ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

FIFA World Cup 2022: ಲಿಯೋನೆಲ್ ಮೆಸ್ಸಿ ವಿಶ್ವಕಪ್ ಗೆಲ್ಲುವ ಬಗ್ಗೆ 7 ವರ್ಷಗಳ ಹಿಂದೆ ಟ್ವಿಟ್ ಮಾಡಿದ್ದ ವೈರಲ್!

FIFA World Cup 2022 Final : 7-Year-Old Tweet About Lionel Messi Won Fifa World Cup 2022 Goes Viral

ವಿಶ್ವದ ಜನಪ್ರಿಯ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಫಿಫಾ ವಿಶ್ವಕಪ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಭಾನುವಾರ ಕತಾರ್ ನ ಲುಸೈಲ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ಫ್ರಾನ್ಸ್ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 4-2 ಗೋಲುಗಳ ಜಯ ಸಾಧಿಸುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿದೆ.

36 ವರ್ಷಗಳ ಬಳಿಕ ಅರ್ಜೆಂಟೀನಾ ಫಿಫಾ ವಿಶ್ವಕಪ್ ಗೆದ್ದಿದೆ. 35 ವರ್ಷದ ಲಿಯೋನೆಲ್ ಮೆಸ್ಸಿ ತಮ್ಮ ಕೊನೆಯ ವಿಶ್ವಕಪ್‌ ಟೂರ್ನಿಯಲ್ಲಿ ಕೊನೆಗೂ ಕಪ್ ಎತ್ತಿಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಫೈನಲ್‌ ಪಂದ್ಯದಲ್ಲಿ ಮೆಸ್ಸಿ ಎರಡು ಅದ್ಭುತ ಗೋಲುಗಳನ್ನು ದಾಖಲಿಸಿದರು. ಪೆನಾಲ್ಟಿ ಶೂಟೌಟ್‌ನಲ್ಲಿ ಕೂಡ ಗೋಲು ಗಳಿಸಿದರು.

FIFA World Cup 2022: ವಿಶ್ವಕಪ್ ಇತಿಹಾಸದ ರೋಚಕ ಪಂದ್ಯದಲ್ಲಿ ಗೆದ್ದ ಅರ್ಜೆಂಟೀನಾ, ವಿಶ್ವಕಪ್‌ ಎತ್ತಿಹಿಡಿದ ಲಿಯೋನೆಲ್ ಮೆಸ್ಸಿFIFA World Cup 2022: ವಿಶ್ವಕಪ್ ಇತಿಹಾಸದ ರೋಚಕ ಪಂದ್ಯದಲ್ಲಿ ಗೆದ್ದ ಅರ್ಜೆಂಟೀನಾ, ವಿಶ್ವಕಪ್‌ ಎತ್ತಿಹಿಡಿದ ಲಿಯೋನೆಲ್ ಮೆಸ್ಸಿ

ಫೈನಲ್ ಪಂದ್ಯದ ಆರಂಭಕ್ಕೂ ಮುನ್ನವೇ 7 ವರ್ಷಗಳ ಹಳೆಯ ಟ್ವೀಟ್ ವೈರಲ್ ಆಗಿತ್ತು. ಅರ್ಜೆಂಟೀನಾ ವಿಶ್ವಕಪ್ ಗೆದ್ದ ನಂತರ ಆ ಟ್ವೀಟ್ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಯಾವುದೇ ವಿಶ್ವಕಪ್ ಆರಂಭಕ್ಕೆ ಮುನ್ನ ಅಭಿಮಾನಿಗಳು ತಮ್ಮ ತಂಡ ವಿಶ್ವಕಪ್ ಗೆಲ್ಲುತ್ತದೆ ಎಂದು ನಂಬುವುದು, ಬೆಂಬಲ ನೀಡುವುದು, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವುದು ಸಾಮಾನ್ಯ. ಆದರೆ, 7 ವರ್ಷಗಳ ಹಿಂದೆಯೇ ಟ್ವಿಟರ್ ಬಳಕೆದಾರರೊಬ್ಬರು 2022 ರ ಫಿಫಾ ವಿಶ್ವಕಪ್‌ ಬಗ್ಗೆ ಹೇಳಿದ್ದ ಭವಿಷ್ಯವೊಂದು ನಿಜವಾಗಿದೆ.

FIFA World Cup 2022 Final : 7-Year-Old Tweet About Lionel Messi Won Fifa World Cup 2022 Goes Viral

2015ರಲ್ಲೇ ಭವಿಷ್ಯ ನುಡಿದಿದ್ದ ಟ್ವಿಟರ್ ಬಳಕೆದಾರ

ಜೋಸ್ ಮಿಗುಯೆಲ್ ಪೊಲಾಂಕೊ (@josepolanco10) ಎನ್ನುವ ಹೆಸರಿನ ಟ್ವಿಟರ್ ಬಳಕೆದಾರರೊಬ್ಬರು, ಮಾರ್ಚ್ 21, 2015ರಲ್ಲಿ ಅರ್ಜೆಂಟಿನಾ ವಿಶ್ವಕಪ್ ಗೆಲ್ಲುವ ಬಗ್ಗೆ ಭವಿಷ್ಯ ನುಡಿದಿದ್ದರು. "2022 ಡಿಸೆಂಬರ್ 18 ರಂದು ಲಿಯೋನೆಲ್ ಮೆಸ್ಸಿ ವಿಶ್ವಕಪ್ ಗೆಲ್ಲಲಿದ್ದಾರೆ. ಜಗತ್ತಿನ ಅತ್ಯಂತ ಶ್ರೇಷ್ಠ ಫುಟ್ಬಾಲ್ ಆಟಗಾರ ಎನಿಸಿಕೊಳ್ಳಲಿದ್ದಾರೆ. 7 ವರ್ಷಗಳ ಬಳಿಕ ನಾನು ಹೇಳಿದ್ದನ್ನು ನೆನಪು ಮಾಡಿಕೊಳ್ಳಿ" ಎಂದು ಟ್ವೀಟ್ ಮಾಡಿದ್ದಾರೆ. ಅರ್ಜೆಂಟಿನಾ ವಿಶ್ವಕಪ್ ಗೆಲ್ಲುತ್ತಿದ್ದಂತೆ ಈ ಟ್ವೀಟ್ ಸಾಕಷ್ಟು ವೈರಲ್ ಆಗಿದೆ.

ಫ್ರಾನ್ಸ್ ತಂಡದ ಯುವ ಫುಟ್ಬಾಲ್ ಆಟಗಾರ ಕೈಲಿಯನ್ ಎಂಬಪ್ಪೆ ಈ ಬಾರಿ ವಿಶ್ವಕಪ್‌ನಲ್ಲಿ ಗೋಲ್ಡನ್ ಬೂಟ್ ಗೆದ್ದುಕೊಂಡಿದ್ದಾರೆ. ಲಿಯೋನೆಲ್ ಮೆಸ್ಸಿ ಎರಡನೇ ಬಾರಿ ಗೋಲ್ಡನ್ ಬಾಲ್ ಗೆದ್ದಿದ್ದಾರೆ. ಇದೇ ಮೊದಲ ಬಾರಿಗೆ ಒಬ್ಬ ಆಟಗಾರ ಎರಡು ಬಾರಿ ಗೋಲ್ಡನ್ ಗೆದ್ದ ಸಾಧನೆ ಮಾಡಿದ್ದಾರೆ. ಒಟ್ಟಾರೆ 7 ವರ್ಷಗಳ ಹಿಂದೆ ಮಾಡಿದ್ದ ಟ್ವೀಟ್ ಆಕಸ್ಮಿಕವೋ, ಉದ್ದೇಶಪೂರ್ವಕವೋ ಆದರೆ, ಅದು ನಿಜವಾಗಿರುವುದು ಮಾತ್ರ ಅರ್ಜೆಂಟೀನಾ ಮತ್ತು ಮೆಸ್ಸಿ ಅಭಿಮಾನಿಗಳ ಖುಷಿಯನ್ನು ದ್ವಿಗುಣಗೊಳಿಸಿದೆ.

Story first published: Monday, December 19, 2022, 2:30 [IST]
Other articles published on Dec 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X