ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫಿಫಾ ವಿಶ್ವಕಪ್: ಬ್ರೆಜಿಲ್‌ಗೆ ಗಾಯದ ಬರೆ; ಇಬ್ಬರು ಸ್ಟಾರ್ ಆಟಗಾರರು ಗ್ರೂಪ್ ಹಂತದಿಂದ ಔಟ್

FIFA World Cup 2022: Brazil suffers a double injury setback as Neymar and Danilo are ruled out of group stages

ಸರ್ಬಿಯಾ ವಿರುದ್ಧದ ಪಂದ್ಯದಲ್ಲಿ ಬ್ರೆಜಿಲ್ 2-0 ಅಂತರದಿಂದ ಗೆದ್ದು ಬೀಗುವ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭವನ್ನು ಮಾಡಿದೆ. ಆದರೆ ಈ ಗೆಲುವಿನ ಬೆನ್ನಲ್ಲೇ ತಂಡಕ್ಕೆ ಎರಡು ಆಘಾತ ಉಂಟಾಗಿದೆ. ತಂಡದ ಇಬ್ಬರು ಸ್ಟಾರ್ ಆಟಗಾರರು ಗಾಯದ ಕಾರಣದಿಂದಾಗಿ ಈ ಟೂರ್ನಿಯ ಲೀಗ್ ಹಂತದಿಂದ ಹೊರಬಿದ್ದಿದ್ದಾರೆ. ಬ್ರೆಜಿಲ್ ತಂಡದ ನೇಮಾರ್ ಹಾಗೂ ಡ್ಯಾನಿಲೋ ಮೊಣಕಾಲಿನ ಗಾಯದ ಕಾರಣದಿಂದಾಗಿ ಲೀಗ್ ಹಂತದಿಂದ ಹೊರಬಿದ್ದ ಇಬ್ಬರು ಆಟಗಾರರಾಗಿದ್ದಾರೆ.

ಬ್ರೆಜಿಲ್ ತಂಡ ಗ್ರೂಪ್ ಹಂತದಲ್ಲಿ ಇನ್ನು ಎರಡು ಪಂದ್ಯಗಳನ್ನು ಆಡಲಿದೆ. ಸ್ವಿಜರ್ಲ್ಯಾಂಡ್ ಹಾಗು ಕ್ಯಾಮರೂನ್ ವಿರುದ್ಧ ಸೆಣೆಸಾಟ ನಡೆಸಲಿದ್ದು ಈ ಪಂದ್ಯಕ್ಕೆ ನೇಮಾರ್ ಹಾಗೂ ಡ್ಯಾಲಿಲೋ ಅಲಭ್ಯವಾಗಲಿದ್ದಾರೆ. ಸರ್ಬಿಯಾ ವಿರುದ್ಧದ ಪಂದ್ಯದಲ್ಲಿ ಈ ಇಬ್ಬರು ಆಟಗಾರರು ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದರು.

ಚಾಮಿಕಾ ಕರುಣಾರತ್ನೆಗೆ ಒಂದು ವರ್ಷ ಅಮಾನತು ಶಿಕ್ಷೆ ನೀಡಿದ ಶ್ರೀಲಂಕಾ ಕ್ರಿಕೆಟ್ ಮಂಡಳಿಚಾಮಿಕಾ ಕರುಣಾರತ್ನೆಗೆ ಒಂದು ವರ್ಷ ಅಮಾನತು ಶಿಕ್ಷೆ ನೀಡಿದ ಶ್ರೀಲಂಕಾ ಕ್ರಿಕೆಟ್ ಮಂಡಳಿ

ಸರ್ಬಿಯಾ ವಿರುದ್ಧದ ಪಂದ್ಯದ ದ್ವಿತಿಯಾರ್ಧದಲ್ಲಿ ಈ ಇಬ್ಬರು ಆಟಗಾರರು ಕೂಡ ಗಾಯಗೊಂಡಿದ್ದಾರೆ. ಓಡಲು ಸಾಧ್ಯವಾಗದ ಕಾರಣ ನೇಮಾರ್ ಅಂತಿಮ ಹತ್ತು ನಿಮಿಷಗಳಿರುವಾಗ ಪಂದ್ಯದಿಂದ ಹೊರಗುಳಿದರೆ ಬ್ರೆಜಿಲ್‌ನ ರಕ್ಷಣಾ ವಿಭಾಗದ ಆಟಗಾರ ಡ್ಯಾನಿಲೋ ನೋವಿನ ಮಧ್ಯೆಯೂ ಸಂಪೂರ್ಣ ಪಂದ್ಯವನ್ನು ಆಡಿದ್ದರು. ಇದೀಗ ಈ ಇಬ್ಬರು ಆಟಗಾರರು ಕೂಡ ಮುಂದಿನ ಎರಡು ಪಂದ್ಯಗಳಿಂದ ಹೊರಗುಳಿಯಲಿದ್ದು ನಾಕೌಟ್ ಸುತ್ತಿಗೆ ಸಿದ್ಧವಾಗಲಿದ್ದಾರೆ.

ಬ್ರೆಜಿಲ್ ತಂಡದ ಮುಂದಿನ ಗ್ರೂಪ್ ಹಂತದ ಪಂದ್ಯ ಸೋಮವಾರ ಸ್ವಿಜರ್ಲ್ಯಾಂಡ್ ವಿರುದ್ಧ ನಡೆಯಲಿದ್ದು, ಬಳಿಕ ಶುಕ್ರವಾರ ಕ್ಯಾಮರೂನ್ ವಿರುದ್ಧ ಪಂದ್ಯ ನಡೆಯಲಿದೆ. ತಂಡದಲ್ಲಿ ಇಬ್ಬರು ಸ್ಟಾರ್ ಆಟಗಾರರ ಅನುಪಸ್ಥಿತಿಯ ಹೊರತಾಗಿಯೂ ಬ್ರೆಜಿಲ್ ತಂಡ ಈ ಎರಡು ಪಂದ್ಯಗಳನ್ನು ಗೆಲ್ಲುವ ನೆಚ್ಚಿನ ತಂಡವಾಗಿದೆ. ಆರಂಬಿಕ ಪಂದ್ಯದಲ್ಲಿಯೇ ಅದ್ಭುತ ಗೆಲುವು ಸಾಧಿಸಿರುವ ಕಾರಣ ಗ್ರೂಪ್ ಹಂತದಲ್ಲಿ ಅಗ್ರಸ್ಥಾನಿಯಾಗಿ ಮುನ್ನಡೆಯುವ ನಿರೀಕ್ಷೆಯಲ್ಲಿದೆ.

Story first published: Friday, November 25, 2022, 23:19 [IST]
Other articles published on Nov 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X