ್ಥಿಕತೆ ಕುಸಿತ, ನೋಟ್ ಬ್ಯಾನ್, ಸಾವಿರಾರು ಕೋಟಿ ರೂಪಾಯಿ ಸಾಲ ಪಡೆದು ಹಲವಾರು ಮಂದಿ ಪರಾರಿಯಾಗಿರುವ ಪ್ರಕರಣ, ಸರ್ಕಾರಿ ಸಂಸ್ಥೆಗಳನ್ನು ಬದಿಗೊತ್ತಿ ಜಿಯೋ ಸಂಸ್ಥೆಗೆ ಯಥೇಚ್ಛ ಬೆಂಬಲ, ರಫೇಲ್ ಫೇಲ್ ಡೀಲ್ ಆರೋಪ ಇತ್ಯಾದಿ ವಿಚಾರಗಳನ್ನು ಮುಂದಿಟ್ಟು, ಆರೋಪ ಹೊರಿಸಿ ವಿರೋಧಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಣಕವಾಡಿದ್ದಾರೆ. ಆದರೆ ಕ್ರೀಡೆಗೆ ಸಂಬಂಧಿಸಿದ ವಿಚಾರಗಳಲ್ಲಿ ಕಿಡಿಗೇಡಿತನ ಸಲ್ಲ ಎಂದು ವಿರೋದಿಗಳ ನಡೆಗೆ ವ್ಯಾಪಕ ಛೀಮಾರಿಯೂ ವ್ಯಕ್ತವಾಗಿದೆ.

Story first published: Monday, December 3, 2018, 18:45 [IST]
Other articles published on Dec 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X