ವಿಶ್ವಕಪ್: ಕೊಲಂಬಿಯಾ ವಿರುದ್ಧ ಭಾರತಕ್ಕೆ ವೀರೋಚಿತ ಸೋಲು

Posted By:

ನವದೆಹಲಿ, ಅಕ್ಟೋಬರ್ 09 : ಫಿಫಾ ಅಂಡರ್ 17 ವಿಶ್ವಕಪ್ ಪಂದ್ಯಾವಳಿಯಲ್ಲಿ ಚೊಚ್ಚಲ ಬಾರಿಗೆ ಆಡುತ್ತಿರುವ ಭಾರತದ ಫುಟ್ಬಾಲ್ ತಂಡ ತನ್ನ ಎರಡನೇ ಲೀಗ್ ಪಂದ್ಯದಲ್ಲಿ ವೀರೋಚಿತ ಸೋಲು ಕಂಡಿದೆ.

ಗ್ಯಾಲರಿ: ಅಂಡರ್ 17 ವಿಶ್ವಕಪ್ ಕಾಲ್ಚೆಂಡಾಟ

ಕೊಲಂಬಿಯಾ ವಿರುದ್ಧ 2-1 ಅಂತರದಲ್ಲಿ ಸೋಲು ಕಂಡಿರುವ ಬ್ಲೂ ಬಾಯ್ಸ್ ಗಳ ಕನಸು ಭಗ್ನವಾಗಿದೆ. ಮುಂದಿನ ಹಂತಕ್ಕೇರುವುದು ಕಷ್ಟಸಾಧ್ಯ.

FIFA U-17 World Cup: Colombia beat India 2-1 in a thriller; Boys In Blue go down fighting

ಭಾರತದ ಯುವ ಆಟಗಾರರ ತಂಡ ತನ್ನ ಮೊದಲ ಲೀಗ್ ಪಂದ್ಯದಲ್ಲಿ ಯುಎಸ್‌ಎ ವಿರುದ್ಧ 0-3 ಗೋಲುಗಳಿಂದ ಸೋಲು ಕಂಡಿತ್ತು. ಇನ್ನೊಂದೆಡೆ, ಕೊಲಂಬಿಯಾ ಕೂಡಾ ತನ್ನ ಮೊದಲ ಪಂದ್ಯದಲ್ಲಿ ಘಾನಾ ವಿರುದ್ಧ ಸೋಲು ಕಂಡಿತ್ತು. ಹೀಗಾಗಿ ಈ ಪಂದ್ಯ ಕುತೂಹಲ ಕೆರಳಿಸಿತ್ತು.

ನವದೆಹಲಿಯ ನೆಹರೂ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಬಲಿಷ್ಠ ಕೊಲಂಬಿಯಾ ತಂಡದ ಎದುರು ಭಾರತ ತಂಡ ಸಮರ್ಥವಾಗಿ ಕಾದಾಡಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು.

ಪಂದ್ಯದ ಮೊದಲಾರ್ಧ ತೀವ್ರ ಪೈಪೋಟಿಯಿಂದ ಕೂಡಿತ್ತು. ಆದರೆ, ಉಭಯ ತಂಡಗಳು ಯಾವುದೇ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಪಂದ್ಯದ ದ್ವಿತಿಯಾರ್ಧದಲ್ಲಿ ಕೊಲಂಬಿಯಾ ಮೊದಲ ಗೋಲು ಗಳಿಸಿ ಮುನ್ನಡೆ ಸಾಧಿಸಿತು.

ನಂತರ ಭಾರತದ ಪರ ಜಾಕ್ಸನ್‌ ಸಿಂಗ್‌‌‌ ಗೋಲು ಗಳಿಸುವ ಮೂಲಕ 1-1 ಅಂತರದ ಸಮಬಲ ಸಾಧಿಸಿದರು. ಈ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮೊದಲ ಗೋಲು ಗಳಿಸಿತು. ಆದರೆ, ಈ ಖುಷಿ ಹೆಚ್ಚು ಸಮಯ ಉಳಿಯಲಿಲ್ಲ. ಪಂದ್ಯದ ಕೊನೆ ಹಂತದಲ್ಲಿ ಕೊಲಂಬಿಯಾ ಮತ್ತೊಂದು ಗೋಲು ಗಳಿಸಿ ವಿಜಯೋತ್ಸವ ಆಚರಿಸಿತು.

Story first published: Monday, October 9, 2017, 23:40 [IST]
Other articles published on Oct 9, 2017
Please Wait while comments are loading...
POLLS